Saturday, November 23, 2024

ರಾಜಧಾನಿಯಲ್ಲಿ ಡೆಂಗ್ಯು ಮಲೇರಿಯಾ ಕೇಸ್​ಗಳ ಸಂಖ್ಯೆ ಹೆಚ್ಚಳ

ಬೆಂಗಳೂರು: ಕೊರೋನಾ ಮಾಹಾಮಾರಿಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಈ‌ ಮಧ್ಯೆ ಸದ್ದಿಲ್ಲದೇ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಹೋಗಿದೆ. ಹೌದು, ನಗರದಲ್ಲಿ ಒಂದು ತಿಂಗಳಿನಿಂದ ಅಕಾಲಿಕ ಮಳೆಯಾಗುತ್ತಿದೆ. ಇದರ ಪರಿಣಾಮವೇ ಎರೆಡು ತಿಂಗಳಿನಿಂದ ನಗರದ ಎಲ್ಲ ವಲಯ ಮಟ್ಟದಲ್ಲೂ ಡೆಂಗ್ಯು ಕೇಸ್ ಗಳ ಸಂಖ್ಯೆ ಏರಿಕೆಯಾಗಿದೆ. ನಗರದಾದ್ಯಂತ ಒಟ್ಟು 2 ಸಾವಿರ ಕೇಸ್ ಗಳು ದಾಖಾಲಾಗಿವೆ.‌ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷವೇ ಕೇಸ್ ಗಳ ಪ್ರಮಾಣ ಏರಿಕೆಯಾಗಿರುವುದು ಹೆಚ್ಚು ಅಂತಂಕ ಮೂಡಿಸುತ್ತಿದೆ.‌ ಯಾಕಂದ್ರೆ ಕಳೆದ ವರ್ಷ 1800 ರಷ್ಟು ಕೇಸ್ ಗಳು ಮಾತ್ರ ದಾಖಾಲಾಗಿದ್ವು.

ಈ ವರ್ಷ 2 ಸಾವಿರದಷ್ಟು ಕೇಸ್ ಗಳ ಸಂಖ್ಯೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಡೆಂಗ್ಯು‌ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯಾತೆಗಳಿದೆ. ಹೀಗಾಗಿ ನಗರದ 8 ವಲಯದಲ್ಲೂ ಡೆಂಗ್ಯು ಹರಡುವುದನ್ನ ನಿಲ್ಲಿಸಲು ಬಿಬಿಎಂಪಿ ಹಲವು ಸಿದ್ದತೆಯನ್ನ‌ ಮಾಡಿಕೊಳ್ಳುತ್ತಿದೆ. ನಗರದ 8 ವಲಯಗಳ‌ ಪೈಕಿ ಈಸ್ಟ್ ಜೋನ್ ನಲ್ಲಿ ಹೆಚ್ಚು ಕೇಸ್ ಗಳು ಕಂಡುಬಂದಿದೆ.

ಮುಂದಿನ ದಿನಗಳಲ್ಲಿ ಈ ಕೇಸ್ ಗಳು ಡಬಲ್ ಆಗಲಿದ್ಯಂತೆ. ಹಾಗಿದ್ರೆ ನಗರದ ವಲಯ ಮಟ್ಟದಲ್ಲಿರುವ ಸಧ್ಯಕ್ಕಿರುವ ಡೆಂಗ್ಯು ಕೇಸ್ ಗಳ ಸಂಖ್ಯೆ ಎಷ್ಟು ಎಂದು ನೋಡೊದಾದ್ರೆ
ಬೊಮ್ಮನಹಳ್ಳಿ ಝೋನ್ – 104 ಪ್ರಕರಣ
ದಾಸರಹಳ್ಳಿ ಝೋನ್ – 38 ಪ್ರಕರಣ
ಈಸ್ಟ್ ಝೋನ್ – 653 ಪ್ರಕರಣ
ಮಹದೇವಪುರ ಝೋನ್ – 342 ಪ್ರಕರಣ
ಆರ್.ಆರ್.ನಗರ ಝೋನ್ – 122 ಪ್ರಕರಣ
ಸೌತ್ ಝೋನ್ – 170 ಪ್ರಕರಣ
ವೆಸ್ಟ್ ಝೋನ್ – 162 ಪ್ರಕರಣ
ಯಲಹಂಕ ಝೋನ್ – 202 ಪ್ರಕರಣ

ಹೀಗಾಗಿ ಈ ಡೆಂಗ್ಯು ಕೇಸ್ ಗಳನ್ನ ತಡೆಗಟ್ಟುವ ಸಲುವಾಗಿ ಬಿಬಿಎಂಪಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, 8 ವಲಯದ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ಬಿಬಿಎಂಪಿ ಸೂಚನೆ ನೀಡಿದೆ. ಅದ್ರಲ್ಲಿ ಆಯಾ ಝೋನ್ ಗಳ ಅಧಿಕಾರಿಗಳು ಶಾಲಾ ಕಾಲೇಜುಗಳ‌ ಬಳಿ ನಿಗಾ ಇಡಬೇಕು. ಶಾಲಾ- ಕಾಲೇಜಿಗಳ ಬಳಿ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿಗಳು ಅಗಾಗ ಶಾಲೆಗಳ‌ ಬಳಿ ಪರೀಶೀಲನೆ ಮಾಡಿ ಶಾಲೆಗಳ ಸುತ್ತಾ- ಮುತ್ತಾ ಲಾರ್ವಿಸೈಡ್ ಹಾಗೂ ಫಾಗ್ ಸಿಂಪಡಣೆ ಮಾಡಬೇಕು.

ಸೊಳ್ಳೆ ಕಡಿತದಿಂದ ಅನಾರೋಗ್ಯದ ಸಮಸ್ಯೆ ಉಂಟಾದ್ರೆ ವೈದೈರ ಬಳಿ ತೋರಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯು ಟೆಸ್ಟಿಂಗ್ ಗಳನ್ನ ಹೆಚ್ಚಳ‌‌ ಮಾಡ್ಬೇಕು ಅಂತ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೂಚನೆ ನೀಡಿದ್ದಾರೆ.

ಒಟ್ನಲ್ಲಿ, ಕೊರೋನಾ ಕಡಿಮೆಯಾಯ್ತು ಎಂದು ನಿಟ್ಟುಸಿರುವ ಬಿಡುವ ಹೊತ್ತಿಗೆ, ಡೆಂಗ್ಯು ಕೇಸ್ ಗಳು ಏರಿಕೆಯಾಗಿರುವುದು ಹೆಚ್ಚು ಆತಂಕ ಮೂಡಿಸುತ್ತಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ಕೊಳಚೆ ನೀರು ನಿಲ್ಲದಂತೆ ನಿಗಾವಹಿಸಬೇಕಾಗಿದೆ.

RELATED ARTICLES

Related Articles

TRENDING ARTICLES