ಕಲಬುರಗಿ: ಹಿಜಾಬ್ ಬಂತು, ಹಲಾಲ್ ಆಯ್ತು. ಎಲ್ಲಾ ವಿಚಾರದಲ್ಲೂ ಸರಕಾರ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಕ್ರಮಗಳ ಈ ಮೂಲಕ ನಿಯಂತ್ರಣ ಮಾಡುತ್ತಿದೆ ಎಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನ ಪ್ರಕಾರ ಸಮೀಕ್ಷೆ ನಡೆಯುತ್ತಿದೆ. ಏನು ಕುರುಹು ಸಿಗುತ್ತೇ ? ನ್ಯಾಯಾಲಯ ಏನು ತೀರ್ಮಾನ ತಗೊಳ್ಳುತ್ತೆ ಅದರ ಮೇಲೆ ಮುಂದಿನ ನಿರ್ಧಾರ ಮಾಡಲಾಗುತ್ತದೆ ಎಂದರು.
ಇನ್ನು, ದತ್ತಪೀಠದಲ್ಲಿ ಮಾಂಸಾಹಾರ ಸೇವೆನೆ ಪ್ರಕರಣದಲ್ಲಿ ದತ್ತ ಪೀಠದಲ್ಲಿ ಮಾಂಸಾಹಾರ ಸೇವನೆ ವಿಚಾರವನ್ನು ಸರಕಾರ ಸೂಕ್ಷ್ಮವಾಗಿ ಗಮನಿಸುತ್ತದೆ. ಆ ರೀತಿ ಆದ್ರೆ ಏನು ತಗೋಬೇಕೋ ಆ ಕ್ರಮ ನಮ್ಮ ಸರಕಾರ ತಗೊಳ್ಳುತ್ತೆ ಎಂದು ಹೇಳಿದರು.
ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಜಾಗಗಳಲ್ಲೂ ರಾಷ್ಟ್ರಗೀತೆ ಹಾಡಬೇಕು. ಆ ಜಾಗ ಈ ಜಾಗ ಬೇಡ. ಎಲ್ಲಾ ಜಾಗಗಳಲ್ಲಿ ಹಾಡಬೇಕು. ಮದರಸಾಗಳಲ್ಲಿ ಹಾಡಬೇಕೇ ಅಥವಾ ಬೇಡವೇ ಎನ್ನುವುದು ಮುಂದಿನ ತೀರ್ಮಾನ ಹಿಜಾಬ್ ಬಂತು, ಹಲಾಲ್ ಆಯ್ತು. ಎಲ್ಲಾ ವಿಚಾರದಲ್ಲೂ ಸರಕಾರ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಕ್ರಮಗಳ ಈ ಮೂಲಕ ನಿಯಂತ್ರಣ ಮಾಡುತ್ತಿದೆ. ಕಾನೂನು ಮತ್ತು ಸಂವಿಧಾನಾತ್ಮಕವಾಗಿ ನಮ್ಮ ಸರಕಾರ ಯಾವುದನ್ನು ಹೇಗೆ ತಗೋಬೇಕು ತೆಗೆದುಕೊಳ್ಳುತ್ತೆ ಎಂದರು.