ಮೈಸೂರು : ಸಿದ್ದರಾಮಯ್ಯ ಸೂಚಿಸಿದ್ದ ಹೆಸರು ಬಿಟ್ಟು ನಾಗರಾಜ್ ಯಾದವ್ ಹೆಸರು ಘೋಷಣೆ ಮಾಡಿದ್ದರಿಂದ ಹೈಕಮಾಂಡ್ ವಿರುದ್ಧ ಸಿದ್ದರಾಮಯ್ಯ ಪುಲ್ ಗರಂ ಆಗಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದಿನ ಪೂರ್ತಿ ಸಿಡಿಮಿಡಿಯಾಗಿದ್ದ ಸಿದ್ದರಾಮಯ್ಯ, ಅವರ ಜೊತೆ ಯಾರೇ ಮಾತಾಡಿದ್ರು ಖಾರವಾಗಿ ಮಾತಾಡುತ್ತಿದ್ದರು. ಅಷ್ಟೇ ಮಾತ್ರವಲ್ಲ ಅಬ್ದುಲ್ ಜಬ್ದಾರ್ ವಿರುದ್ಧ ಕೆಂಡಾಮಂಡಲವಾಗಿದ್ದರು. ನಾಮಪತ್ರ ವೇಳೆಯಲ್ಲಿ ಅಫಿಡೇವಿಟ್ ಬರುವುದು ತಡವಾಗಿತ್ತು.ಹಾಗಾಗಿ ಇನ್ನು ಎಷ್ಟೋತ್ತು ಕಾಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ, ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದು ಯಾಕೆ ಗೊತ್ತಾ…? ಮೊದಲ ಬಾರಿಗೆ ಸಿದ್ದರಾಮಯ್ಯ ಅಭಿಪ್ರಾಯ ಪರಿಗಣಿಸದ ಹೈಕಮಾಂಡ್. ಯಾಕೆ ಪರಿಗಣಿಸಲ್ಲ ಎಂದ್ರೆ ಹೈಕಮಾಂಡ್ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದ ಸಿದ್ದರಾಮಯ್ಯ…? ಎಸ್.ಆರ್. ಪಾಟೀಲ್ ಗೆ ಟಿಕೆಟ್ ಕೊಡಬೇಕು. ಕೊಡ್ತೇನೆ ಎಂದು ನಾನು ಮಾತು ಕೊಟ್ಟಿದ್ದೇನೆ ಎಂದು ಹೇಳಿದ್ದ ಸುರ್ಜೇವಾಲಾ ಅಭಿಪ್ರಾಯಕ್ಕೆ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಇನ್ನು, ಎಸ್. ಆರ್. ಪಾಟೀಲ್ ಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು. ಟಿಕೆಟ್ ಕೊಟ್ಟರೇ ನಾನು ಬೇರೆ ನಿರ್ಧಾರ ಮಾಡಬೇಕಾಗುತ್ತದೆ ಎಂದು ಸುರ್ಜೇವಾಲಾಗೆ ವಾರ್ನ್ ಮಾಡಿದ್ದ ಅವರು, ಪರಿಷತ್ ಟಿಕೆಟ್ ಗೆ ಎಸ್.ಆರ್. ಪಾಟೀಲ್ ಬದಲಾಗಿ ಎಂ.ಆರ್.ಸೀತಾರಾಮ್ ಹೆಸರು ಸೂಚಿಸಿದ್ದರು. ಆದರೆ ಹೈಕಮಾಂಡ್ ನಡೆಯಿಂದ ಬೇಸರಗೊಂಡ ಅವರು. ಸಿದ್ದರಾಮಯ್ಯ ಸೂಚಿಸಿದ್ದ ಹೆಸರು ಬಿಟ್ಟು ನಾಗರಾಜ್ ಯಾದವ್ ಹೆಸರು ಘೋಷಣೆ ಮಾಡಿದ್ದ ಹೈಕಮಾಂಡ್ ಹೀಗಾಗಿ ಹೈಕಮಾಂಡ್ ಮಟ್ಟದಲ್ಲಿ ನನ್ನ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.