ಬೆಂಗಳೂರು : ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ ಎಂದು ಕಾಂಗ್ರೆಸ್ ಚಿಂತನಾ ಶಿಬಿರದದಲ್ಲಿ ಹೇಳಿದ್ದು, ಸೈದ್ಧಾಂತಿಕ ಬದ್ಧತೆ ಎಂದರೇನು ಎಂದು ರಾಹುಲ್ ಗಾಂಧಿಯನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಹಿನ್ನೆಲೆಯ ನೆಪ ನೀಡಿ, DMK-LTTE ಸಂಬಂಧವನ್ನು ಮುನ್ನೆಲೆಗೆ ತಂದರು. ಆ ಪಕ್ಷವನ್ನು ಸಂಪುಟದಿಂದ ಹೊರಗಿಡಲು ಐ ಕೆ. ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರಕಾರವನ್ನು ಉರುಳಿಸಿ, ನಂತರ ಅದೇ DMK ಪಕ್ಷದ ಹೆಗಲ ಮೇಲೆ ಕೈ ಹಾಕಿದ್ದು ಸೈದ್ದಾಂತಿಕ ಬದ್ಧತೆಯಾ ಎಂದು ಹೆಚ್ಡಿಕೆ ಹರಿಹಾಯ್ದರು.
ಕಾಂಗ್ರೆಸ್ 10 ವರ್ಷ ಅಧಿಕಾರ ಅನುಭವಿಸಿದ್ದು ಪ್ರಾದೇಶಿಕ ಪಕ್ಷಗಳ ಶಕ್ತಿ, ದಾಕ್ಷಿಣ್ಯದಿಂದ ಎಂಬದನ್ನು ಮರೆಯಬಾರದು ಎಂದು HDK ಕುಟುಕಿದ್ದು,ಮೈತ್ರಿ ಸರ್ಕಾರವನ್ನ ಉರುಳಿಸಲು ಹಿಂಬಾಗಿಲಿನಿಂದ ಆಪರೇಷನ್ ಕಮಲವೆಂಬ ಅನೈತಿಕ ರಾಜಕಾರಣಕ್ಕೆ ʼಕೈʼಜೋಡಿಸಿದ್ದು ಸೈದ್ಧಾಂತಿಕ ಬದ್ಧತೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಇಲ್ಲ..”
ಹೀಗೆಂದು @INCIndia ಚಿಂತನ ಶಿಬಿರದ ಸಮಾರೋಪ ಸಮಾರಂಭದಲ್ಲಿ @RahulGandhi ವ್ಯಾಖ್ಯಾನ ಮಾಡಿದ್ದಾರೆ.
ಹಾಗಾದರೆ, ಸೈದ್ಧಾಂತಿಕ ಬದ್ಧತೆ ಎಂದರೆ ಏನು?
ರಾಹುಲ್ಗಾಂಧಿ ಅವರು ಪ್ರಾದೇಶಿಕ ಪಕ್ಷಗಳಿಗೆ ಸ್ವಲ್ಪ ಬಿಡಿಸಿ ಹೇಳಬೇಕು. 1/6— H D Kumaraswamy (@hd_kumaraswamy) May 16, 2022