ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರನ್ನು ಮಾಜಿ ಸಿಎಂ ಕುಮಾರಸ್ವಾಮಿ ಪ್ರದಕ್ಷಿಣೆ ಹಾಕುತ್ತಿದ್ದಾರೆ. ವರುಣನ ಆರ್ಭಟಕ್ಕೆ ನಲುಗಿರುವ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಕಣ್ಣಾರೆ ಕಂಡು ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ. ರಾಜರಾಜೇಶ್ವರಿ ನಗರ, ಗೋವಿಂದರಾಜ್ ನಗರ, ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ರು. ಈ ವೇಳೆ ಬಿಜೆಪಿ ವಿರುದ್ಧ ಗುಡುಗಿದ್ರು.
ಇನ್ನೂ ಬೆಂಗಳೂರಿನಲ್ಲಿ ಜನರು ಬದಕುವುದು ಇರಲಿ, ಪ್ರಾಣಿಗಳು ಬದುಕಲಾರದ ಪರಿಸ್ಥಿತಿ ನಿರ್ಮಣವಾಗಿದೆ. ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸಕ್ಕೆ ಹೋಗಿದ್ದಾರೆ. ಹೂಗುವ ಮುನ್ನ ಜನರ ಕಣ್ಣೊರೆಸಲು ಬೆಂಗಳೂರು ವಲಯಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಆದ್ರೆ, ಉಸ್ತುವಾರಿ ಸಚಿವರು ಮಾತ್ರ ತಮ್ಮ ಕ್ಷೇತ್ರ ಅಭಿವೃದ್ಧಿ ಆದ್ರೆ ಸಾಕು ಅಂತ ಕೀಳು ಅಭಿರುಚಿ ಹೊಂದಿದ್ದಾರೆ. ಆದರೂ ಕೂಡ ಅವರ ಕ್ಷೇತ್ರಗಳು ಅಭಿವೃದ್ಧಿ ಆಗಿಲ್ಲ. ಕೋಟ್ಯಂತರ ರೂಪಾಯಿ ಬೆಂಗಳೂರಿಗೆ ಬಿಡುಗಡೆ ಆಗಿದೆ. ಹಾಗಾದ್ರೆ ಬಿಡುಗಡೆ ಮಾಡಿದ ಹಣ ಎಲ್ಲಿ ಹೋಯ್ತು..? ಇದರ ಎಲ್ಲಾ ದಾಖಲೆ ಮುಂದಿನ ದಿನಗಳಲ್ಲಿ ತೆಗೆಯುತ್ತೇನೆ ಅಂತ ಬೆಂಗಳೂರು ಸಚಿವರಿಗೆ ಕುಮಾರಸ್ವಾಮಿ ಎಚ್ಚರಿಕೆ ರವಾನಿಸಿದ್ರು
ಕಳೆದ ಮೂರು ದಿನಗಳಿಂದ ಹಲವು ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ರೌಂಡ್ಸ್ ಹಾಕಿದ್ದಾರೆ. ಮಳೆಯಿಂದ ಬೆಂಗಳೂರು ಹೇಗೆ ನಲುಗಿದೆ ಅಂತ ಕಣ್ಣಾರೆ ಕಂಡಿದ್ದಾರೆ. ಬಿಬಿಎಂಪಿ ಚುನಾವಣೆ ಘೋಷಣೆ ಆಗುವ ಈ ಹೊತ್ತಿನಲ್ಲಿ ಬೆಂಗಳೂರು ಸಚಿವರ ಜಾತಕ ಬಿಚ್ಚಿಡುತ್ತೇನೆ ಅಂತ ಸರ್ಕಾರಕ್ಕೆ ಸಂದೇಶ ಕೂಡ ರವಾನಿಸಿದ್ದಾರೆ. ಕುಮಾರಸ್ವಾಮಿ ಎಚ್ಚರಿಕೆ ಮತ್ತು ರೌಂಡ್‌ನಿಂದ ಇನ್ನಾದರೂ ಬಿಬಿಎಂಪಿ ಅಲರ್ಟ್ ಆಗುತ್ತಾ ಅಂತ ಕಾದು ನೋಡಬೇಕು.