ಚಾಮರಾಜನಗರ: ವ್ಯಕ್ತಿಯೊರ್ವ 7 ರಿಂದ 8 ತಾಸು ಉಸಿರಾಟ ನಿಲ್ಲಿಸಿ ಮತ್ತೇ ಬದುಕಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಸೀಗಮಾರಮ್ಮನ ಹಬ್ಬವು 19 ವರ್ಷಗಳ ಬಳಿಕ ಗ್ರಾಮದಲ್ಲಿ ನಡೆದಿದೆ. ಈ ಹಬ್ಬದ ವಿಶೇಷ ಅಂದ್ರೆ ನರಬಲಿ ಕೊಡುವುದು. ರಾತ್ರಿ ವ್ಯಕ್ತಿಯ ಸಾವು ಬೆಳಗ್ಗೆ ಅದೇ ವ್ಯಕ್ತಿಗೆ ಮರುಜೀವ ಬರುತ್ತದೆ. ವ್ಯಕ್ತಿ ಸತ್ತ ಬಳಿಕ ಆತನ ಶವವನ್ನು ಜಾತ್ರೆಯಲ್ಲಿ ಮೆರೆವಣಿಗೆ ಮಾಡುವ ವೇಳೆ ಶವವನ್ನ ಭಕ್ತ ಸಮೂಹ ಮೇಲಕ್ಕೆ ಎಸೆಯುವ ಆಚರಣೆ ರೂಢಿಯಲ್ಲಿದೆ.
ಇನ್ನು ಸೀಗಮಾರಮ್ಮ ಜಾತ್ರೆಯೂ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ (ಇಂದು) ಬೆಳಗ್ಗೆ ವರೆಗೆ ನಡೆದಿದೆ. ಮೇಲ್ನೋಟಕ್ಕೆ ವ್ಯಕ್ತಿ ಜೀವ ಕಳೆದುಕೊಂಡು ತಾಸುಗಟ್ಟಲೇ ಕಳೆದ ಬಳಿಕ ಮತ್ತೇ ಬದುಕಿಬಂದಂತೆ ಕಾಣುವ ದೃಶ್ಯ ನಿಜಕ್ಕೂ ಆಶ್ಚರಿ ಮೂಡಿಸುತ್ತದೆ.
ಕಳೆದ 24 ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿತ್ತು. ಸೋಮವಾರ(ನಿನ್ನೆ) ನರಬಲಿ ಆಚರಣೆ ಮೂಲಕ ಹಬ್ಬ ವಿಜೃಂಭಣೆಯಿಂದ ಜರುಗಿತು. ಸೀಗಮಾರಮ್ಮನ ದೇವಾಲಯದಲ್ಲಿ ಐದು ಮಂದಿ ವಿಶೇಷ ತಂಡ ಬಾವಿಯೊಂದಕ್ಕೆ ಪೂಜೆ ಸಲ್ಲಿಸಿದ್ದಾರೆ.