ಕೊಪ್ಪಳ : ಪಠ್ಯದಲ್ಲಿ ಬ್ರಾಹ್ಮಿಕರಣ ಮಾಡಲಾಗುವುದು ಎಂಬ ಆರೋಪಕ್ಕೆ ಇಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದರು.
ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆ ಅಮೃತ ಭಾರತಿಗೆ ಕನ್ನಡಾದರತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಮೂರು ಕಡೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕೊಪ್ಪಳ, ಗಂಗಾವತಿ , ಅಳವಂಡಿಯಲ್ಲಿ ಜರುಗುತ್ತಿರುವ ಅಭಿಯಾನಕ್ಕೆ ಇಂದು ಚಾಲನೆ ನೀಡಿದರು.
ಸಿದ್ದರಾಮಯ್ಯನವರು ಪಠ್ಯದಲ್ಲಿ ಬ್ರಾಹ್ಮಿಕರಣ ಮಾಡಲಾಗುವುದು ಎಂಬ ಹೇಳಿಕೆಗೆ ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರೋಪ ಮಾಡಲು ಏನು ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಇನ್ನೂ ನಿನ್ನೆ ಸಿದ್ದರಾಮಯ್ಯ ಆರ್ ಎಸ್ ಎಸ್ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಇಟಲೀಕರಣ ಮಾಡಲು ಹೋಗುತ್ತಿಲ್ಲ. ಇಟಲೀಕರಣ ಮಾಡಲು ಹೊರಟವರು ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಗ್ರಾಮ ಪಂಚಾಯತ್ ಗೊಂದು ಮಾದರಿ ಕನ್ನಡ ಶಾಲೆ ಆರಂಭಿಸಿದ್ದಾರೆ ಎಂದರು.
ಅಷ್ಟೇ ಅಲ್ಲದೇ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯಿಸಿ, ನ್ಯಾಯಲಯ ತೀರ್ಪು ಎಲ್ಲರೂ ಪಾಲಿಸಬೇಕು. ಶಾಲೆ ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಮಾತ್ರ ಅವಕಾಶವಿದೆ. ಇದರಲ್ಲಿ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ ಎಂದು ಆರೋಪಿಸಿದರು.
ಪಠ್ಯದಲ್ಲಿ ಇತಿಹಾಸ ರಾಷ್ಟೀಯತೆ ಇದೆ. ಈಗಾಗಲೇ ಪಠ್ಯ ಪುಸ್ತಕಗಳು ಮುದ್ರಣಗೊಂಡು ಹೊರಬಂದಿವೆ. ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿದೆ. ಈ ಮೊದಲು ಟಿಪ್ಪು ಸುಲ್ತಾನ್, ಭಗತ್ ಸಿಂಗ್, ಬಸವಣ್ಣ ಅವರ ಪಠ್ಯ ತೆಗೆದಿದ್ದಾರೆ ಎಂಬ ಗೊಂದಲ ಮೂಡಿಸಿದರು ಎಂದು ಆಕ್ರೋಶ ಹೊರಹಾಕಿದರು.