Friday, November 22, 2024

ಸೌಂಡ್ ಡಿವೈಸ್ ಮಷಿನ್ ಖರೀದಿಸಿದ ಪರಿಸರ ಇಲಾಖೆ

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದ್ರೂ ನಿಯಮ ಬಾಹಿರ ಮೈಕ್ ತೆರವು ಮಾಡಲು ಸರ್ಕಾರ ಮುಂದಾಗಿರಲಿಲ್ಲ. ಇದೀಗ ಆಜಾನ್ ವಿರುದ್ಧ ಸುಪ್ರಭಾತ ಪ್ರತಿಭಟನೆ ಜೋರಾಗ್ತಿರೋ ಹಿನ್ನಲೆ ರಾಜ್ಯ ಸರ್ಕಾರ ಲೌಡ್ ಸ್ಪೀಕರ್ ಗೆ ನೂತನ ಗೈಡ್​ಲೈನ್ಸ್ ಹೊರಡಿಸಿದೆ. ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದನ್ನು ಜಾರಿಗೆ ತರಲು ಅಧಿಕಾರಿಗಳು ‌ಹರಸಾಹಸ ಪಡಬೇಕು. ಯಾಕಂದ್ರೆ ಶಬ್ದಮಾಲಿನ್ಯ ಉಲ್ಲಂಘನೆ ಅಳೆಯಲು ಪೋರ್ಸ್ ಮತ್ತು ಸಾಧನ ಸಾಕಷ್ಟು ಇಲ್ಲ ಎಂಬ ಚರ್ಚೆಯಾಗಿತ್ತು. ಇದ್ರ ಬೆನ್ನಲ್ಲೇ ರಾಜ್ಯ ಸರ್ಕಾರ 190 ಸೌಂಡ್ ಡಿವೈಸ್ ಮಶಿನ್ ಖರೀದಿಸಿದ್ದು, ಅದನ್ನ ಆರ್​ಓಗಳಿಗೆ ನೀಡಿದೆ. ಮತ್ತಷ್ಟು ಡಿವೈಸ್ ಖರೀದಿ ಮಾಡಲು ಪರಿಸರ ಇಲಾಖೆ ನಿರ್ಧರಿಸಿದೆ.

ಅನಧಿಕೃತ ಮೈಕ್ ತಡೆಗೆ ಮೊದಲು ಖಡಕ್ ಕಾನೂನು ಇರಲಿಲ್ಲ. ಇದೀಗ ಸರ್ಕಾರ ಕಟ್ಟು‌ನಿಟ್ಟಿನ ಸುತ್ತೋಲೆ‌ ಹೊರಡಿಸಿದೆ. 15 ದಿನದೊಳಗೆ ಲೌಡ್ ಸ್ಪೀಕರ್ ಹಾಕಲು ಅನುಮತಿ ಪಡೆಯಬೇಕು. ಅಲ್ಲದೇ ಇಂತಿಷ್ಟು ಡೆಸಿಬಲ್ ಶಬ್ದದ ಮಿತಿ ಇರಬೇಕು ಅಂತ ಹೇಳಿದೆ. ಹೀಗಾಗಿ 15 ದಿನದವರೆಗೆ ಅನುಮತಿ ಪಡೆಯಲು ಅವಕಾಶಕೊಟ್ಟು ಅವಕಾಶ ಪಡೆಯದ ಲೌಡ್ ಸ್ಪೀಕರ್ ಅನಧಿಕೃತ ಅಂತ ಕ್ರಮ ಜರುಗಿಸಬಹುದು. ಈ ಆದೇಶ ಕೇವಲ ಚರ್ಚ್ ಮಸೀದಿ, ದೇವಸ್ಥಾನಕ್ಕಷ್ಟೇ ಪಾಲನೆಯಾಗೋದಲ್ಲ. ಸಾರ್ವಜನಿಕ ಸ್ಥಳದಲ್ಲಿ ಕೂಡ ಪಾಲನೆಯಾಗಲಿದೆ. ಹೀಗಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲೂ ಇನ್ನುಂದೆ ಡೆಸಿಬಲ್ ಮಿತಿ ಕಡ್ಡಾಯವಾಗಿದ್ದು ಅನುಮತಿ ಪಡೆಯಲೇಬೇಕು

ಈ ಸುತ್ತೊಲೆಗೆ 15 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಪ್ರತಿನಿತ್ಯ ಬಿಟ್ಟು ವಿಶೇಷ ಸಂದರ್ಭದಲ್ಲಿ ಲೌಡ್ ಸ್ಪೀಕರ್ ಹಾಕುವಾಗ ಡೆಸಿಬಲ್ ಮಿತಿ ಹೆಚ್ಚಿಸಿ ಅನುಮತಿ ಕೊಡಿ ಅಂತ ಕೆಲವರು ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರ ಏನು ಮಾಡುತ್ತೋ ಅನ್ನೊದನ್ನ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES