ಮಂಗಳೂರು: ರಾಜ್ಯದಲ್ಲಿ ಲೌಡ್ ಸ್ಪೀಕರ್ ನಿಯಂತ್ರಣ ವಿಚಾರ ಈಗ ಕರಾವಳಿಯ ಯಕ್ಷಗಾನಕ್ಕೂ ಆತಂಕ ಶುರುವಾಗಿದೆ ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಇನ್ನು, ಯಕ್ಷಗಾನಕ್ಕೆ ಯಾವುದೇ ಧರ್ಮದ ತಡೆಯಿಲ್ಲ, ಎಲ್ಲಾ ಧರ್ಮದವರು ಯಕ್ಷಗಾನವನ್ನು ಆಡಿಸುತ್ತಾರೆ. ಸರ್ಕಾರದ ಸೌಂಡ್ ಡೆಸಿಬಲ್ ನೀತಿಯಡಿ ಯಕ್ಷಗಾನ ನಡೆಸಲು ಸಾಧ್ಯವಿಲ್ಲ. ಯಕ್ಷಗಾನಕ್ಕೆ ವಿಶೇಷ ರಿಯಾಯಿತಿ ನೀಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅದುವಲ್ಲದೇ, ಯಕ್ಷಗಾನ ಶೇ 99ರಷ್ಟು ರಾತ್ರಿಯಿಡಿ ಮುಂಜಾನೆವರೆಗೆ ನಡೆಯುತ್ತದೆ. ಸರ್ಕಾರ ಕಲಾವಿದರ ದೃಷ್ಟಿಯಿಂದ ಯಕ್ಷಗಾನಕ್ಕೆ ರಿಯಾಯಿತಿ ನೀಡಬೇಕು ಎಂದು ಮಂಗಳೂರಿನಲ್ಲಿ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮನವಿ ಮಾಡಿದ್ದಾರೆ.