ಸಂದೀಪ್ ಉನ್ನಿಕೃಷ್ಣನ್.. ಹದಿಮೂರು ವರ್ಷದ ಹಿಂದೆ ಮುಂಬೈನ ತಾಜ್ ಹೋಟೆಲ್ನ ಟೆರರ್ ಅಟ್ಯಾಕ್ನಲ್ಲಿ ಪ್ರಾಣ ತೆತ್ತ ವೀರಯೋಧ. ಬೆಂಗಳೂರಿಂದ ದೇಶಸೇವೆಗೆ ಹೊರಟಿದ್ದ ಮೇಜರ್ ಸಂದೀಪ್, ಮತ್ತೆ ಸಿಲಿಕಾನ್ ಸಿಟಿಗೆ ಬಂದಿದ್ದು ಹುತಾತ್ಮರಾಗಿ. ಅವ್ರ ತ್ಯಾಗ, ಬಲಿದಾನದ ಲೈಫ್ ಜರ್ನಿ ಬೆಳ್ಳಿಪರದೆ ಬೆಳಗಲು ಸಜ್ಜಾಗಿದೆ. ಟ್ರೈಲರ್ ಕೂಡ ಲಾಂಚ್ ಆಗಿದ್ದು, ದೇಶಪ್ರೇಮದ ಕಿಚ್ಚು ಹೊತ್ತಿಸಿದೆ.
- ತೆರೆ ಮೇಲೆ 26/11 ಅಟ್ಯಾಕ್ನ ‘ಮೇಜರ್’ ಸಂದೀಪ್ ಕಥೆ
- ಬೆಳ್ಳಿತೆರೆ ಮೇಲೆ ಸೋಲ್ಜರ್ ಸಂದೀಪ್ ದೇಶಪ್ರೇಮದ ಕಿಚ್ಚು
- ಪ್ರಿನ್ಸ್ ಮಹೇಶ್ ಬಾಬು ನಿರ್ಮಾಣದಲ್ಲಿ ಮೇಜರ್ ಪ್ರಾಜೆಕ್ಟ್
- ಭಾರತೀಯರ ಹೃದಯಗಳಲ್ಲಿ ಆ ಹೋರಾಟ ಜೀವಂತ..!
26/11 ಅಟ್ಯಾಕ್ ಅಂತಲೇ ಇತಿಹಾಸದ ಪುಟಗಳಲ್ಲಿ ಕರಾಳ ದಿನವಾಗಿ ಉಳಿದುಹೋದ ಮುಂಬೈ ತಾಜ್ ಹೋಟೆಲ್ ಹೈಜಾಕ್ ನಡೆದು ಬರೋಬ್ಬರಿ 13 ವರ್ಷಗಳೇ ಕಳೆದಿದೆ. ಅಲ್ಲಿನ ಆಪರೇಷನ್ನಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳಾ ಮೂಲದ ಮೇಜರ್ ಸಂದೀಪ್ ಉನ್ನಿಕೃಷ್ಣ ನ್ ಹುತಾತ್ಮರಾಗಿದ್ರು. ಅವರ ಆ ತ್ಯಾಗ ಬಲಿದಾನದ ಕುರಿತಾದ ಥ್ರಿಲ್ಲಿಂಗ್ ಕಥಾನಕ ಈಗ ಬೆಳ್ಳಿತೆರೆ ಮೇಲೆ ಮೂಡಿಬರ್ತಿದೆ.
ಅಡವಿ ಶೇಷು ಮೇಜರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಲುಕ್ ಟೆಸ್ಟ್ ಮಾಡಿದಾಗಲೇ ಎಲ್ಲರ ಮನಸ್ಸು ಗೆದ್ದಿದ್ರು. ನಂತ್ರ ಟೀಸರ್ಇಂಪ್ರೆಸ್ಸೀವ್ ಅನಿಸಿತ್ತು. ಇದೀಗ ಟ್ರೈಲರ್ ಲಾಂಚ್ ಆಗಿದ್ದು, ಮೈಂಡ್ ಬ್ಲೋಯಿಂಗ್ ಅನಿಸಿದೆ. ಆ ಪಾತ್ರಕ್ಕಾಗಿ ಎಷ್ಟರ ಮಟ್ಟಿಗೆ ಹಾರ್ಡ್ ವರ್ಕ್ ಹಾಗೂ ಡೆಡಿಕೇಷನ್ ಇದೆ ಅನ್ನೋದನ್ನ ಇಡೀ ಭಾರತೀಯ ಚಿತ್ರರಂಗಕ್ಕೆ ಅರ್ಥೈಸಿದ್ದಾರೆ ಅಡವಿ ಶೇಷು.
ಸತತ ಹನ್ನೆರಡು ವರ್ಷದಿಂದ ಸಂದೀಪ್ ಪೋಷಕರನ್ನ ಸಿನಿಮಾಗಾಗಿ ಒಪ್ಪಿಸೋ ಪ್ರಯತ್ನದಲ್ಲಿದ್ದ ಅಡವಿ ಶೇಷು ಕೊನೆಗೂ ಸಕ್ಸಸ್ ಆಗಿದ್ರು. ಆ ಕುರಿತ ವಿಡಿಯೋ ರಿವೀಲ್ ಮಾಡಿದ್ದ ಶೇಷುಗೆ, ಅವ್ರ ಸಿನಿಮಾ ಪ್ಯಾಷನ್ ನೋಡಿ ಪ್ರಿನ್ಸ್ ಮಹೇಶ್ ಬಾಬು ಸಾಥ್ ಕೊಟ್ಟಿದ್ರು. ಸದ್ಯ ಮೇಜರ್ ಸಿನಿಮಾನ ಮಹೇಶ್ ಬಾಬು ಅವ್ರೇ ನಿರ್ಮಿಸಿರೋದು ಇಂಟರೆಸ್ಟಿಂಗ್.
ಈ ಹಿಂದೆ ಗೂಢಚಾರಿ ಸಿನಿಮಾದಲ್ಲಿ ರಾ ಏಜೆಂಟ್ ಆಗಿ ನೋಡುಗರಿಗೆ ಮಸ್ತ್ ಕಿಕ್ ಕೊಟ್ಟಿದ್ದ ಶೇಷು, ಈ ಸಿನಿಮಾಗಾಗಿ ತಾವೇ ಸ್ವತಃ ಊಹೆಗೂ ಮೀರಿದಷ್ಟು ಎಫರ್ಟ್ ಹಾಕಿದ್ದಾರೆ. ಇನ್ನು ಆರ್ಮಿ ಆಫೀಸರ್ ಆಗಿ ಮತ್ತೊಮ್ಮೆ ಕಮಾಲ್ ಮಾಡಲಿರೋ ಶೇಷುಗೆ ಗೂಢಚಾರಿ ಡೈರೆಕ್ಟರ್ ಶಶಿ ಕಿರಣ್ ಅವ್ರೇ ಌಕ್ಷನ್ ಕಟ್ ಹೇಳಿದ್ದಾರೆ. ವಿಶೇಷ ಅಂದ್ರೆ ಪ್ರಕಾಶ್ ರೈ ಅವ್ರು ಮೇಜರ್ ಸಂದೀಪ್ ಅವ್ರ ತಂದೆ ಪಾತ್ರದಲ್ಲಿ ಕಾಣಸಿಗ್ತಾರೆ.
ಒಟ್ಟಾರೆ ಅಡವಿ ಶೇಷು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಮ್ಮ ಕರುನಾಡಿನ ಮೇಜರ್ ಸಂದೀಪ್ ರೋಲ್ ಮಾಡ್ತಿರೋದು ಖುಷಿಯ ವಿಚಾರ. ದೇಶಭಕ್ತಿ ಹೆಚ್ಚಿಸೋ, ನೋಡುಗರ ರಕ್ತ ಕುದಿಯುವಂತೆ ಮಾಡೋ ಈ ಸಿನಿಮಾ ನಿಜಕ್ಕೂ ಇಂದಿನ ಯುವ ಪೀಳಿಗೆಗೆ ಒಂದು ಸ್ಟ್ರಾಂಗ್ ಮೆಸೇಜ್ ಅಂತೂ ನೀಡಲಿದೆ. ಅಂದಹಾಗೆ ಟ್ರೈಲರ್ ಮುಖೇನ ಆಪರೇಷನ್ಗೆ ಸಜ್ಜಾಗಿರೋ ಮೇಜರ್, ಇದೇ ಜೂನ್ 3ಕ್ಕೆ ಬಿಗ್ಸ್ಕ್ರೀನ್ ಮೇಲೆ ಆರ್ಭಟಿಸಲಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ