ವಿಜಯಪುರ: 21 ಬಾಣಂತಿಯರ ಹೊಲಿಗೆ ಬಿಚ್ಚಿತ್ತು ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ ಎಂದು ಉಪಲೋಕಾಯುಕ್ತ ಬಿ ಎಸ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನಂತರ ಬಳಿಕ ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಹೊಲಿಗೆ ಬಿಚ್ಚಿದ್ದ ಕೇಸ್ ರಾಜ್ಯದ ತುಂಬೆಲ್ಲ ಸುದ್ದಿಯಾಗಿತ್ತು. ಇದು ನನ್ನ ಜಿಲ್ಲೆಯಾದ್ರಿಂದ ನನಗೂ ಬೇಜಾರಾಯ್ತು. ಘಟನೆಗೆ ಕಾರಣವೇನು ಅನ್ನೋದರ ಬಗ್ಗೆ ಪರಿಶೀಲಿಸಲು ಬಂದಿದ್ದೆ. 21 ಬಾಣಂತಿಯರ ಹೊಲಿಗೆ ಬಿಚ್ಚಿತ್ತು ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ ಆಗಬಾರದ ಘಟನೆ ಆಗಿದೆ ಎಂದು ಹೇಳಿದರು.
ಅದುವಲ್ಲದೇ, ಈಗಾಗಲೇ ಡಿಸಿಯವರು ರಿಪೋರ್ಟ್ ಡಾಟಾ ಕಲೇಕ್ಟ್ ಮಾಡಿದ್ದಾರೆ. ಆ ರಿಪೋರ್ಟ್ ಬಗ್ಗೆಯೂ ಚರ್ಚೆ ಮಾಡ್ತೀನಿ. ನಾನು ಭೇಟಿ ವೇಳೆ ಕೆಲ ಸೂಚನೆ ಕೊಟ್ಟಿದ್ದೇನೆ. ಆರು ತಿಂಗಳ ಹಿಂದಿನಿಂದ ದಾಖಲೆ ಕಲೆಕ್ಟ್ ಮಾಡಿ. ಈಗಿನಿಂದ ಹಿಂದಿನ ಆರು ತಿಂಗಳ ಇನ್ಫೆಕ್ಷನ್ ರೇಟ್ ಏನಿತ್ತು. ಪ್ರತಿ ತಿಂಗಳು ಎಷ್ಟು ಸರ್ಜರಿ ಆಗುತ್ತಿದ್ದವು. ಅದರಲ್ಲಿ ಎಷ್ಟು ಇನ್ಫೆಕ್ಷನ್ ಆಗ್ತಿತ್ತು. ಇನ್ಫೆಕ್ಷನ್ ನೂರಕ್ಕೆ ನೂರು ನಾವು ಮಾಡಬಾರದು. ಏನು ಇನ್ಫೆಕ್ಷನ್ ಆಗಬಾರದು ಅಂತ ಪ್ರಯತ್ನಿಸಿದ್ರೂ ಎಲ್ಲೋ ಒಂದ್ಕಡೆ ಆಗುತ್ತೆ ಎಂದರು.
ಇನ್ನು, ಹಿಂದಿನ ತಿಂಗಳಲ್ಲಿ ಒಮ್ಮೆಲೆ 21 ಕೇಸ್ ಇನ್ಫೆಕ್ಷನ್ ಯಾಕಾಯ್ತು,ಕಾರಣವೇನು. ಯಾರಿಂದ ಆಯ್ತು ಯಾಕಾಯ್ತು ಅವೈಡ್ ಮಾಡ್ಬುಹುದಾಗಿತ್ತು, ಯಾಕೆ ಮಾಡ್ಲಿಲ್ಲ. ಮುಂದೆ ಆಗಲಾರದಂತೆ ಏನು ಕ್ರಮ ತಗೊತಿರಿ. ಈ ವಿಷಯವಾಗಿ ನಾನು ಒಂದು ರಿಪೋರ್ಟ್ ಕೇಳಿದ್ದೀನಿ. ನಾವು ಒಂದು ಈ ವಿಚಾರವಾಗಿ ಕೇಸ್ ದಾಖಲಿಸ್ತೀವಿ. ಇದೊಂದೇ ಜಿಲ್ಲಾಸ್ಪತ್ರೆಯಲ್ಲ, ಬೇರೆ ಬೇರೆ ಜಿಲ್ಲಾಸ್ಪತ್ರೆ, ಆಸ್ಪತ್ರೆಯಲ್ಲಿ ಇದು ಆಗಬಾರದು. ಇನ್ಫೆಕ್ಷನ್ ಆಗಿ, ಕೀವಾಗಿ, ನೋವು, ಮಗುವಿಗೆ ಹಾಲುಣಿಸಲು ತೊಂದ್ರೆ ಜೊತೆಗೆ ಬಾಣಂತಿಯರೊಂದಿಗೆ ಇರುವವರ ಸಮಯ ವ್ಯರ್ಥವಾಗುತ್ತದೆ. ಬಡವರಿಗೆ ತೊಂದರೆ ಆಗುತ್ತದೆ. ಇದು ಮರುಕಳಿಸಬಾರದು,ಇದಕ್ಕೆ ಫುಲ್ ಸ್ಟಾಪ್ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.