Saturday, May 4, 2024

9ನೇ ಬಾರಿ ದೆಹಲಿಗೆ ತೆರಳಿದ್ರೂ ಸಿಎಂಗೆ ಸಿಗಲಿಲ್ಲ ವರಿಷ್ಠರು..!

ನವದೆಹಲಿ : ಸದ್ಯ ರಾಜ್ಯದಲ್ಲಿ ರಾಜ್ಯಸಭಾ ಚುನಾವಣೆ, ಪರಿಷತ್ ಎಲೆಕ್ಷನ್ ಮತ್ತು ಯಾವ ಕ್ಷಣದಲ್ಲಿ ಬೇಕಾದ್ರೂ ಎದುರಾಗಬಹುದು. ಪ್ರಮುಖ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಸಿಎಂ ಬೊಮ್ಮಾಯಿ ದೆಹಲಿಗೆ ಹೋಗಿದ್ದರು. ಚುನಾವಣೆಗೆ ಅಭ್ಯರ್ಥಿಗಳ ಫೈನಲ್‌ ಹಾಗೂ ಸಂಪುಟ ಕುರಿತು ಚರ್ಚೆ ಮಾಡಲು ಹೋಗಿ, ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಸ್‌ ಆಗಿದ್ದಾರೆ. ಈ ವಿಚಾರ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.

ಎದ್ನೋ ಬಿದ್ನೋ ಅಂತ ಸಿಎಂ ಸಾಹೇಬ್ರು ಹೈಕಮಾಂಡ್‌ ಬುಲಾವ್ ಅಂತ ದೆಹಲಿಗೆ ತೆರಳಿದ್ರು. ರಾತ್ರಿ 11 ಗಂಟೆವರೆಗೂ ಕಾದು ಕಾದು ಸುಸ್ತಾದ್ರು. ಕೊನೆಗೆ ರಾತ್ರಿ 11-30 ಆದ್ರೂ ಚಾಣಕ್ಯನ ಸಮ್ಮತಿ ಸಿಗಲೇ ಇಲ್ಲ. ಆದ್ರೆ, ದೂರವಾಣಿ ಮೂಲಕ ಕರೆ ಮಾಡಿದ ಅಮಿತ್ ಶಾ ಸದ್ಯ ನೀವು ರಾಜ್ಯಕ್ಕೆ ತೆರಳಿ ಮಳೆಯಿಂದ ಹಾನಿಗೊಳಗಾಗಿರೋ ಜಿಲ್ಲೆಗೆಳಿಗೆ ಭೇಟಿ ನೀಡುವಂತೆ ಸೂಚಿಸಿದ್ರು.

ಇನ್ನು ದಾವೋಸ್ ಪ್ರವಾಸದ ಬಗ್ಗೆಯೂ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟವಾಗಿಲ್ಲ. ಸದ್ಯ ನೀವು ರಾಜ್ಯಕ್ಕೆ ತೆರಳಿ, ದಾವೋಸ್ ಬಗ್ಗೆ ನಾವು ತಿಳಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸ್ವತಃ ಬೊಮ್ಮಾಯಿಯವರೇ ಹೇಳಿದ್ರು. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಹಾಗಾದ್ರೆ ಸಿಎಂ ಬೊಮ್ಮಾಯಿಗೆ ದಾವೋಸ್‌ ಪ್ರವಾಸಕ್ಕೆ ಅನುಮತಿ ಸಿಗೋದು ನಿಗೂಢವಾಗಿಯೇ ಉಳಿದಿದ್ದೆ.

ಆದ್ರೆ, ಸಿಎಂರ ಈ ನಡೆ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ. ಯಾಕೆಂದರೆ ಒಂದು ಕಡೆ ದಾವೋಸ್ ಪ್ರವಾಸದ ಅನುಮಾನ ಹುಟ್ಟಿದೆ. ಮತ್ತೊಂದು ಕಡೆ ದೆಹಲಿಗೆ ತೆರಳಿದ್ರೂ ವರಿಷ್ಠರಿಂದ ಭೇಟಿಗೆ ಅವಕಾಶ ಸಿಗ್ತಾ ಇಲ್ಲ.. ಹೀಗಾಗಿ ಸಿಎಂ ಕುರಿತು ವರಿಷ್ಠರ ಒಲವು ಯಾವ ರೀತಿಯದ್ದು ಅನ್ನೋದು ಚರ್ಚೆಗೆ ಕಾರಣವಾಗಿದೆ. ಜೊತೆಗೆ, ನಾಯಕತ್ವ ಬದಲಾವಣೆಗೆ ಸಿಎಂ ನಡೆಯೇ ಇದೀಗ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES