ಬಿಹಾರ: ಪಾಟ್ನಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್, ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದರು.
ನಾವು ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದಾಗ ಕಾಲೇಜಿನಲ್ಲಿ ಒಬ್ಬರೇ ಒಬ್ಬರು ಹುಡುಗಿಯರು ಇರಲಿಲ್ಲ. ಹುಡುಗಿಯರಿಲ್ಲದ ಕಾಲೇಜು ನೋಡಲು ಕೆಟ್ಟದಾಗಿರುತ್ತಿತ್ತು. ಆದ್ರೆ ಈಗಿನ ಪರಿಸ್ಥಿತಿ ಬದಲಾಗಿದೆ. ಎಷ್ಟೊಂದು ಹುಡುಗಿಯರು ಇಂದು ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅದಲ್ಲದೇ, ಇದೇ ಸಂದರ್ಭದಲ್ಲಿ ವರದಕ್ಷಿಣೆ ಪಿಡುಗಿನ ಕುರಿತು ಮಾತನಾಡಿದ ಅವರು, ಮದುವೆಗೆ ವರದಕ್ಷಿಣೆ ತೆಗೆದುಕೊಳ್ಳುವುದು ಅತ್ಯಂತ ನಿಷ್ಪ್ರಯೋಜಕ ನಡೆ. ನೀವು ಮದುವೆಯಾದ್ರೆ ಮಾತ್ರ ಮಕ್ಕಳು ಹುಟ್ಟುತ್ತಾರೆ. ಆದ್ರೆ ಒಬ್ಬ ಪುರುಷ ಬೇರೊಬ್ಬ ಪುರುಷನನ್ನು ಮದುವೆಯಾದ್ರೆ ಏನಾಗುತ್ತದೆ, ಆತ ಮಗುವಿಗೆ ಜನ್ಮ ನೀಡುತ್ತಾನಾ? ಎಂದು ಪ್ರಶ್ನಿಸಿದರು.