ಬೆಂಗಳೂರು: ಅತ್ತ ಕಾಂಗ್ರೆಸ್ ಬಿಜೆಪಿ ಟಿಕೆಟ್ ಘೋಷಿಸಿದ್ರೂ ಜೆಡಿಎಸ್ ಟಿಕೆಟ್ ಯಾರಿಗೆ ಅನ್ನೊ ಗುಟ್ಟು ಮೊದಲು ಬಿಟ್ಟುಕೊಟ್ಟಿರಲಿಲ್ಲ. ಕೊನೆ ಹಂತದಲ್ಲಿ ಟಿ ಎ ಶರವಣ ಹಾಗೂ ಕೆ ಸಿ ವೀರೇಂದ್ರ ನಡುವೆ ಪೈಪೋಟಿ ಎರ್ಪಟ್ಟಿತ್ತು. ದೇವೇಗೌಡರನ್ನು ಮನವೋಲಿಸುವ ಕೆಲಸವನ್ನು ಇಬ್ಬರು ಅಭ್ಯರ್ಥಿಗಳು ಮಾಡಿದ್ರು. ಇತ್ತ ಜೆಡಿಎಸ್ ಶಾಸಕಾಂಗ ಸಭೆಗೆ ಅಂತಿಮವಾಗಿ ಟಿ ಎ ಶರವಣ ಹೆಸರನ್ನು ಕಳುಹಿಸಿಕೊಟ್ಟರು. ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಆ ಹೆಸರನ್ನು ಘೋಷಿಸಲಾಯ್ತು.ಪಕ್ಷ ಎರಡನೇ ಭಾರಿಗೆ ನನ್ನನ್ನು ಗುರುತಿಸಿದಕ್ಕೆ ಶರವಣ ಧನ್ಯವಾದ ತಿಳಿಸಿದರು. ಹಾಗೇ ಪಕ್ಷದಲ್ಲಿ ಸಿಎಂ ಇಬ್ರಾಹಿಂ ಸೇರಿ ಹಲವಾರು ಮಂದಿ ಆಕಾಂಕ್ಷಿಗಳಿದ್ದರು. ಆದ್ರೆ ಪಕ್ಷ ಮುಂದೆ ಅವರನ್ನ ಶಕ್ತಿ ತುಂಬಿ ಇನ್ನು ಉತ್ತಮ ಜವಾಬ್ದಾರಿ ಕೊಡುತ್ತದೆ ಅಂತ ಎಚ್ ಡಿ ಕುಮಾರಸ್ವಾಮಿ ಹೇಳಿದ್ರು.
ಮೇಲ್ಮನೆ ಚುನಾವಣಾ ಆಖಾಡ ರಂಗೇರಿದೆ. ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕೊನೆಯ ದಿನವಾದ ಇಂದು ನಾಮಿನೇಷನ್ ಫೈಲ್ ಮಾಡಿದ್ದಾರೆ. ತಮ್ಮ ತಮ್ಮ ನಾಯಕರ ಮೂಲಕ ಆಗಮಿಸಿದ ಅಫಿಡವಿಟ್ ಸಲ್ಲಿಸಿದ್ದಾರೆ.
ರಾಜ್ಯ ವಿಧಾನಸಭೆಯಿಂದ ಮೇಲ್ಮನೆಯ ಏಳು ಸ್ಥಾನಗಳಿಗೆ ಚುನಾವಣೆ ಎದುರಾಗಿದೆ. ಕಾಂಗ್ರೆಸ್,ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಅಭ್ಯರ್ಥಿಗಳನ್ನ ಕಣಕ್ಕಿಳಿಸಿವೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ವಿಳಂಬವಾಗಿ ನಿನ್ನೆ ರಾತ್ರಿ ಅಭ್ಯರ್ಥಿಗಳನ್ನ ಘೋಷಿಸಿದ್ರೆ, ಜೆಡಿಎಸ್, ಬಿಜೆಪಿ ಇಂದು ಬೆಳಗ್ಗೆಯವರೆಗೆ ಹೆಸರು ಬಿಡುಗಡೆ ಮಾಡಿರ್ಲಿಲ್ಲ. ಒಂದು ಕಡೆ ಯಾರಿಗೆ ಟಿಕೆಟ್ ಕೊಡ್ತಾರೋ ಎಂಬ ಗೊಂದಲವಿತ್ತು. ಆದ್ರೆ ಬೆಳಗ್ಗೆ ೧೨ ಗಂಟೆಯೊಳಗೆ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಲೀಸ್ಟ್ ಅನ್ನ ಬಿಡುಗಡೆ ಮಾಡಿದ್ವು.
ಇಂದು ನಾಮಿನೇಷನ್ ಫೈಲ್ ಮಾಡೋಕೆ ಕೊನೆಯ ದಿನವಾಗಿತ್ತು. ಆದ್ರೆ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಫೈನಲ್ ಆಗಿರ್ಲಿಲ್ಲ. ಟಿ.ಎ.ಶರವಣ ಹಾಗೂ ದೊಡ್ಡಣ್ಣನವರ ಅಳಿಯ ಉದ್ಯಮಿ ವಿರೇಂದ್ರ ನಡುವೆ ಫೈಪೋಟಿಯಿತ್ತು. ವಿಧಾನಸೌಧದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಶಾಸಕಾಂಗ ಪಕ್ಷದ ಸಭೆ ನಡೆಸಿದ್ರು. ಸಭೆಯಲ್ಲಿ ಚರ್ಚೆಯನ್ನ ಮಾಡಿ ಕೊನೆಗೆ ಶತವಣಗೆ ಟಿಕೆಟ್ ಘೋಷಿಸಲಾಯ್ತು. ನಂತ್ರ ವಿಧಾನಸಭೆ ಕಾರ್ಯದರ್ಶಿಗೆ ಶರವಣ ನಾಮಪತ್ರ ಸಲ್ಲಿಕೆ ಮಾಡಿದ್ರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ಬಂಡೆಪ್ಪ,ಸಾ.ರಾ.ಮಹೇಶ್ ಸೇರಿ ಹಲವು ನಾಯಕರು ಸಾಥ್ ನೀಡಿದ್ರು.
ಇಂದು ಕಾಂಗ್ರೆಸ್ ಅಭ್ಯರ್ಥಿಗಳು ಮೊದಲೇ ನಾಮಪತ್ರ ಸಲ್ಲಿಸಬೇಕಿತ್ತು. ಆದ್ರೆ ಜಬ್ಬಾರ್ ಅಪಿಡವಿಟ್ ಸಿದ್ದಪಡಿಸೋದು ವಿಳಂಬವಾದ ಕಾರಣ ತಡವಾಯ್ತು. ಜೆಡಿಎಸ್ ಅಭ್ಯರ್ಥಿಯ ನಂತ್ರ ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ, ಎಂಬಿಪಿ,ಆರ್.ವಿ.ದೇಶಪಾಂಡೆ ಸಾಥ್ ನೀಡಿದ್ರು.