Friday, November 22, 2024

ಒಂದೇ ಚಾವಡಿಯಲ್ಲಿ ಹಿಂದೂ –ಮುಸ್ಲಿಂ ದೇವರ ಪ್ರತಿಷ್ಠಾಪನೆ

ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಎಲ್ಲಿ ನೋಡಿದ್ರೂ ಧರ್ಮ ಧರ್ಮಗಳ ಮಧ್ಯೆ ಕೋಮುದಳ್ಳುರಿಗೆ ಅದೆಷ್ಟೋ ಜನ, ಜೀವ ತೆತ್ತಿದ್ದಾರೆ. ಧರ್ಮ-ಧರ್ಮಗಳ ಮಧ್ಯೆ ಘೋರ ಯುದ್ದಗಳೂ ನಡೆದು ಹೋಗಿವೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಕುಟುಂಬಗಳು ಹಲವು ದಶಕಗಳಿಂದ ನಾವೆಲ್ಲಾ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಬಾವ ಬಾವ ಮೈದರು ಎನ್ನುವ ಭಾವನೆಯಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇಷ್ಟಕ್ಕೂ ಅದು ಯಾವ ಗ್ರಾಮ ಯಾವ ಜಿಲ್ಲೇ ಅಂತೀರಾ..? ಈ ಸ್ಟೋರಿ ಓದಿ.

ಹಿಂದೂ ಹಾಗೂ ಮುಸ್ಮಿಂಮರು ಒಟ್ಟಿಗೆ ಪೂಜೆ ನಡೆಸುತ್ತಿರುವ ದೃಶ್ಯಗಳು. ಒಂದೇ ಗುಡಿಯಲ್ಲಿ ಎರಡು ಮತಗಳ ದೇವರ ಗುಡಿ. ಇದನ್ನ ನೋಡಿದ್ರೆ ಎಂತಹವರಿಗೆ ಒಮ್ಮೆ ಅಚ್ಚರಿಯಾಗೊದಂತೂ ನಿಜ. ಒಂದೇ ಗುಡಿಯಲ್ಲಿ ಎರಡು ಮತಗಳ ದೇವರನ್ನು ಆರಾಧಿಸಿ ಒಬ್ಬರಿಗೆ ಒಬ್ಬರು ಸಹಾಯಮಾಡಿಕೊಂಡು, ಒಂದೇ ಗುಡಿಯಲ್ಲಿ ಹಿಂದೂಗಳ ದೇವರಾದ ವೀರಾಂಜನೇಯ ಹಾಗೂ ಮುಸ್ಲಿಂರ ಬಾಬಯ್ಯನ ದೇಗುಲವಿರೋದು ಚಿಕ್ಕಬಳ್ಳಾಫುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ . ಈ ಗ್ರಾಮವು ಸುಮಾರು 1000 ಮಂದಿ ಜನಸಂಖ್ಯೆಯನ್ನು ಹೊಂದಿದ್ದ ಇದರಲ್ಲಿ ಸುಮಾರು 60 ಕುಟುಂಬಗಳು ಮುಸ್ಲಿಂ ಜನಾಂಗದವರು ಇದ್ದಾರೆ. ಹಿಂದೂ ಕುಟುಂಬಗಳು 110 ಕುಟುಂಬಗಳು ಇದ್ದಾವೆ.

ಸಾಮಾನ್ಯವಾಗಿ ಹಿಂದೂ ಮುಸ್ಲಿಮ್ಮರ ದೇಗುಲಗಳು ಬೇರೆ ಬೇರೆಯಾಗಿರುತ್ತೆ. ಆದರೆ, ಈ ಗ್ರಾಮದಲ್ಲಿ ಮಾತ್ರ ದೇಶಕ್ಕೆ ಮಾದರಿಯಾಗುವಂತೆ ಎರಡು ಮತಗಳ ದೇವರುಗಳು ಒಂದೇ ಆಲಯದಲ್ಲಿ ಕಂಡು ಬಂದಿದ್ದು ಅಚ್ಚರಿಯನ್ನು ಮೂಡಿಸಿದೆ. ಇನ್ನೂ ಗ್ರಾಮದಲ್ಲಿ ಹಲವು ವರ್ಷಗಳಿಂದ ಬಾಬಯ್ಯನ ಗುಡಿ ಇದ್ದು ಅದು ಶಿಥಿಲಾವಸ್ಥೆಗೆ ಬಂದ ಸಮಯದಲ್ಲಿ ಗ್ರಾಮದ ಹಿರಿಯರು ಮಾತನಾಡಿಕೊಂಡು ನೂತನವಾಗಿ ನಿರ್ಮಿಸುವ ಆಲಯದಲ್ಲಿ ಹಿಂದೂ ಹಾಗೂ ಮುಸ್ಲಿಂಮ್ಮರು ದೇವರುಗಳು ಇರಬೇಕೆಂದು ಚಿಂತನೆ ನಡೆಸಿ ಎರಡು ದೇವರ ವಿಗ್ರಹಗಳನ್ನು ಒಂದೇ ಗುಡಿಯಲ್ಲಿ ಅಕ್ಕ ಪಕ್ಕ ಪ್ರತಿಷ್ಟಾಪಿಸಿ ವಿಭಿನ್ನತೆಯನ್ನು ಹಾಗೂ ಸೌರ್ಹದತೆಯನ್ನು ದೇಶಕ್ಕೆ ಸಾರಿ ಹೇಳಿದ್ದಾರೆ.

ಇದಕ್ಕೆ ಸಂಕೇತವೆಂಬಂತೆ ಒಂದೇ ಚಾವಡಿಯ ದೇವಸ್ಥಾನದಲ್ಲಿ ಒಂದೆಡೆ ಹಿಂದೂ ಆಂಜನೇಸ್ವಾಮಿ, ಮತ್ತೊಂದೆಡೆ ಮುಸ್ಲಿಂ ಬಾಬಯ್ಯ ದೇವರ ವಿಗ್ರಹಗಳನ್ನು ಪ್ರತಿಷ್ಟಾಪಿಸಿ, ಒಟ್ಟಿಗೇ ಎರಡೂ ದೇವರುಗಳನ್ನು ಆರಾಧಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ಈ ಗ್ರಾಮದಲ್ಲಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಜನರಿದ್ದು, ದೇವರೊಬ್ಬ ನಾಮ ಹಲವು ಎನ್ನುವ ಹಾಗೆ, ಇಲ್ಲಿಯ ಜನ ಒಂದೇ ಛತ್ರದಲ್ಲಿ ಆಂಜನೇಯ ಸ್ವಾಮಿ ವಿಗ್ರಹ ಹಾಗೂ ಬಾಬಯ್ಯ ದೇವರನ್ನು ಪ್ರತಿಷ್ಠಾಪಿಸಿ ಒಟ್ಟೊಟ್ಟಿಗೆ ಪೂಜೆ ಪುನಸ್ಕಾರ, ನಮಾಜ್, ಪ್ರಾರ್ಥನೆ ಮಾಡುವುದರ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದ್ದಾರೆ.

ಇದು ಗಡಿ ಜಿಲ್ಲೆಯ ಚಿಕ್ಕ ಗ್ರಾಮ ಆದರೂ ಅನಾದಿ ಕಾಲದಿಂದಲೂ ಯಾವುದೇ ಜಾತಿ ಭೇದ ಭಾವವಿಲ್ಲದೆ ಎಲ್ಲರು ಭಾಯಿ ಭಾಯಿ ಎನ್ನುವಂತೆ ಜೀವನ ನಡೆಸ್ತಾರೆ. ವಿದ್ಯಾವಂತರು ಹೆಚ್ಚಾಗಿರುವ ಕರಾವಳಿ ಭಾಗದಲ್ಲಿ ಕೋಮು ಗಲಭೆಗಳು ಹೆಚ್ಚಾಗಿ ನಡೆಯುತ್ತೆ ಅನ್ನೋ ಮಾತಿದೆ. ಆದ್ರೆ ಈ ಗ್ರಾಮದಲ್ಲಿನ ಜನತೆ ರಾಜ್ಯವು ಸೇರಿದಂತೆ ದೇಶದ ಜನತೆಗೆ ಮಾದರಿಯಾಗಿದ್ದಾರೆ. ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನಡೆಸಿ ಎರಡು ಮತಗಳ ಜನತೆ ಇದರಲ್ಲಿ ಭಾಗಿಯಾಗೋದು ಈ ಗ್ರಾಮದ ವಾಡಿಕೆಯಾಗಿದೆ. ಇನ್ನು ಜಾತಿ, ಮತ, ಧರ್ಮ ಎಂದು ಕೋಮು ಗಲಭೆಗಳು ನಡೆಯುತ್ತಿರುವ ಇಂದಿನ ಯುಗದಲ್ಲಿ ಗಡಿ ನಾಡಿನ ಗ್ರಾಮವೊಂದು ಹಿಂದೂ ಮುಸ್ಲಿಂ ಭಾಂದವ್ಯ ಹೊಸ ಪ್ರಪಂಚಕ್ಕೆ ನಾಂದಿಯಾಡಲಿದೆ.

ಹಿಂದೂಗಳ ಹಬ್ಬಕ್ಕೆ ಮುಸ್ಮಿಂಮ್ಮರು ಸಾಥ್ ನೀಡೋದು ಮುಸ್ಲಿಂಮ್ಮರ ಹಬ್ಬಗಳಿಗೆ ಹಿಂದೂ ಸಮುದಾಯದ ಜನತೆ ಸಹಾಯಹಸ್ತ ನೀಡಿ ನಾವೆಲ್ಲ ಒಂದೇ ಎಂಬ ವೇದ ಘೋಷವನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿನ ಜನತೆ, ಅದು ಏನೇ ಆಗಲಿ ಕುಲ ಕುಲ ಕುಲವೆಂದು ಹೊಡೆದಾಡುವ ಇಂದಿನ ಯುಗದಲ್ಲಿ ಜಗದಲ್ಲೇ ಇರುವುದು ಒಂದೇ ಧರ್ಮ ಅದು ಮಾನವಧರ್ಮ ಎಂದು ಜಗತ್ತಿಗೆ ನೂತನ ಸಂದೇಶವನ್ನು ಮಲ್ಲಸಂದ್ರ ಗ್ರಾಮ ಸಾರುತ್ತಿದೆ. ಈ ಗ್ರಾಮದಲ್ಲಿ ದೇಶದಲ್ಲಿ ಕೋಮ ಸೌರ್ಹಾದತೆಯನ್ನು ಮೆರೆದ್ರೆ ನಾವೆಲ್ಲ ಒಂದು ಹೊಸ ಪ್ರಪಂಚವನ್ನು ನೋಡೋದ್ರಲ್ಲಿ ಯಾವುದೇ ಸಂಶಯವಿಲ್ಲ.

RELATED ARTICLES

Related Articles

TRENDING ARTICLES