ಬೆಂಗಳೂರು: ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಬಿಎಂಟಿಸಿ ಇದೀಗ ಗುಜರಿ ಬಸ್ಗಳಿಗೆ ಹೊಸ ಸ್ವರ್ಶ ಕೊಡಬೇಕು ಅಂತ ಮುಂದಾಗಿದೆ. ಇದಕ್ಕೆ ಸಾರಿಗೆ ಸಚಿವರೇ ಅಸ್ತು ಎಂದಿದ್ದು, ಹೊಸ ಬಸ್ ಖರೀದಿಯಿಂದ ಲಾಸ್ ಆಗಿರೋ ನಿಗಮ ಹಳೆಯ ಬಸ್ಗಳಿಗೆ ಹೊಸ ಟಚ್ ನೀಡೋಕೆ ಮುಂದಾಗಿದ್ದು, ಇಂತಹ ಬಸ್ಗಳಿಗೆ ಹೊಸ ಎಂಜಿನ್ ಅಳವಡಿಸಿ ಓಡಿಸಿದರೆ ನಷ್ಟದಿಂದ ಪಾರಾಗಬಹುದು ಅನ್ನೋ ಲೆಕ್ಕಾಚಾರಕ್ಕೆ ಬದಂತಿದೆ.
ಬಿಎಂಟಿಸಿ ಡಿಪೋಗಳಲ್ಲಿ ಹಾಳಾದ ಸ್ಥಿತಿಯಲ್ಲಿರುವ ಸಾಕಷ್ಟು ಗುಜರಿ ಬಸ್ಗಳಿಗೆ ಎಂಜಿನ್ ಮಾರ್ಪಡಿಸಲು ತೀರ್ಮಾನಿಸಲಾಗಿದೆ. 9 ಲಕ್ಷ ಕಿ.ಮೀ. ಮೈಲೇಜ್ ಕೊಡುತ್ತಿದ್ದರೂ ಅದೇ ಬಸ್ಗಳಿಗೆ ಹೊಸ ಎಂಜಿನ್ ಅಳವಡಿಸಿರೋದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಗುಜರಿಯವರು ಹಳೆಯ ಬಸ್ಗಳನ್ನ ಖರೀದಿಗೆ ನಿರಾಕರಿಸಿದ ಕಾರಣ ಹೊಸ ಎಂಜಿನ್ ಆಳವಡಿಸ್ತಿದ್ದಾರಂತೆ.
ಗುಜರಿ ಬಸ್ಗಳನ್ನು ಓಡಿಸಬಾರದು. ಅದು ಪ್ರಯಾಣಿಕರಿಗೆ ಸುರಕ್ಷಿತ ಅಲ್ಲ ಅನ್ನೋ ಕಾರಣ RTO ನಿಯಮದಂತೆ ಸ್ಕ್ಯಾಫ್ ಮಾಡಬೇಕು. ಆದರೆ, ಇಂಥಾ ಹೊತ್ತಿನಲ್ಲಿ ಮುದುಕಿಗೆ ಶೃಂಗಾರ ಮಾಡಿದ ಹಾಗೆ, ಕೆಟ್ಟು ಮೂಲೆಯಲ್ಲಿ ನಿಂತ ಬಸ್ಗಳಿಗೆ ಹೊಸ ಎಂಜಿನ್ ಹಾಕಿ ಬಸ್ ಓಡಿಸೋದು ಎಷ್ಟರ ಮಟ್ಟಿಗೆ ಸರಿ. ಇದ್ರಿಂದ ನಿಗಮಕ್ಕೆ ಲಾಭ ಬರೋದಿರ್ಲಿ ಇನ್ನಷ್ಟು ನಷ್ಟ ಗ್ಯಾರೆಂಟಿ ಅನ್ನೋ ಅಪಸ್ವರವೂ ಕೇಳಿಬಂದಿದೆ.
ಒಟ್ಟಿನಲ್ಲಿ ಬಿಎಂಟಿಸಿ ಹೊಸ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಹೊಸ ಬಸ್ಗಳೇ ಮೂಲೆ ಸೇರುತ್ತಿವೆ.ಆದ್ರೆ, ಬಿಎಂಟಿಸಿ ನಿರ್ಧಾರದಂತೆ ಗುಜರಿ ಬಸ್ಗಳು ರಸ್ತೆಗಿಳಿದರೆ ಅನಾಹುತ ಗ್ಯಾರೆಂಟಿ.