Saturday, November 2, 2024

ಟೊಮ್ಯಾಟೊ ಜ್ವರಕ್ಕೂ ಕೊವಿಡ್​​​ಗೂ ಸಂಬಂಧ ಇಲ್ಲ : ಸಚಿವ ಸುಧಾಕರ್

ಬೆಂಗಳೂರು : ಟೊಮ್ಯಾಟೊ ಪ್ಲೂಗು ಕೊವಿಡ್​​ಗೂ ಯಾವುದೇ ಸಂಬಂಧ ಇಲ್ಲ. ಇದು ಹೊಸದಾಗಿ ಕಂಡು ಬಂದಿರುವಂತಹದಲ್ಲ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಅವರು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೊಮೆಟೋ ಜ್ವರವು ಹೊಸದಾಗಿ ಬಂದಿರುವ ಕಾಯಿಲೆ ಅಲ್ಲ. ಈ ಹಿಂದೆ ಇದ್ದಂತಹ ವೈರಲ್ ಇದಕ್ಕೆ ಜನರು ಯಾರು ಆತಂಕ ಪಡುವಂತಿಲ್ಲ. ಈ ಜ್ವರವು ಐದು ವರ್ಷದ ಒಳಗಿನ ಮಕ್ಕಳಿಗೆ ಕಾಣಿಸಿಕೊಳ್ಳುತ್ತಾ ಇದೆ.

ಈಗಾಗಿ ಕೇರಳದ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಡಿಹೆಚ್ಓ(ಜಿಲ್ಲಾ ಆರೋಗ್ಯ ಅಧಿಕಾರಿ)ಗಳಿಗೆ ಸೂಚನೆ ನೀಡಿದ್ದೇನೆ. ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಅಲ್ಲದೇ ಆ ರೀತಿ ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡೋದಕ್ಕೂ ಸೂಚನೆ ನೀಡಿದ್ದೇನೆ.

ಇನ್ನು ಜ್ವರದ ಬಗ್ಗೆ ಆತಂಕ ಪಡುವಂತಹ ಖಾಯಿಲೆ ಏನಲ್ಲ. ನಾನು ಕೇರಳದ ಆರೋಗ್ಯ ಸಚಿವರ ಜೊತೆ ಕೂಡ ಮಾತನಾಡಿದ್ದೇನೆ ಗಾಬರಿ ಪಡುವ ಆಗಿಲ್ಲ. ಈ ಜ್ವರವುಇಡೀ ದೇಶದಲ್ಲಿ ಏನು ಕಾಣಿಸಿಕೊಂಡಿಲ್ಲ ಕೇರಳದಲ್ಲಿ ಮಾತ್ರ ಕಾಣಿಸಿಕೊಂಡಿರೋದು. ಆಸ್ಫತ್ರೆಗಳಲ್ಲಿ ಕಟ್ಟೆಚ್ಚರ ವಹಿಸಬೇಕಿದೆ ಎಂದು ಸಚಿವ ಸುಧಾಕರ್ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES