ಮೈಸೂರು: ಕಸದ ತಿಪ್ಪೆ ತೆರವು ವಿಚಾರದಲ್ಲಿ ಅಧಿಕಾರಿಗಳ ಹೈಡ್ರಾಮ ನಡೆದಿದ್ದು, ಒಂದೇ ಕುಟುಂಬದ 7 ಮಂದಿ ಮೇಲೆ ಎಫ್ಐಆರ್ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.
ಪೌರ ಕಾರ್ಮಿಕ ಮುರುಗನ್ಗೆ ಸೇರಿದ ನಿವೇಶನದ ಮುಂದೆ ಅದೇ ಊರಿನ ಶಿವಕುಮಾರ್ ಎಂಬುವರರ ಕುಟುಂಬ ಪ್ರತಿದಿನವೂ ಮುರುಗನ್ ಮನೆ ಮುಂದೆ ಕಸವನ್ನು ಸುರಿಯುತ್ತಿದ್ದರು.
ಮನೆ ಮುಂದೆ ಹಾಕಿರುವ ಕಸದ ತಿಪ್ಪೆಯನ್ನು ತೆರವು ಮಾಡಿಸಿಕೊಂಡವಂತೆ ಬಿಳಿಗೆರೆ ಗ್ರಾಮಪಂಚಾಯ್ತಿ ಸದಸ್ಯ ಶಿವರಾಜ್ ಎಂಬವವರ ಗಮನಕ್ಕೆ ತಂದಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಪರಿಣಾಮ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ದೊಡ್ಡ ಹೈಡ್ರಾಮವೇ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಬಿಳಿಗೆರೆ ಪೊಲೀಸ್ ಠಾಣೆ ಪೋಲಿಸರು ಶಿವಕುಮಾರ್ ಸೇರಿದಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.