ಹಾವೇರಿ : ಪಂಚಮಿ ಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಐತಿಹಾಸಿಕ ಪಾದಯಾತ್ರೆ ಮೂಲಕ ಮನವಿ ಮಾಡಿದ್ವಿ ಈ ವಿಚಾರದಲ್ಲಿ ಸರಕಾರ ಗಮನ ಕೊಟ್ಟಿಲ್ಲ ಎಂದು ಹಾವೇರಿಯಲ್ಲಿ ಕೂಡಲಸಂಗಮಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಕೊಟ್ಟ ಮಾತು ತಪ್ಪಿದೆ, ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಬೊಮ್ಮಾಯಿಯವರು ಮೂರು ಸಲ ಮಾತು ಕೊಟ್ಟಿದ್ದರು. ಆದ್ರೆ ಸರಕಾರ ಕೊಟ್ಟ ಮಾತು ಈಡೇರಿಸಿಲ್ಲ. ಸಿಎಂ ಮನೆ ಮುಂದೆ ಹೋರಾಟ ಮಾಡುತ್ತೇವೆ. ಜೂನ್ 27 ರಂದು ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದರು.
ಅದಲ್ಲದೇ, ಬಸವನಗೌಡ ಪಾಟೀಲ ಯತ್ನಾಳ ಅವರೆ ಸಿಎಂ ಮುಂದೆ ಧರಣಿಗೆ ಚಾಲನೆ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಹತ್ತು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಪೂರ್ವಬಾವಿ ಸಬೆ ಮೂಲಕ ಜಾಗೃತಿ ಮೂಡಿಸುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟಕ್ಕೆ ಚಾಲನೆ ನೀಡುತ್ತೇವೆ. ಇನ್ಮೇಲೆ ಮನವಿ ಕೋಡುವುದು ಮುಗಿದ ಅಧ್ಯಾಯ ಬೊಮ್ಮಾಯಿಯವರನ್ನ ತುಂಬಾ ನಂಬಿದ್ದೇವೆ, ಯಾರನ್ನು ಇಷ್ಟೊಂದು ನಂಬಿರಲಿಲ್ಲ ಅವರ ಮಾತಿನಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಹೇಳಿದರು.
ಇನ್ನು, ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಬೃಹತ್ ಹೋರಾಟದಲ್ಲಿ ಬೊಮ್ಮಾಯಿಯವರೆ ಯಾಕೆ ಮೌನವಾಗಿದ್ರಿ, ಮೌನಕ್ಕೆ ಉತ್ತರ ನೀಡಿ ಮೀಸಲಾತಿ ಕೊಡಲು ಆಗದಿದ್ರೆ ಆಗುವುದಿಲ್ಲ ಅಂತಾ ಹೇಳಿ, ಹೊಸ ಸರ್ಕಾರ ಬಂದಾಗ ಮೀಸಲಾತಿ ಕೇಳ್ತಿವಿ. ಸಮಾಜದ ಎಲ್ಲಾ ಶಾಸಕರಿಗೆ ಮನವಿ ಮಾಡಿದ್ವಿ, ಎಲ್ಲರು ಸಹಕಾರ ಕೊಟ್ಟಿದ್ದಾರೆ ಎಂದರು.