Tuesday, November 5, 2024

ಶ್ರೀಕ್ಷೇತ್ರ ಸಿದ್ದರಬೆಟ್ಟದಲ್ಲಿ ಅಭಿವೃದ್ಧಿ ಮರೀಚಿಕೆ..!

ತುಮಕೂರು : ಮುರಿದು ಬಿದ್ದಿರೋ ತಂಗುದಾಣ, ಬಾಗಿಲೆ ತೆರೆಯದೆ ಬೀಗ ಹಾಕಿರೋ ಶೌಚಾಲಯ, ಬೇಲಿಯೊಳಗೆ ಹುದುಗಿ ಹೋಗಿರೋ ಮಕ್ಕಳ ಆಟದ ಮೈದಾನ ಇವೆಲ್ಲಾ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಪುರಾಣ ಪ್ರಸಿದ್ದ ಐತಿಹಾಸಿಕ ಕ್ಷೇತ್ರ ಸಿದ್ದರಬೆಟ್ಟದಲ್ಲಿ.

ಈ ಹಿಂದೆ ಅಭಿವೃದ್ಧಿಯಲ್ಲಿ ಮುಂಚೂಣೆಯಲ್ಲಿದ್ದ ಶ್ರೀ ಕ್ಷೇತ್ರ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಅಲ್ಲದೇ ಶ್ರೀ ಕ್ಷೇತ್ರದಲ್ಲಿ ಮಹಿಳೆಯ ಮಕ್ಕಳ ಪರದಾಟ ಕೇಳ ತೀರದಾಗಿದೆ ಈಗಾಗಲೇ ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಎರಡು ಶೌಚಾಲಯ ವ್ಯವಸ್ಥೆ ಇದ್ದು ಒಂದರಲ್ಲಿ ನೀರಿನ ವ್ಯವಸ್ಥೆಯನ್ನೇ ಸರ್ಕಾರ ಮಾಡಿಲ್ಲ ಅನ್ನೋದಾದ್ರೆ ಇನ್ನೊಂದರ ಬೀಗವನ್ನೇ ತೆರೆಯದೆ ಸಾರ್ವಜನಿಕರು ಪರದಾಡುವಂತ ಸ್ಥೀತಿ ನಿರ್ಮಾಣವಾಗಿದೆ.

ಇನ್ನೂ ಶ್ರೀಕ್ಷೇತ್ರದಲ್ಲಿ ರಾಜೀವ್ ಗಾಂಧಿ ಉದ್ಯಾನವನವಿದ್ದು ಇಂದು ಸಂಪೂರ್ಣವಾಗಿ ಆ ಪಾಕ್೯ನಲ್ಲಿ ಬೆಲಿ ಬೆಳೆದು ನಿಂತಿದೆ ಅಲ್ಲದೇ ಈ ಪಾಕ್೯ನಲ್ಲಿದ್ದ ಆಟದ ಸಾಮಗ್ರಿಗಳು ಸಂಪೂರ್ಣವಾಗಿ ಬೆಲಿಯ ಒಳಭಾಗದಲ್ಲಿದ್ದು ಇದು ಮಕ್ಕಳಿಗೂ ಅನುಕೂಲವಾಗದೆ ಇರುವುದು ಪಾಕ್೯ ನಿರ್ವಹಣೆ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಅಲ್ಲದೇ ಬೆಟ್ಟದ ದೇವಾಲಯಕ್ಕೆ ಹೋಗುವ ಭಕ್ತಾಧಿಗಳಿಗೆ ನಿಲ್ಲಲು ತಂಗುದಾಣ ಇಲ್ಲದೇ ಇರುವುದು ಬಿರು ಬೇಸಿಗೆಯಲ್ಲಿ ಬೆಟ್ಟ ಹತ್ತುವವರಿಗೆ ಬಹು ನೋವಿನ ಸಂಗತಿಯಾಗಿದೆ ಇನ್ನೂ ಇತ್ತಿಚೆಗೆ ಸುರಿದ ಗಾಳಿ ಮಳೆಗೆ ಇದ್ದ ಪುಟ್ಟ ಸೂರು ಕೂಡ ಸಂಪೂರ್ಣ ಬಿದ್ದು ಹೋಗಿದ್ದು ಬಿಸಿಲಲ್ಲಿ ಬರುವವರನ್ನ ದೇವರೇ ಕಾಪಾಡಬೇಕಾಗಿದೆ.

ಒಟ್ಟಾರೆ ಐತಿಹಾಸಿಕ ಪುರಾಟ ಪ್ರಸಿದ್ದ ಪ್ರವಾಸಿತಾಣ ಸಿದ್ದರಬೆಟ್ಟ ಸಂಪೂರ್ಣ ಹಾಳಾಗುತ್ತಿದ್ದು ಇನ್ನಾದರೂ ಅಧಿಕಾರಿಗಳು ಇತ್ತ ಗಮನಹರಿಸಿ ಶ್ರೀಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಅಲ್ಲದೇ ಇತಿಹಾಸದ ದೇವಾಲಯಗಳ ಉಳಿಸಿ ಮುಂದಿನ ಪೀಳಿಗೆಗೆ ನೀಡಲಿ ಎಂಬುದು ನಮ್ಮ ಆಶಯ.

RELATED ARTICLES

Related Articles

TRENDING ARTICLES