ಮಂಡ್ಯ : ಹಿಜಾಬ್ ವಿವಾದದ ವೇಳೆ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಚಾರ ಪಡೆದಿದ್ದ ಮಂಡ್ಯದ ಮುಷ್ಕಾನ್ ವಿದ್ಯಾರ್ಥಿನಿ ಪೊಲೀಸರನ್ನು ಯಾಮಾರಿಸಿ ವಿದೇಶಕ್ಕೆ ಹಾರಿದ್ದಾರೆ.
ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸೌದಿ ಪ್ರವಾಸಕ್ಕೆ ಹೊರಟಿದೆ. ಈ ಪ್ರವಾಸದ ಹಿಂದೆ ಏನಾದರೂ ಇದ್ಯಾ ಎಂಬುದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದೆ.
ಈ ಹಿಂದೆ ಮುಸ್ಕಾನ್ ಅಲ್ಲಾಹು ಅಕ್ಬರ್ ಎಂದು ಕೂಗಿ ಭಾರೀ ಸುದ್ದಿಯಾಗಿದ್ದರು. ವಿದ್ಯಾರ್ಥಿನಿಯ ಧೈರ್ಯದ ಹೇಳಿಕೆ ಹಿನ್ನೆಲೆ ಉಗ್ರ ಸಂಘಟನೆ ಆಲ್ ಖೈದಾ ಮುಖ್ಯಸ್ಥ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಈಕೆಯ ಧೈರ್ಯ ಮೆಚ್ಚಿ ಹಲವು ಮುಸ್ಲಿಂ ಸಂಘಟನೆಗಳಿಂದ ಹಣ ಬಹುಮಾನಗಳು ಬಂದಿದ್ದವು. ಈ ವೇಳೆ ಮುಸ್ಕಾನ್ ವಿದೇಶಿ ಪ್ರವಾಸ ಕೈಗೊಂಡಿರುವುದು ಎಲ್ಲರ ಅನುಮಾನಕ್ಕೆ ಕಾರಣವಾಗಿದೆ.
ಅಲ್ಲದೇ ಮುಷ್ಕಾನ್ ಸೇರಿ ಅವರ ಕುಟುಂಬ ಸೌದಿಗೆ ತೆರಳಿರುವುದರ ಹಿಂದೆ ಉಗ್ರಗಾಮಿಗಳ ಭೇಟಿ ಸಂಚು ಇದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸ್ ಇಲಾಖೆ ಮುಸ್ಕಾನ್ ಮತ್ತು ಕುಟುಂಬದವರನ್ನು ವಿಚಾರಣೆ ನಡೆಸಿತ್ತು. ಈ ನಡುವೆ ಮುಸ್ಕಾನ್ ಮನೆಗೆ ಬಂದೋಗುವವರ ಮೇಲೆ ಒಂದು ಕಣ್ಣು ಇಟ್ಟಿತ್ತು.
ಆದರೆ ಈ ಕುಟುಂಬ ಖಾಕಿಗೆ ಮಾಹಿತಿ ನೀಡದೆ ಕಳೆದ ಏಪ್ರಿಲ್ 25ರಂದೇ ಸೌದಿಗೆ ತೆರಳಿದೆ. ಈ ಪ್ರವಾಸದ ಹಿಂದೆ ಇರುವ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಒತ್ತಾಯ ಪ್ರಾರಂಭವಾಗಿದೆ ಮತ್ತು ಈಗಾಗಲೇ ಮುಸ್ಕಾನ್ ಕುಟುಂಬದ ಪಾಸ್ ಪೋರ್ಟ್ ಪೊಲೀಸ್ ವಶಕ್ಕೆ ಪಡೆಯಬೇಕೆಂದು ಹಲವು ಸಂಘಟನೆಗಳು ದೂರು ನೀಡಿದ್ದಾರೆ.