ಬೆಂಗಳೂರು: ಆಜಾನ್ ,ಭಜನ್ ವಿವಾದ ರಾಜ್ಯದಲ್ಲಿ ತೀವ್ರ ಆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕೋಕೆ ನಿರ್ಧಾರ ಮಾಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಇರುವ ನಿಯಮಗಳನ್ನ ಜಾರಿಗೆ ತರಲು ತೀರ್ಮಾನಿಸಿರುವ ಸರ್ಕಾರ ಉಲ್ಲಂಘನೆ ಮಾಡಿದವರ ವಿರುದ್ಧ ಕೇಸ್ ದಾಖಲು ನಿರ್ಣಯ ಮಾಡಿದೆ. ಹಾಗೇ ಶೀಘ್ರದಲ್ಲೇ ಸಮಗ್ರ ಸುತ್ತೋಲೆ ಹೊರಡಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಆಜಾನ್, ಭಜನ್ ವಿವಾದ ದಿನೆ ದಿನೆ ತಾರಕ್ಕೆರುತ್ತಿದೆ.ಇದನ್ನ ನಿಯಂತ್ರಣ ಮಾಡಲು ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ. ನಿನ್ನೆ ಗೃಹ ಇಲಾಖೆ ಅಧಿಕಾರಿಳು, ಕಾನೂನು ತಜ್ಞರು, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಸಿಎಂ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ ಈ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ ಆನಂದ್ ಸಿಂಗ್, ಈಗ ಸಿಎಂ ಪೊಲೀಸ್ ಇಲಾಖೆ ಮತ್ತು ಪರಿಸರ ಮಾಲಿನ್ಯ ಇಲಾಖೆ ಜೊತೆ ಸಭೆ ಮಾಡಿ, ದಾರ್ಮಿಕ ಕೇಂದ್ರ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವೇಳೆ ನಿಯಮ ಪಾಲನೆ ಮಾಡ್ತಿಲ್ಲ ಅಂತ ಹೋರಾಟ ಆಗ್ತಿದೆ.ಸುಪ್ರೀಂ ಕೋರ್ಟ್ ಆದೇಶ ಇದೆ, ಅದನ್ನ ಕಾರ್ಯ ರೂಪಕ್ಕೆ ತರಲು ಚರ್ಚೆಯಾಗಿದೆ, ಈ ಬಗ್ಗೆ ನಿನ್ನೆ ಸಿಎಂ ಸೂಚನೆ ನೀಡಿದ್ದಾರೆ.
ಸಿಎಂ ಸೂಚನೆ ಮೇರೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಪೊಲೀಸ್ ಕಮೀಷನರೇಟ್ ಇರೋ ಕಡೆ ಮೂವರ ಸಮಿತಿ ರಚಿಸಲಾಗಿದೆ.ಕಮೀಷನರೇಟ್ ಇಲ್ಲದ ಕಡೆ DYSP ಕಮಿಟಿ ಇದೆ.ಅಲ್ದೆ ಯಾವ ಯಾವ ಭಾಗದಲ್ಲಿ ಎಷ್ಟು ಡಿಸೆಬಲ್ ಇರಬೇಕು ಅಂತ ಸುಪ್ರೀಂಕೋರ್ಟ್ ಹೇಳಿದೆ. ರೆಸಿಡನ್ಸ್ ಏರಿಯಾ, ಸಿಟಿ ಏರಿಯಾದಲ್ಲಿ ಎಷ್ಟು ಸೌಂಡ್ ಇರಬೇಕು.ಬೆಳಗ್ಗೆ ಸುಪ್ರಭಾತ ಹಾಕುವಾಗ ಬೆಳಗ್ಗೆ ಎಷ್ಟು, ರಾತ್ತಿ ಎಷ್ಟು ಇರಬೇಕು ಅಂತ ಇದೆ.ನಿಯಮ ಜಾರಿ ಮಾಡದಿರುವಾಗ ಪೊಲೀಸ್ ಇಲಾಖೆ ಏನು ನಿಯಮ ಜಾರಿಗೆ ತರಬೇಕು ಅಂತ ಸಿಎಂ ಸೂಚಿಸಿದ್ದಾರೆ.
ಎಷ್ಟು ಡೆಸಿಬಲ್ ಗೆ ಅವಕಾಶ..?
ಇಂಡೀಸ್ಟ್ರಿ ಏರಿಯಾ ಬೆಳಗ್ಗೆ 75 , ರಾತ್ರಿ 70 ಡೆಸಿಬಲ್
ಕಮರ್ಶಿಯಲ್ ಏರಿಯಾ ಬೆಳಗ್ಗೆ 65 ರಾತ್ರಿ 55
ರೆಸಿಡೆಂಟ್ ಏರಿಯಾ ಬೆಳಗ್ಗೆ 55 ರಾತ್ರಿ 45
ಸೈಲೆಂಟ್ ಜೋನ್ ಬೆಳಗ್ಗೆ 50 ರಾತ್ರಿ 40 ಡೆಸಿಬಲ್
ಇದೇ ವೇಳೆ ದೇವಸ್ಥಾನ, ಮಸೀದಿ, ಚರ್ಚ್ ಆಗಿರಲಿ ನಿಯಮ ಪಾಲಿಸದವರ ವಿರುದ್ಧ ಕ್ರಮ ಆಗಲಿದೆ., ಸ್ಥಳೀಯ ಜನರು ದೂರು ನೀಡಿದ್ರೆ ಕ್ರಮ ಕೈಗೊಳ್ಳಲಾಗುವುದು .ಜನರಿಗೆ ಸಮಸ್ಯೆ ಆಗ್ತಿದೆ ಅಂತ ಕೆಲ ಸಂಘಟನೆಗಳು ಹೇಳ್ತಿವೆ. ಸಮಸ್ಯೆ ಆದವರು ದೂರು ಕೊಟ್ರೆ ಕ್ರಮ ಕೈಗೊಳ್ಳುತ್ತೇವೆ.ಈಗ ಹೊಸದಾಗಿ ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆದು ನಿಯಮ ಉಲ್ಲಂಘನೆ ಮಾಡಿದ್ರೆದೇವಸ್ಥಾನ, ಚರ್ಚೆ, ಮಸೀದಿಗಳ ಕಮಿಟಿ ಯಾರ ಇರ್ತಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.ಶಬ್ದ ಮಾಲಿನ್ಯ ಸೆಕ್ಷನ್ ಮೇಲೆ ಕೇಸ್ ದಾಖಲಿಸಲಾಗುತ್ತೆ.ಒಂದು ವಾರ 10 ಅಥವಾ 10 ದಿನಗಳಲ್ಲಿ ಜಾರಿ ಮಾಡ್ತೀವಿ.ಗೃಹ ಇಲಾಖೆ ಹೆಚ್ಚು ಜವಾಬ್ದಾರಿ ಇದೆ.ನಾವು ಮಾಹಿತಿ ನೀಡುತ್ತೇವೆ.ಗೃಹ ಇಲಾಖೆ ಸಹಕಾರ ಕೊಡುತ್ತವೆ ಎಂದು ಸ್ಪಷ್ಟನೆ ನೀಡಿದ್ರು.
ಒಟ್ನಲ್ಲಿ ಹಲವು ದಿನಗಳಿಂದ ರಾಜ್ಯದಲ್ಲಿ ಸೃಷ್ಟಿ ಆಗಿರುವ ವಿವಾದಕ್ಕೆ ಸರ್ಕಾರ ಕೆಲವ ದಿನಗಳಲ್ಲಿ ತಜ್ಞರ ಜೊತೆ ಚರ್ಚೆ ನಡೆಸಿ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಮುಂದಾಗಿದೆ.ಅಲ್ದೆ ಯಾರೇ ನಿಯಮ ಉಲ್ಲಂಘನೆ ಮಾಡಿದ್ರು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಹೀಗಾಗಿ ಇನ್ನು 5 ದಿನದಲ್ಲಿ ಸುತ್ತೋಲೆ ಹೊರಡಿಸಿದೆ.