ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಪರಸ್ಪರ ಟ್ವೀಟ್ ವಾರ್ ಮುಂದುವರಿದಿದೆ. ಎಂ.ಬಿ.ಪಾಟೀಲ್ ವಿರುದ್ಧ ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ನ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದು, ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸುತ್ತಿರುವ ಕೈ ನಾಯಕರು, ರಮ್ಯ ಹೇಳಿಕೆ ಸರಿಯಿದೆ ಎನ್ನುತ್ತಿದ್ದಾರೆ. ಹಾಗೂ ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಪಕ್ಷ. ರಾಜಕೀಯದಲ್ಲಿ ಅಲಿಖಿತ ನೀತಿ ಸಂಹಿತೆ ಇದೆ. ಇವುಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ ಅವರು, ಪಕ್ಷದ ಹಿತದೃಷ್ಟಿಯಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಪಕ್ಷದ ಅಧ್ಯಕ್ಷ ಎಂದ ಮಾತ್ರಕ್ಕೆ ಬೇರೆಯವರನ್ನು ಕಡೆಗಣಿಸುವಂತೆ ಮಾತನಾಡುವುದು ಸರಿಯಲ್ಲ. ನಾವು ಮಾಡಬೇಕಾದನ್ನು ರಮ್ಯಾ ಮಾಡಿ ತೋರಿಸಿದ್ದಾಳೆ. ವಿವಾದವನ್ನು ಮುಂದುವರಿಸಿಕೊಂಡು ಹೋದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಹೀಗಾಗಿ ಇದನ್ನು ಇಲ್ಲಿಗೆ ಬಿಡದಂತೆ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಗಮನಕ್ಕೆ ತರಲು ಹಿರಿಯ ನಾಯಕರು ಪ್ಲಾನ್ ಮಾಡಿದ್ದಾರೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ನಲ್ಲಿ ಒಳಬೇಗುದಿ ಭುಗಿಲೆದ್ದಿದೆ. ಡಿಕೆಶಿಗೆ ಮೂಗುದಾರ ಹಾಕಲು ಹಿರಿಯ ಕೈ ನಾಯಕರು ಪ್ಲಾನ್ ಮಾಡಿದ್ದಾರೆ ಎಂದು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ,
Congress is a party of internal democracy. Unwritten code of ethics exist in politics. Those were breached. Hence @divyaspandana, voiced her opinion in the best interest of party. 1/3
— M B Patil (@MBPatil) May 12, 2022