ಕ್ರಿಕೆಟ್ ಜಗತ್ತಿನ ದಂತಕಥೆ ಮಹೇಂದ್ರ ಸಿಂಗ್ ಧೋನಿ ಯಾರಿಗೆ ತಾನೇ ಗೊತ್ತಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಧೋನಿ ಬ್ಯಾಟಿಂಗ್ ಸ್ಟೈಲ್ಗೆ ಫಿದಾ ಆಗಿದ್ದಾರೆ. ಆದ್ರೆ ಅಸಲಿಗೆ ರಿಯಲ್ ಮ್ಯಾಟ್ರು ಇದಲ್ಲ. ಫೀಲ್ಡ್ ಅಲ್ಲಿ ಸಿಕ್ಸರ್ ಬಾರಿಸೋ ಧೋನಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ. ಅರೆ,, ಏನಿದು ವಿಷ್ಯ, ಧೋನಿ ಹೀರೋ ಆಗ್ತಾರಾ ಅಂತೀರಾ..?
- ಕಾಲಿವುಡ್ಗೂ ಮಾಹಿಗೂ ಇದೆ ಮರೆಯಲಾಗದ ನಂಟು
- ಚೆನ್ನೈ ಮೇಲಿನ ಪ್ರೀತಿಗೆ ಮೊದಲ ಸಿನಿಮಾ ಗಿಫ್ಟ್
- ಸಿನಿಮಾ ಇಂಡಸ್ಟ್ರಿಗೆ ಕೂಲ್ ಕ್ಯಾಪ್ಟನ್ ಎಂಟ್ರಿ
- ನಯನತಾರಾ ಮೇಲೆ ಬಿತ್ತು ಧೋನಿ ಕಣ್ಣು
ಕ್ರಿಕೆಟ್ ಜಗತ್ತಿನ ಅನಭಿಷಕ್ತ ದೊರೆ, ಹೆಲಿಕಾಪ್ಟರ್ ಶಾಟ್ಗೆ ಹೊಸ ಭಾಷ್ಯ ಬರೆದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್ ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ ದೇಶದ ಬಗ್ಗೆಯೂ ಕಾಳಜಿ ಇರುವ ಧೋನಿ ಆಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಪಂಚಪ್ರಾಣ. ಇದೀಗ ಅಭಿಮಾನಿಗಳಿಗೆ ಧೋನಿ ಕಡೆಯಿಂದ ಸರ್ಪ್ರೈಸಿಂಗ್ ನ್ಯೂಸ್ ಸಿಕ್ಕಿದೆ. ಮಾಹಿ ಬ್ಯಾಟ್ ಹಿಡಿದು ಫಿಲ್ಮ್ ಫೀಲ್ಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ತಿದ್ದಾರೆ.
ಅಷ್ಟಕ್ಕೂ ಧೋನಿಗೆ ಸಿನಿಮಾವೇನು ಹೊಸತಲ್ಲ. ಧೋನಿಯ ಬಯೋಪಿಕ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೆ ಹೊಸ ದಾಖಲೆ ಬರೆದ ವಿಷ್ಯ ನಿಮಗೆಲ್ಲಾ ಗೊತ್ತೇ ಇದೆ. ಸುಶಾಂತ್ ಸಿಂಗ್ ರಜಪೂತ್ ಈ ಸಿನಿಮಾದಲ್ಲಿ ಧೋನಿಯಾಗಿ ಕಾಣಿಸಿಕೊಂಡು ಅದ್ಭುತವಾಗಿ ನಟಿಸಿದ್ರು. ಈ ಸಿನಿಮಾ ನೋಡಿದ್ಮೇಲಂತೂ ಧೋನಿ ಮೇಲಿನ ಫ್ಯಾನ್ಸ್ ಕ್ರೇಜ್ ಜಾಸ್ತಿ ಆಯ್ತು.
ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಪ್ರಮೋಷನ್ಗೆ ಸ್ವತಃ ಮಾಹಿಯೇ ಭಾಗಿಯಾಗಿದ್ದು ವಿಶೇಷ. ಸಿನಿಮಾ ಲೋಕದ ಬಗ್ಗೆ ಚೆನ್ನಾಗಿ ಅರಿತಿರುವ ಧೋನಿ ಸಿನಿಮಾ ನಟನಾಗಿ ಕಾಣಿಸಿಕೊಂಡ್ರು ಅಚ್ಚರಿಯಿಲ್ಲ. ಆ ಚಾರ್ಮ್ ಕೂಡ ಕೂಲ್ ಕ್ಯಾಪ್ಟನ್ಗೆ ಇದೆ.. ಆದ್ರೆ ಸದ್ಯ ಧೋನಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡ್ತಾ ಇರೋದು ನಿರ್ಮಾಪಕರಾಗಿ. ತಮ್ಮ ಮೊದಲ ಸಿನಿಮಾವನ್ನ ಧೋನಿ ತಮಿಳಿನಲ್ಲಿ ನಿರ್ಮಾಣ ಮಾಡಲಿದ್ದಾರೆ. ಈ ಸಿನಿಮಾಗಾಗಿ ನಯನತಾರಾ ಮೇಲೆ ಮಾಹಿ ಕಣ್ಣು ಬಿದ್ದಿದೆ.
ಕ್ರಿಕೆಟ್ ಗ್ರೌಂಡ್ನಲ್ಲಿ ಮಾಹಿ ಅಬ್ಬರಿಸಲಿ ಇಲ್ಲದಿರಲಿ ಅಭಿಮಾನಿಗಳು ಮಾತ್ರ ಧೋನಿ ಅಂದ್ರೆ ಹುಚ್ಚೆದ್ದು ಕುಣೀತಾರೆ. ಇನ್ನು ಧೋನಿ ನಿರ್ಮಾಣ ಮಾಡ್ತಿರೋ ಮೊದಲ ಸಿನಿಮಾ ಅಂದ್ರೆ ಗೆಲ್ಲಿಸದೆ ಇರ್ತಾರಾ..? ನೋ ಡೌಟ್ ಸಿನಿಮಾ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದು ಅಭಿಮಾನಿಗಳ ಅಭಿಪ್ರಾಯ . ಆದ್ರೆ ಧೋನಿ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಕ್ಕೆ ಕಾರಣ ಬೇರೇನೆ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಬರೋಬ್ಬರಿ ನಾಲ್ಕು ಟ್ರೋಫಿ ಗೆದ್ದುಕೊಟ್ಟಿರುವ ಧೋನಿ ಕಂಡ್ರೆ ಕಾಲಿವುಡ್ ಮಂದಿಗೆ ಸಿಕ್ಕಾಪಟ್ಟೆ ಪ್ರೀತಿ. ಚೆನ್ನೈ ಮಂದಿ ಮಾಹಿಯನ್ನು ತಲಾ ಅಂತಲೇ ಪ್ರೀತಿಯಿಂದ ಕರಿತಾರೆ . ಈ ಅಭಿಮಾನಿಕ್ಕಾಗಿಯೇ ಧೋನಿ ತಮ್ಮ ಮೊದಲ ಸಿನಿಮಾವನ್ನು ಕಾಲಿವುಡ್ನಲ್ಲಿ ನಿರ್ಮಾಣ ಮಾಡ್ತಿದ್ದಾರೆ ಅನ್ನೋ ಸುದ್ದಿ ಇದೆ.
ವುಮನ್ ಓರಿಯೆಂಟೆಡ್ ಕಥೆ ಇರೋ ಈ ಸಿನಿಮಾಗೆ ನಿರ್ದೇಶಕ ಶಿವನ್ ವಿಘ್ನೇಶ್ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಸೂಪರ್ ಸ್ಟಾರ್ ರಜನಿಕಾಂತ್ ಆಪ್ತನಿಗೆ ಈ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಧೋನಿ ವಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ಕ್ರಿಕೆಟ್ ಲೋಕದಲ್ಲಿ ಟೆಕ್ನಿಕಲ್ ಕೂಲ್ ಮೈಂಡ್ನಿಂದ ಸಕ್ಸಸ್ ಪೀಕ್ನಲ್ಲಿರೋ ಟಾಪ್ ಕ್ಲಾಸ್ ಫಿನಿಶರ್ ಧೋನಿ ಕಾಲಿವುಡ್ನಲ್ಲೂ ಟಾಪ್ ಕ್ಲಾಸ್ ಫಿನಿಶರ್ ಆಗ್ತಾರಾ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಎಂಟರ್ಟೇನ್ಮೆಂಟ್ ಬ್ಯೂರೋ, ಪವರ್ ಟಿವಿ