ಸ್ಯಾಂಡಲ್ವುಡ್ಗೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸೀತಾಯಣ ಚಿತ್ರದ ಮೂಲಕ ಕನ್ನಡಕ್ಕೊಬ್ಬ ಶೈನಿಂಗ್ ಸ್ಟಾರ್ ಸಿಕ್ಕಿದ್ದಾರೆ. ಯೆಸ್ಚೊಚ್ಚಲ ಸಿನಿಮಾದಲ್ಲೇ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸಿದ್ದಾರೆ ಅಕ್ಷಿತ್. ಹಾಗಾದ್ರೆ, ಜನ ಮೆಚ್ಚಿದ ಸೀತಾಯಣ ಸಿನಿಮಾದ ಕಥೆಯೇನು..? ಜೂನಿಯರ್ ಸುಪ್ರೀಂ ಹೀರೋ ಖದರ್ ಹೇಗಿದೆ ಅಂತೀರಾ..? ಜಸ್ಟ್ ಹ್ಯಾವ್ ಎ ಲುಕ್.
ಚಿತ್ರ: ಸೀತಾಯಣ
ನಿರ್ದೇಶನ: ಪ್ರಭಾಕರ್ ಆರಿಪಾಕ
ನಿರ್ಮಾಣ: ಲಲಿತಾ ರಾಜ್ಯಲಕ್ಷ್ಮಿ
ಸಂಗೀತಾ: ಪದ್ಮನಾಭ್ ಭಾರಧ್ವಜ್
ಕ್ಯಾಮೆರಾ: ದುರ್ಗಪ್ರಸಾದ್ ಕೊಳ್ಳಿ
ತಾರಾಗಣ: ಅಕ್ಷಿತ್ ಶಶಿಕುಮಾರ್, ಅನಹಿತ ಭೂಷಣ್, ವಿಕ್ರಮ್ ಶರ್ಮಾ, ಮಧು ನಂದನ್, ಅಜಯ್ ಘೋಶ್, ಬಿತ್ತರಿ ಸತ್ತಿ ಮುಂತಾದವರು.
ಸೀತಾಯಣ ಸ್ಟೋರಿಲೈನ್
ಟೈಟಲ್ ಇರೋ ತರಹ ಇದೇನು ಪುರಾಣದ ರಾಮ, ಸೀತೆಯ ಕಥೆಯಲ್ಲ. ಲೈಫ್ನಲ್ಲಿ ಅಪ್ಪನ ಆಲದಮರಕ್ಕೆ ಜೋತು ಬೀಳದೆ ತನ್ನದೇ ಸ್ಟಾರ್ಟ್ ಅಪ್ ಬ್ಯುಸಿನೆಸ್ ಮಾಡ್ಬೇಕು ಅನ್ನೋದು ಹೀರೋ ರಾಹುಲ್ನ ಪ್ಲ್ಯಾನ್. ಇದಕ್ಕಾಗಿ ಬ್ಯಾಂಕ್ ಲೋನ್ಗೆ ಅಪ್ಲೇ ಮಾಡ್ತಾನೆ. ಇದ್ರ ಜೊತೆಗೆ ಸೀತಾಗೆ ಮೊದಲ ಲುಕ್ನಲ್ಲೇ ಚಾಕ್ಲೆಟ್ ಬಾಯ್ ರಾಹುಲ್ ಮೇಲೆ ಕ್ರಶ್ ಆಗುತ್ತೆ. ಬ್ಯಾಂಕ್ ಮ್ಯಾನೇಜರ್ ಮಗಳಾದ ಸೀತಾಗೂ, ನಾಯಕನಿಗೂ ಮೂರು ಗಂಟು ಬೀಳೋದೇನೂ ಲೇಟ್ ಆಗಲ್ಲ ಬಿಡಿ. ಎಲ್ಲವೂ ಆಲ್ರೈಟ್ ಅನ್ನೋವಾಗ ಸೀತಾ ಪ್ರಗ್ನೆಂಟ್ ಆಗ್ತಾಳೆ. ಇದರಲ್ಲಿ ಸರ್ಪ್ರೈಸ್ ಏನಿದೆ ಅಂತೀರಾ..? ಕಹಾನಿ ಮೇ ಟ್ವಿಸ್ಟ್ ಅಲ್ಲೇ ಇರೋದು. ಅಪ್ಪ ಆಗೋ ಅದೃಷ್ಠವಿಲ್ಲದ ಹೀರೋ ಗುಡ್ ನ್ಯೂಸ್ ಕೊಟ್ಟಿದ್ದೇಗೆ..? ಒಂದ್ ಕಡೆ ಹೆಂಡತಿ ಮೇಲೆ ಅನುಮಾನ. ಮತ್ತೊಂದ್ಕಡೆ ಆತನ ನ್ಯೂನ್ಯತೆಯ ಮೇಲಿರೋ ಕೋಪ. ಒಟ್ಟಾರೆ, ಈ ಎಲ್ಲಾ ಕನ್ಫ್ಯೂಶನ್ ಬ್ಯಾಂಕಾಕ್ ಭೂಗತ ಲೋಕಕ್ಕೆ ಕರ್ಕೊಂಡು ಹೋಗುತ್ತೆ. ಡ್ರಗ್ಸ್ ಮೇಲೆ ಟ್ರಾವೆಲ್ ಆಗೋ ಕಥೆಗೆ ಪಟಾಯ ನಾಡಲ್ಲಿ ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್ ಸಿಗುತ್ತೆ. ಅದ್ಹೇಗೆ ಅನ್ನೋದನ್ನ ನೀವು ತೆರೆಮೇಲೆಯೇ ನೋಡ್ಬೇಕು.
ಸೀತಾಯಣ ಆರ್ಟಿಸ್ಟ್ ಪರ್ಫಾಮೆನ್ಸ್
ಅಕ್ಷಿತ್ ಶಶಿಕುಮಾರ್. ಸುಪ್ರೀಂ ಹೀರೋ ತನಯ ಅಕ್ಷಿತ್, ಚೊಚ್ಚಲ ಚಿತ್ರದಲ್ಲೇ ಮಸ್ತ್ ಆ್ಯಕ್ಟಿಂಗ್ ಮಾಡಿದ್ದಾರೆ. ತಂದೆಗೆ ತಕ್ಕ ಮಗ ಅನ್ನೋದನ್ನ 100% ಪ್ರೂವ್ ಮಾಡಿದ್ದಾರೆ. ಆ್ಯಕ್ಟಿಂಗ್, ಆ್ಯಕ್ಷನ್ ಸೀಕ್ವೆನ್ಸ್, ಎಮೋಷನ್ಸ್ ಎಲ್ಲಾ ಡಿಪಾರ್ಟ್ಮೆಂಟ್ಗಳಲ್ಲೂ ವ್ಹಾವ್ ಅನಿಸ್ತಾರೆ. ಅಂತೂ ಕನ್ನಡಕ್ಕೊಬ್ಬ ಪ್ರಾಮಿಸಿಂಗ್ ಹೀರೋ ಸಿಕ್ಕಿದ್ದಾರೆ. ಅಕ್ಷಿತ್ಗೆ ಸೀತಾಯಣ ಮೊದಲ ಸಿನಿಮಾ. ಹಾಗಾಗಿ ಚಿತ್ರರಸಿಕರಿಗೆ ಸಿಕ್ಕಾಪಟ್ಟೆ ಕೂತೂಹಲವಿತ್ತು. ಮೊದಲ ಸಿನಿಮಾ ಆಗಿರೋದ್ರಿಂದ, ಸಿಲ್ವರ್ ಸ್ಕ್ರೀನ್ ಮೇಲೆ ಹೇಗೆ ಮ್ಯಾಜಿಕ್ ಮಾಡ್ತಾರೋ ಅನ್ನೋ ಪ್ರಶ್ನೆ ಕಾಡಿತ್ತು. ಆದ್ರೆ, ಅಕ್ಷಿತ್ ಪ್ರತಿ ಫ್ರೇಮಿನಲ್ಲೂ ಸ್ಟಾರ್ ನಟನಂತೆ ಮಿಂಚಿದ್ದಾರೆ. ಹಾವ, ಭಾವ, ಬಾಡಿ ಲಾಂಗ್ವೇಜ್ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಸರಿದೂಗಿಸಿದ್ದಾರೆ.
ನಾಯಕಿಯಾಗಿ ಅನಹಿತ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ಬಬ್ಲಿ ಬಬ್ಲಿಯಾಗಿ ಕಾಣಿಸೋ ಅನಹಿತಗೆ ಇದು ಮೊದಲ ಸಿನಿಮಾ. ಅನಹಿತ ಯಾವ ಸೀನ್ಗೂ ಸರ್ಕಸ್ ಮಾಡಿದ್ದಾರೆ ಅಥ್ವಾ ಸೈಕಲ್ ಹೊಡೆದಿದ್ದಾರೆ ಅನಿಸಲ್ಲ. ಅಷ್ಟು ಲೀಲಾಜಾಲವಾಗಿ ಪ್ರೇಕ್ಷಕನಿಗೆ ಇಷ್ಟವಾಗೋ ರೀತಿ ನಮ್ಮದೇ ಮನೆಯ ಮುದ್ದಿನ ಮಗಳಂತೆ ಕಾಣ್ತಾರೆ.
ಅಕ್ಷಿತ್ಗೆ ಸ್ನೇಹಿತನಾಗಿ ಮಧು ನಂದನ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ಕೊನೆಯವರೆಗೂ ಮಧುನಂದನ್ ಹೀರೋ ಬೆನ್ನಿಗೆ ನಿಲ್ಲುತ್ತಾರೆ. ಗೆಳೆಯನಿಗಾಗಿ ತನ್ನ ಪ್ರೀತಿಯ ಹೆಂಡತಿಯನ್ನೂ ತ್ಯಾಗ ಮಾಡಲು ಮಧುನಂದನ್ ಸಿದ್ಧ. ನಾಯಕಿಯ ತಂದೆಯಾಗಿ ಅಜಯ್ ಘೋಶ್ ರೆಸ್ಪಾನ್ಸಿಬಲ್ ಫಾದರ್ ಪಾತ್ರ. ಜೊತೆಗೆ ಅವಳ ಎಮೋಷನ್ಸ್ಗಳನ್ನು ರೆಸ್ಪೆಕ್ಟ್ ಮಾಡೋ ಪ್ರೀತಿಯ ತಂದೆಯಾಗಿ ಎಲ್ಲರಿಗೂ ಇಷ್ಟವಾಗ್ತಾರೆ.
ಸೀತಾಯಣ ಪ್ಲಸ್ ಪಾಯಿಂಟ್ಸ್ :
- ಚಿತ್ರದ ಥ್ರಿಲ್ಲಿಂಗ್ ಎಲಿಮೆಂಟ್ಸ್
- ಅಕ್ಷಿತ್ ಪ್ರಾಮಿಸಿಂಗ್ ಅಭಿನಯ
- ನೀರಸ ಎನಿಸದ ಕಥೆ
- ಬ್ಯಾಂಕಾಕ್ ಲೊಕೇಷನ್ಸ್
- 5.ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್
- ಕಾಮಿಡಿ ಕಚಗುಳಿ
ಸೀತಾಯಣ ಮೈನಸ್ ಪಾಯಿಂಟ್ಸ್
ಟಾಪ್ ಒನ್ ಸಿನಿಮಾ ಆಗಿದ್ರೂ, ತಪ್ಪು ಹುಡುಕೋದು ಸಿಕ್ಕಾಪಟ್ಟೆ ಸುಲಭದ ಕೆಲಸ ಅಲ್ಲವೇ..? ಆದ್ರೆ, ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ದಿಲ್ ಗೆಲ್ಲೋದು ತಮಾಷೆಯ ಮಾತಲ್ಲ. ಚಿತ್ರದ ಮ್ಯೂಸಿಕ್ ರೀಚ್ ಆಗಿಲ್ಲ. ತಾರಾಗಣ ದೊಡ್ಡ ಮಟ್ಟದಲ್ಲಿದ್ದಿದ್ರೆ ಅಥ್ವಾ ಕನ್ನಡದ ಕಲಾವಿದರೇ ಇದ್ದಿದ್ರೆ, ಗೆಲುವಿನ ಹಾದಿ ಇನ್ನೂ ಸುಲಭವಾಗ್ತಿತ್ತು ಅನ್ನೋದು ನಮ್ಮ ಲೆಕ್ಕಾಚಾರ. ಇಷ್ಟು ಹೊರತುಪಡಿಸಿದ್ರೆ, ವೀಕೆಂಡ್ಗೆ ಒಂದೊಳ್ಳೆ ಸಿನಿಮಾ ನೋಡಬೇಕು ಅನ್ನೋರು ಫ್ಯಾಮಿಲಿ ಜೊತೆ ಕೂತು ನೋಡಬಹುದಾದ ವಂಡರ್ಫುಲ್ ಚಿತ್ರ ಈ ಸೀತಾಯಣ.
ಸೀತಾಯಣ ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 3/5
ಸೀತಾಯಣ ಫೈನಲ್ ಸ್ಟೇಟ್ಮೆಂಟ್
ಸ್ಯಾಂಡಲ್ವುಡ್ ಸ್ಟಾರ್ ಕಿಡ್ಗಳೆಲ್ಲಾ ಅದ್ಧೂರಿ ಚಿತ್ರಗಳ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ರು. ಆದ್ರೆ, ನಮ್ ಸುಪ್ರೀಂ ಹೀರೋ ಅಕ್ಷಿತ್ಕುಮಾರ್ ಸಖತ್ ಪ್ಲ್ಯಾನ್ ಮಾಡಿ, ಗಟ್ಟಿ ಕಥೆಯೊಂದಿಗೆ ಗಾಂಧಿನಗರಕ್ಕೆ ಬಲವಾದ ಪ್ರಯೋಗದಿಂದ ಕಾಲಿಟ್ಟಿದ್ದಾರೆ. ಹೌದು. ಜನರ ನಿರೀಕ್ಷೆ ಸುಳ್ಳಾಗಿಲ್ಲ. ಅಭಿನಯವನ್ನು ಚೆನ್ನಾಗಿ ಕಲಿತು, ಅದ್ಭುತ ಕಲಾವಿದನಾಗಿಯೇ ಅಕ್ಷಿತ್ ಶಶಿಕುಮಾರ್ ಹೊರ ಹೊಮ್ಮಿದ್ದಾರೆ.
ಇಂದಿನ ಯುವಪೀಳಿಗೆ ಡ್ರಗ್ಸ್ಗೆ ಅಡಿಕ್ಟ್ ಆಗಿರೋದು ಹೊಸ ವಿಷ್ಯ ಏನಲ್ಲ. ಈ ಚಿತ್ರದಲ್ಲಿ ಡ್ರಗ್ಸ್ ಬಗ್ಗೆಯೂ ಹೇಳಲಾಗಿದೆ. ಚಿತ್ರದ ಸಸ್ಪೆನ್ಸ್ನ ಕೊನೆಯವರೆಗೂ ಉಳಿಸಿಕೊಂಡಿರೋ ಸದಭಿರುಚಿಯ ಸಿನಿಮಾ ಇದು. ಚಿತ್ರದ ಸಂಭಾಷಣೆ ಹಿತವಾಗಿದೆ. ರೊಮ್ಯಾಂಟಿಕ್ ಸಾಂಗ್ನಲ್ಲಿರೋ ರೋಮ್ಯಾನ್ಸ್ ಸೀನ್ಸ್ಗಳು ಮುಜುಗರ ಅನಿಸೋದಿಲ್ಲ. ಅಕ್ಷಿತ್ ಡೈಲಾಗ್ಸ್ ಹೊಡೀತಿದ್ರೆ ಮಾಸ್ ಹೀರೋ ಆಗಿ ಮಿಂಚ್ತಾರೆ. ಅಮುಲ್ಬೇಬಿ ತರಹ ಕಂಡ್ರೂ ಸೂಪರ್ ಹೀರೋ ತರಹ ಆ್ಯಕ್ಟ್ ಮಾಡಿದ್ದಾರೆ. ಒಟ್ನಲ್ಲಿ ಫುಲ್ ಆಫ್ ಎಂಟರ್ಟೈನ್ಮೆಂಟ್ ಸಿನಿಮಾ ಸೀತಾಯಣ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ