ಬೆಂಗಳೂರು : ಸಿಟಿ ಸುತ್ತಿ ಆರೋಗ್ಯ ಸುಧಾರಿಸಿಕೊಳ್ಳಲಿ ಎಂಬ ಸಚಿವ ವಿ.ಸೋಮಣ್ಣ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮಳೆಯ ಅವಾಂತರದಿಂದ ಜನರ ಜೀವನ ಅಸ್ತವ್ಯಸ್ಥಗೊಂಡ ಹಿನ್ನೆಲೆ ನಿನ್ನೆಯಿಂದ ಹೆಚ್ಡಿಕೆ ಅವರು ನಗರದಲ್ಲಿ ಸುತ್ತಾಡಿ ಜನರ ಕಷ್ಟಗಳನ್ನು ಕೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಆಕಸ್ಮಿಕವಾಗಿ ಸಿಎಂ ಆಗಿದ್ದೆ. ಆಗ ಮೆಟ್ರೋ ಕಂಟ್ರಾಕ್ಟರ್ ಮುಖ ನೋಡದೇ ದುಡ್ಡು ಕೊಟ್ಟಿದ್ದೇನೆ. ನನ್ನ ಬಗ್ಗೆ ಲಘುವಾಗಿ ಮಾತನಾಡಿದರೆ ಹೇಳೋಕೆ ಬಹಳ ಇದೆ ಎಂದು ಖಾರವಾಗಿ ಹೇಳಿದರು.
ಇನ್ನು ನೀವು ಆವಾಗ ಎಂಎಲ್ ಎ ಆಗಿದ್ರೋ ಏನು ಗೊತ್ತಿಲ್ಲ. ಹೌದು ಕಾಂಗ್ರೆಸ್ mla ಆಗಿರಬೇಕು ಆಗ ನಿಮ್ಮಿಂದ ಏನು ಕೇಳಿಲ್ಲ. ನೀವು ಐದು ವರ್ಷ ಬಿಜೆಪಿ ಸರ್ಕಾರದಲ್ಲಿ ತಿಂದು ತೇಗಿದ್ದೀರಾ, ಹಿಟಾಜಿಯಲ್ಲೇ ಬಾಜಿಕೊಂಡು ತಿಂದ್ರಿ. ರಾಜಕಾಲುವೆ ಹೆಸರಲ್ಲೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದೀರಾ, ಹೀಗಾಗಿ ಸೋಮಣ್ಣನವರೇ ನಿಮ್ಮಿಂದ ಬೆಂಗಳೂರು ಬಗ್ಗೆ ತಿಳಿದುಕೊಳ್ಳಬೇಕಿಲ್ಲ ಎಂದರು.
ನಾನು ಜನರ ಸಮಸ್ಯೆ ಬಗ್ಗೆ ಕೇಳ್ತಾ ಇದ್ದೇನೆ. ಬೆಂಗಳೂರು ಸ್ಮಿಮ್ಮಿಂಗ್ ಪೂಲ್ ಆಗಿದೆ.ಅದರ ಬಗ್ಗೆ ಚಿಂತೆ ಮಾಡಿ ,ನಮ್ಮ ಆರೋಗ್ಯದ ಬಗ್ಗೆ ನಿಮಗ್ಯಾಕೆ ಚಿಂತೆ. ದುಡ್ಡಿನ ಮತ್ತು ಹಾಗೆ ಮಾತಾಡಿಸ್ತಿದೆ. ಮೋದಿ ಹೆಸರಲ್ಲಿ ಗೆಲ್ಲಬಹದು ಎಂದು ಅನ್ಕೊಂಡಿದ್ದೀರಾ? ದುಡ್ಡು ಹೊಡೆದಿರುವುದು ಸಾಕು ಎಂದು ತಿರುಗೇಟು ನೀಡಿದರು.
ನನಗೆ ಬೆಂಗಳೂರು ಬಗ್ಗೆ ಸವಾಲ್ ಇದೆ.ಈಗ ಬೆಂಗಳೂರು ಬಗ್ಗೆ ಹೊಸ ಪ್ರಣಾಳಿಕೆ ಬಿಡುಗಡೆ ಮಾಡ್ತಾರಂತೆ. ಐದು ವರ್ಷ ಏನ್ ಮಾಡಿದ್ರಿ..? ಬೆಂಗಳೂರು ಅಭಿವೃದ್ಧಿ ಬಗ್ಗೆ ನನಗೆ ಗೊತ್ತಿದೆ. ನನ್ನ ಬಗ್ಗೆ ಲಘುವಾಗಿ ಚರ್ಚೆ ಮಾಡ್ಬೇಡಿ. ಕಾಂಗ್ರೆಸ್ ಮುಖಂಡ ಕಾಂಪೌಂಡ್ ಹಾಕಿ ಸಮಸ್ಯೆ ಆಗಿದೆ ಅದನ್ನು ತೆಗೆಸ್ತೀರಾ..? ಎಂದರು.
ಇನ್ನು ನಮ್ಮಲ್ಲಿ ಟೀ ಮಾರುವವರಿಗೆ ಟಿಕೆಟ್ ಕೊಡ್ತಾರೆ ಎಂಬ ಸಚಿವ ಆರ್ ಅಶೋಕ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವ ಟೀ ಮಾರೋನಿಗೆ ಟಿಕೆಟ್ ಕೊಡ್ತಾರೆ, ಹನುಮಂತನ ಬಾಲವೇ ಇದೆ. ಹಲೋ ಕಂದಾಯ ಸಚಿವರೇ ಅಂದಾಕ್ಷಣ ಮನೆ ಬಾಗಿಲಿಗೆ ಪಾಣಿಗಳು ಬರ್ತಾವಂತೆ ? ಮೋದಿ ಟೀ ಮಾರ್ತಾರೆ ಅಂತಾರೆ ಆದರೆ, ಅದನ್ನು ಪ್ರಧಾನಿ ಆದ್ಮೇಲೆ ಹೇಳ್ತಿದ್ದಾರೆ ಇದು ನಿಜವೋ ಗೊತ್ತಿಲ್ಲ ? ಎಂದು ವ್ಯಂಗ್ಯವಾಡಿದರು.
ನಮ್ಮಲ್ಲಿ ಟೀ ಮಾರದಿರುವವರು ಇಲ್ಲದೆ ಇರಬಹುದು. ಆದರೆ, ಹೊಲದಲ್ಲಿ ಬೆವರು ಸುರಿಸಿದವರು ಇದ್ದಾರೆ ಎಂದು ಟಾಂಗ್ ನೀಡಿದರು.