ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡ್ತೀವಿ ಎಂದರು.
ಇನ್ನು ನಿನ್ನೆ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಜೊತೆ ಒಬಿಸಿ ಮೀಸಲಾತಿ ಕುರಿತ ಪಕ್ಷದ ನಿಲುವಿನ ಚರ್ಚೆ ನಡೆಸಲಾಗಿತ್ತು. ಚರ್ಚೆಯಲ್ಲಿ ಈಗಾಗಲೇ ಒಬಿಸಿ ಬಗ್ಗೆ ಕಾನೂನು ಸಚಿವರು ಹೇಳಿದ್ದಾರೆ. ಬಿಬಿಎಂಪಿಗೆ ಸಂಬಂಧಿಸಿದ ಕೇಸ್ ಒಂದು ಸುಪ್ರೀಂನಲ್ಲಿ ಪೆಂಡಿಂಗ್ ಇದೆ. ಜಿಲ್ಲಾ ಪಂಚಾಯಿತಿ ಮತ್ತೆ ತಾಲ್ಲೂಕು ಪಂಚಾಯತಿಗೆ ಒಬಿಸಿ ಮೀಸಲಾತಿ ಬೇಕು ಇದರ ಬಗ್ಗೆ ಕಾನೂನಾತ್ಮಕವಾಗಿ ಸ್ವಲ್ಪ ಸಮಯಾವಕಾಶ ಕೊಡಿ ಕೇಳಿದ್ದೇವೆ. ಇಲ್ಲ ಅಂದರೆ ಹಳೆ ಓಬಿಸಿ ಮೀಸಲಾತಿ ಏನು ಇದ್ಯೋ ಅದಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದೇವೆ ಎಂದರು.
ಇನ್ನು ಸಿಎಂ ಅಮೆರಿಕಾಕ್ಕೆ ಹೋಗ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಅಮೆರಿಕಾಗೆ ಹೋಗೋದಿಲ್ಲ, ಯಾರ್ ನಿಮಗೆ ಹೇಳಿದ್ದು ಎಂದು ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದರು.