ನೇಪಾಳ : ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ತೆರಳಿದರು. ಮೋದಿಯನ್ನು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಆತ್ಮೀಯವಾಗಿ ಬರಮಾಡಿಕೊಂಡ್ರು. ಬಳಿಕ ಮಾಯಾ ದೇವಿ ದೇಗುಲಕ್ಕೆ ತೆರಳಿದ ಮೋದಿ ಪ್ರಾರ್ಥನೆ ಸಲ್ಲಿಸಿದ್ರು.
ಲುಂಬಿನಿ ಮಠದ ಆವರಣದಲ್ಲಿ ಅಂತರಾಷ್ಟ್ರೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಿದರು. ಭಾರತವು ವಿಶ್ವದ ಬೌದ್ಧಧರ್ಮದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಆದರೆ ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಪ್ರಮುಖ ಕೇಂದ್ರ ಇರಲಿಲ್ಲ. ಇದೀಗ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಈ ಕೊರಗನ್ನು ನೀಗಿಸಲಿದೆ.
ಬುದ್ಧನ ಜನ್ಮಸ್ಥಳ ಲುಂಬಿನಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ನಮ್ಮ ಶ್ರೀರಾಮನ ಜೊತೆಗೆ ಅವಿನಾಭವ ಸಂಬಂಧವಿರುವ ರಾಷ್ಟ್ರ ನೇಪಾಳ. ನೇಪಾಳವಿಲ್ಲದೆ ನಮ್ಮ ಶ್ರೀರಾಮ ಅಪೂರ್ಣ. ಭಾರತದಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಇದು ನೇಪಾಳ ಜನತೆಗೂ ಅತೀವ ಸಂತಸ ನೀಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಮೋದಿ ಹೇಳಿದರು.
ಥೈಲ್ಯಾಂಡ್, ಕೆನಡಾ, ಕಾಂಬೋಡಿಯಾ, ಮ್ಯಾನ್ಮಾರ್, ಶ್ರೀಲಂಕಾ, ಸಿಂಗಾಪುರ್, ಫ್ರಾನ್ಸ್, ಜರ್ಮನಿ, ಜಪಾನ್, ವಿಯೆಟ್ನಾಂ, ಆಸ್ಟ್ರಿಯಾ, ಚೀನಾ, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ನಂತಹ ದೇಶಗಳು ಸನ್ಯಾಸಿಗಳ ವಲಯದಲ್ಲಿನ ಯೋಜನೆಗಳು ಲುಂಬಿನಿಯ್ಲಲಿ ತಲೆ ಎತ್ತಲಿರುವ ನೂತನ ಕೇಂದ್ರಗಳಿಂದ ಪ್ರತಿನಿಧಿಸಲ್ಪಡುತ್ತವೆ. ನೇಪಾಳ ಸರ್ಕಾರದ ಲುಂಬಿನಿ ಮಾಸ್ಟರ್ ಪ್ಲಾನ್ ಅಡಿಯಲ್ಲಿ, 1978 ರಲ್ಲಿ ಅನುಮೋದಿಸಲಾಗಿದೆ, ಲುಂಬಿನಿ ಮೊನಾಸ್ಟಿಕ್ ವಲಯವು ಬೌದ್ಧ ಮಠಗಳು ಮತ್ತು ವಿವಿಧ ಪಂಗಡಗಳು ಮತ್ತು ದೇಶಗಳ ಯೋಜನೆಗಳನ್ನು ಹೊಂದಿರುವ ಸ್ಥಳವಾಗಿ ಅಸ್ತಿತ್ವಕ್ಕೆ ಬಂದಿತು. ಕಳೆದ ಮೂರು ದಶಕಗಳಲ್ಲಿ ಲುಂಬಿನಿಯಲ್ಲಿ ಕೇಂದ್ರ ನಿರ್ಮಾಣ ಕಾರ್ಯ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ನಿರ್ಮಾಣಕ್ಕೆ ಮಹತ್ವದ ಮಾತುಕತೆ ನಡೆಸಿ, ಎದುರಾಗಿದ್ದ ಹಲವು ಸವಾಲುಗಳನ್ನು ನಿವಾರಿಸಲಾಯಿತು. ಇದೀಗ ಕೇಂದ್ರ ನಿರ್ಮಾಣ ಕಾರ್ಯ ಆರಂಭಗೊಂಡಿದೆ.
ಒಟ್ನಲ್ಲಿ, ಭಾರತದೊಂದಿಗೆ ನೇಪಾಳ ಸಂಬಂಧ ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿ ಮತ್ತಷ್ಟು ಬೆಸುಗೆ ಬೆಸೆದಿದ್ದಾರೆ. ಆರ್ಥಿಕವಾಗಿ, ಸಮಾಮಾಜಿಕವಾಗಿ, ಭೌಗೋಳಿಕವಾಗಿ ಮಿತ್ರರಾಷ್ಟ್ರ ನಮ್ಮೊಂದಿಗೆ ನಿಲ್ಲಲಿದೆ ಅನ್ನೋ ವಿಶ್ವಾಸ ಭಾರತದ್ದು.