Saturday, November 23, 2024

ನಮ್ಮ ಮುಖ್ಯಮಂತ್ರಿಗಳು ವೀಕ್ ಅಲ್ಲ : ಸಚಿವ S.T ಸೋಮಶೇಖರ್

ಮೈಸೂರು :  ನಮ್ಮ ಮುಖ್ಯಮಂತ್ರಿಗಳು ವೀಕ್ ಅಲ್ಲ ಮತ್ತು ಅವರ‌ ಮೇಲೆ ಯಾವುದೇ ಕಪ್ಪುಚುಕ್ಕಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಪರ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನಿಗೆ ತಿರುಗೇಟು ನೀಡಿದ್ದಾರೆ.

ಸಿಎಂ ಬೊಮ್ಮಾಯಿ ವೀಕ್, ಇದು ಭ್ರಷ್ಟ ಸರ್ಕಾರ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ವೀಕ್ ಅಲ್ಲ. ಅವರ‌ ಮೇಲೆ ಯಾವುದೇ ಕಪ್ಪುಚುಕ್ಕಿ ಇಲ್ಲ. ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಸಿದ್ದು ಅವರು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಕಾಂಗ್ರೆಸ್ ವರಿಷ್ಠರ ಒಲೈಕೆ ಮಾಡಲು ಹೀಗೆ ಹೇಳಿಕೆ ನೀಡುತ್ತಿದ್ದಾರೆ. ಅವರು ಒಂದು ದಿನವೂ ವಿರೋಧ ಪಕ್ಷದ ನಾಯಕನ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೇ ಕಾಂಗ್ರೆಸ್ ಆಂತರಿಕ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಐಸಿಸಿ ವೀಕ್ ಆಗಿರೋ ಪರಿಣಾಮ ಎಲ್ಲರೂ ನಾಯಕರಾಗಿದ್ದಾರೆ. ಇದು ಆರಂಭ ಅಷ್ಟೇ, ಮುಂದೆ ಮತ್ತಷ್ಟು ಹೆಚ್ಚುತ್ತದೆ. ಇದು ವಿಕೋಪಕ್ಕೆ ತಿರುಗಿ ಪಕ್ಷವೇ ಮುಗಿಯುವ ಹಂತಕ್ಕೆ ಹೋಗುತ್ತದೆ. ಈಗಾಗಲೇ ಕಾಂಗ್ರೆಸ್​​​ನಲ್ಲಿ ನಾಲ್ಕು ಗುಂಪಾಗಿದೆ. ಯಾರೂ ಕೂಡ ಆಂತರಿಕವಾಗಿ ಚೆನ್ನಾಗಿಲ್ಲ. ಮೇಲ್ನೋಟಕ್ಕೆ ಒಟ್ಟಿಗೆ ಕಾಣಿಸಿಕೊಂಡರು ಒಳಗೆ ಅಸಮಾಧಾನ ಇದೆ. ಇದೀಗ ನಟಿ ರಮ್ಯಾ ವಿಚಾರದಲ್ಲೂ ಅದು ಬಹಿರಂಗವಾಗಿದೆ ಎಂದು ಹೇಳಿದರು.

ಇನ್ನು ಹಳೇ ಮೈಸೂರು ಭಾಗದ ಎರಡನೇ ಹಂತದ ಬಿಜೆಪಿ ಆಪರೇಷನ್ ನಿರ್ಧಾರವಾಗಿದೆ. ಶೀಘ್ರದಲ್ಲೇ ಮೈಸೂರು ಭಾಗದ ಐದಾರು ಘಟಾನುಘಟಿ ನಾಯಕರು ಬಿಜೆಪಿ ಸೇರ್ಪಡೆಗೆ ನಿಶ್ಚಿತವಾಗಿದೆ. ಈಗಾಗಲೇ ನಾಯಕರುಗಳ ಜೊತೆಗೆ ಕೊನೆಯ ಹಂತದ ಮಾತುಕತೆಗಳು ನಡೆಯುತ್ತಿವೆ. ಯಾವ ಕಂಡೀಷನ್​​ಗಳಿಲ್ಲದೇ ನಾಯಕರು ಬಿಜೆಪಿ ಸೇರ್ಪಡೆಗೆ ಒಪ್ಪಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಇದ್ದಾರೆ. ಯಾರು ಆ ನಾಯಕರು ಎಂಬುದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಗ್ರೀನ್ ಸಿಗ್ನಲ್ ಬಾಕಿ‌ ಇದೆ ಮತ್ತು ಕೊನೆಯ ಹಂತದ ಮಾತುಕತೆ ಮುಗಿಯಲಿ ನಂತರ ನಾವೇ ಎಲ್ಲವನ್ನೂ ಸ್ಪಷ್ಟ ಪಡಿಸುತ್ತೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES