ತುಮಕೂರು: ಡಾ.ಜಿ.ಪರಮೇಶ್ವರ್ ಮಾಜಿ ಡಿಸಿಎಂ ಹಾಗೆಯೇ ಕೆಪಿಸಿಸಿ ಅಧ್ಯಕ್ಷರಾಗಿ ಸುದೀರ್ಘ ಕೆಲಸ ಮಾಡಿದವರು. ಕಾಂಗ್ರೆಸ್ನ ಹಿರಿಯ ನಾಯಕ, ಅಷ್ಟೇ ಅಲ್ಲದೆ ಕಾಂಗ್ರೆಸ್ ವರಿಷ್ಠರಿಗೆ ಆಪ್ತರಾಗಿದ್ದವರು. ಒಂದು ಕಾಲದಲ್ಲಿ ಕೆಪಿಸಿಸಿ ಸಾರಥ್ಯ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರಮೇಶ್ವರ್, ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ. ಅದರಲ್ಲೂ ತಮ್ಮ ತವರು ಜಿಲ್ಲೆ ತುಮಕೂರಿನಲ್ಲಿ ನಡೆದ ಪಕ್ಷದ ಪ್ರಮುಖ ಕಾರ್ಯಕ್ರಮಗಳಿಗೆ ಗೈರಾಗಿ ಅಸಮಾಧಾನವನ್ನು ನೇರವಾಗಿಯೇ ಹೊರಹಾಕಿದ್ರು.
ತುಮಕೂರು ಜಿಲ್ಲೆಯ ಪ್ರಾಬಲ್ಯಕ್ಕಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮತ್ತು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ರಾಜಣ್ಣ ನಡುವೆ ಮೆಗಾ ಫೈಟ್ ಶುರುವಾಗಿದೆ. ಎಲ್ಲಾ ಕಾರ್ಯಕ್ರಮ, ಸಮಾವೇಶ ಆಯೋಜನೆಗಳಲ್ಲಿ ಕೆ.ಎನ್.ರಾಜಣ್ಣಗೆ ಪ್ರಾತನಿಧ್ಯ ನೀಡಲಾಗುತ್ತಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.. ಪಕ್ಷಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಪಕ್ಷದಲ್ಲಿ ಹಿರಿಯ ನಾಯಕ ನಾನು, ನನ್ನ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿಲ್ಲ. ಪರಿಗಣಿಸುತ್ತಿಲ್ಲ ಎಲ್ಲದಕ್ಕೂ ಕೆ.ಎನ್.ರಾಜಣ್ಣಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ ಎಂದು ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.
ಕೆ.ಎನ್.ರಾಜಣ್ಣನವರ ಮೇಲಿನ ಅಸಮಾಧಾನದಿಂದ ತುಮಕೂರಿನಲ್ಲಿ ಮಡಿವಾಳ, ಅಲ್ಪಸಂಖ್ಯಾತರ ಸಮಾವೇಶದಿಂದ ದೂರು ಉಳಿದ್ದರು. ಶನಿವಾರ ನಡೆದ ಕುರುಬ ಸಮುದಾಯದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರೂ, ಪರಮೇಶ್ವರ್ ಕಾರ್ಯಕ್ರಮದತ್ತ ಮುಖ ಮಾಡಲಿಲ್ಲ.
ಪರಮೇಶ್ವರ್ ಗೈರು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.. ಜಿಲ್ಲೆಗೆ ಸಂಬಂಧಿಸಿ ಹಲವು ವಿಚಾರಗಳನ್ನು ಸಿದ್ದರಾಮಯ್ಯ ಗಮನಕ್ಕೆ ತಂದ್ರು. ಅಲ್ಲದೆ, ಮಡಿವಾಳ, ಕುರುಬ, ಅಲ್ಪಸಂಖ್ಯಾತರ ಸಮಾವೇಶದಿಂದ ದೂರ ಉಳಿದ ಬಗ್ಗೆಯೂ ಸಿದ್ದರಾಮಯ್ಯಗೆ ಸಮಜಾಯಿಷಿ ನೀಡಿದರು ಎನ್ನಲಾಗಿದೆ. ಆದರೆ, ಭೇಟಿ ಬಳಿಕ ಮಾತನಾಡಿದ ಪರಮೇಶ್ವರ್ ನನಗೆ ಯಾರ ಮೇಲೂ ಕೋಪವಿಲ್ಲ ಎನ್ನುವ ಮೂಲಕ ತೇಪೆ ಹಾಕುವ ಕೆಲಸ ಮಾಡಿದ್ರು.
ಒಟ್ಟಿನಲ್ಲಿ ಪರಮೇಶ್ವರ್ ಮೇಲ್ನೋಟಕ್ಕೆ ಯಾವುದೇ ಕೋಪ, ಅಸಮಾಧಾನ ಇಲ್ಲ ಎಂದ್ರು. ಪ್ರಾಬಲ್ಯಕ್ಕಾಗಿ ಫೈಟ್ ಮಾಡುತ್ತಿರುವುದಂತೂ ಸತ್ಯ ಎನ್ನುತ್ತಿವೆ ಮೂಲಗಳು ಇದೇ ವೇಳೆ ಪರಮೇಶ್ವರ್ ಅವರು ಕ್ಷೇತ್ರ ಬದಲಾವಣೆ ಮಾಡ್ತಾರೆ. ನೆಲಮಂಗದಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಗಾಳಿ ಸುದ್ದಿಗೆ ನಾನು ಕೊರಟಗೆರೆಯಲ್ಲಿ ಇರುತ್ತೇನೆ ಎನ್ನುವ ಮೂಲಕ ತಮ್ಮ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.