ಬೆಂಗಳೂರು : ನಾಲ್ಕನೇ ಅಲೆಯ ಭೀತಿಯ ನಡುವೆ ಹೊಸ ಜ್ವರವೊಂದು ಕಾಣಿಸಿಕೊಂಡಿದ್ದು. ವಿಶೇಷವಾಗಿ ಚಿಕ್ಕಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಹೆಚ್ಚು ಮಕ್ಕಳು ವೈರಸ್ನಿಂದ ಸೋಂಕಿಗೆ ಒಳಗಾಗಿದ್ದಾರೆ.
ಕೇರಳ ರಾಜ್ಯವು ನಿಗೂಢ ಕಾಯಿಲೆ ಟೊಮ್ಯಾಟೋ ಜ್ವರದಿಂದ ಬೆಚ್ಚಿಬಿದ್ದಿದೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೂ ಅಪ್ಪಳಿಸಿಬಿಡ್ತಾ ಈ ಕಾಯಿಲೆ ಎಂಬ ಆತಂಕದಿಂದಲೇ ರಾಜ್ಯ ಆರೋಗ್ಯ ಇಲಾಖೆಗೆ ಕೊರೊನಾ ನಾಲ್ಕನೇ ಅಲೆ ಜೊತೆಗೆ ಟೊಮ್ಯಾಟೋ ಟೆನ್ಷನ್ ಕೂಡ ಜಾಸ್ತಿಯಾಗಿದೆ. ಇದರಿಂದಾಗಿ ಕರುನಾಡಿಗೆ ಸಾಂಕ್ರಾಮಿಕ ಜ್ವರ ಕಾಲಿಡದಂತೆ ಮಕ್ಕಳ ಆರೋಗ್ಯ ಸ್ಥಿತಿಗತಿ ಮೇಲೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲಾಗಿದೆ.
ಟೊಮೆಟೊ ಜ್ವರದ ಲಕ್ಷಣಗಳೇನು?
- ಅಧಿಕ ಜ್ವರ, ಮೈಕೈ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ
- ಟೊಮೆಟೊ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ.
- ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ
- ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ
- ಮೈಮೇಲೆ ಕೆಂಪು ಬಣ್ಣದ ಗುಳ್ಳೆ
- ಚಳಿ ಜ್ವರ ಮೈಕೈ ನೋವು ಸಂಧಿಯೂತ
- ಆಯಾಸ,ವಾಕರಿಕೆ ಅತಿಸಾರ
- ಮೊಣಕಾಲು ವಿವಿಧ ಬಣ್ಣಕ್ಕೆ ತಿರುಗುತ್ತದೆ
- ಚಿಕನ್ ಗುನ್ಯಾ ಲಕ್ಷಣಗಳು ಬರಲಿವೆ
ಟೊಮೆಟೊ ಜ್ವರದ ಮುನ್ನೆಚ್ಚರಿಕೆ ಕ್ರಮಗಳೇನು?
- ಮಗುವನ್ನು ವೈದ್ಯರಿಗೆ ತೋರಿಸಿ
- ಗುಳ್ಳೆಗಳನ್ನ ಕೆರೆಯದಂತೆ ನೋಡಿಕೊಳ್ಳಿ
- ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು
- ಸೋಂಕಿತ ಮಕ್ಕಳಿಗೆ ಹೆಚ್ಚು ಕುದಿಸಿ ಆರಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು
- ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು
- ಗುಳ್ಳೆಗಳು ಅಥವಾ ದದ್ದುಗಳನ್ನು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು
- ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು
- ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.