ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಮುಹೂರ್ತವೇ ಕೂಡಿ ಬರ್ತಿಲ್. ಸಿಎಂ ಬೊಮ್ಮಾಯಿ ದೆಹಲಿ ದಂಡಯಾತ್ರೆ ಕೈಗೊಂಡ್ರೂ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಡ್ತಿಲ್ಲ. ಇನ್ನು, ನಾಯಕತ್ವ ಬದಲಾವಣೆ ಬಗ್ಗೆಯೂ ತೀರ್ಮಾನ ಕೈಗೊಳ್ಳಲು ವರಿಷ್ಠರು ಹಿಂದೇಟಾಕ್ತಿದ್ದಾರೆ. ಈ ಎಲ್ಲಾ ಬೆಳವಣಿಗಳು ರಾಜ್ಯಸಭಾ ಹಾಗೂ ವಿಧಾನಪರಿಷತ್ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ತಟ್ಟವಾಗಿದೆ. ಮುಖ್ಯಮಂತ್ರಿ ಬೆಂಬಲಿಗರು, ಸಚಿವ ಸ್ಥಾನ ವಂಚಿತರು, ಅಸಮಾಧಾನಿತ ಶಾಸಕರು ಚುನಾವಣೆಯಲ್ಲಿ ಕೈ ಕೊಡುವ ಭೀತಿ ಶುರುವಾಗಿದೆ.
ವಿಧಾನಪರಿಷತ್ ನಾಲ್ಕು ಸ್ಥಾನ, ರಾಜ್ಯಸಭೆಯ ಎರಡು ಸ್ಥಾನ, ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವ ಆತಂಕ ಬಿಜೆಪಿ ನಾಯಕರಿಗೆ ಭಯ ಹುಟ್ಟಿಸಿದೆ. ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಹೈಕಮಾಂಡ್ ಎದುರಾಗಿದೆ. ಹೀಗಾಗಿ
ತಕ್ಷಣಕ್ಕೆ ಯಾವುದೇ ತೀರ್ಮಾನ ಕೈಗೊಳ್ಳದಂತೆ ಹೈಕಮಾಂಡ್ ಮೇಲೆ ರಾಜ್ಯ ನಾಯಕರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ರಾಜ್ಯಸಭೆ ಚುನಾವಣೆ ತನಕ ಗೊಂದಲದಲ್ಲೇ ಮುಂದುವರಿಯಲಿದೆ ಎನ್ನಲಾಗಿದೆ.
ಇನ್ನು, ಸಚಿವರು ಸಹ ಒಬ್ಬೊಬ್ಬರೇ ದೆಹಲಿ ದಂಡಯಾತ್ರೆ ಆರಂಭಿಸಿದ್ದಾರೆ.. ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕಮಾಂಡ್ ಕರೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಸಚಿವ ಮುರುಗೇಶ್ ನಿರಾಣಿ ದೆಹಲಿ ಭೇಟಿ ಕುತೂಹಲ ಮೂಡಿಸಿದೆ. ಇನ್ನು, ಸಚಿವ ಸುಧಾಕರ್ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಸಂಪುಟ ಪುನಾರಚನೆ ಬೇಡವೆಂದು ಕೆಲ ಸಚಿವರು ಪಟ್ಟು ಹಿಡಿದಿದ್ರೆ. ಕೆಲವರು ಸಂಪುಟ ಪುನಾರಚನೆಗೆ ಒತ್ತಾಯಿಸ್ತಿದ್ದಾರೆ. ಆದ್ರೆ, ಹೈಕಮಾಂಡ್ ತೀರ್ಮಾನವೇ ಏನು ಎಂಬುದೇ ಸಿಎಂಗೆ ಚಿಂತೆಯಾಗಿದೆ.