ರಾಮನಗರ: ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ.ಚನ್ನಪಟ್ಟಣ ತಾಲ್ಲೂಕಿನ ಬೆಂಗಳೂರು- ಮೈಸೂರು ಹೆದ್ದಾರಿಯ ಸಿಲ್ಕ್ ಫಾರಂ ಬಳಿ ಹೆದ್ದಾರಿಯಿಂದ 500 ಮೀಟರ್ ದೂರದಲ್ಲಿ ಜಿಲ್ಲಾ ಆಹಾರ ನಾಗರಿಕ ಸರಬರಾಜು ಇಲಾಖೆ ರಾಗಿ ಖರೀದಿ ಕೇಂದ್ರವನ್ನ ತೆರೆದಿದೆ. ಆದ್ರೆ ಆ ರಾಗಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಹೆದ್ದಾರಿಯಿಂದ ರಾಗಿ ಖರೀದಿಸುವ ಕೇಂದ್ರಕ್ಕೆ ಹೋಗುವ ರಸ್ತೆಯ ಸ್ಥಿತಿ ಹೇಳ ತೀರದ್ದಾಗಿದೆ. ಮೊದಲೇ ಗುಂಡಿಯಿಂದ ಕೂಡಿದ್ದ ಈ ರಸ್ತೆ ಇತ್ತೀಚೆಗೆ ಮಳೆ ಬಿದ್ದ ಪರಿಣಾಮ ಕೆಸರು ಗದ್ದೆಯಾಗಿದೆ.
ರಾಗಿ ಮೂಟೆಗಳನ್ನ ಹೊತ್ತು ತರುವ ಟ್ರ್ಯಾಕ್ಟರ್, ಗೂಡ್ಸ್ ಟೆಂಪೋಗಳು ಕೆಸರು ಗದ್ದೆಯಲ್ಲಿ ಸಿಲುಕಿ ಹೈರಾಣಾಗುತ್ತಿವೆ.ಮಂಡಿ ಉದ್ದ ಗುಂಡಿ ಮೊದಲೇ ಇತ್ತು ಇತ್ತೀಚೆಗೆ ಬಿದ್ದ ಮಳೆಯಿಂದ ಗುಂಡಿ ಇನ್ನೂ ದೊಡ್ಡದಾಗಿ ವಾಹನಗಳು ಸಂಚಾರ ಮಾಡಲು ಕಷ್ಡಕರವಾಗಿದೆ.
ಒಟ್ಟಾರೆ ರೈತರು ಕಷ್ಟ ಪಟ್ಟು ರಾಗಿ ಬೆಳೆದು ಮಾರಾಟ ಮಾಡಲು ಬಂದ್ರೆ, ಮಾರಾಟ ಮಾಡೋದಕ್ಕೂ ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಮಾತ್ರ ವಿಪರ್ಯಾಸವೆ ಸರಿ.