ಬೆಂಗಳೂರು : ಅವರವರ ಧರ್ಮಕ್ಕೆ ಅವರವರು ಗೌರವ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಪೊಲೀಸರು ಅದನ್ನ ಪಾಲಿಸುತ್ತಾರೆ. ನಮ್ಮ ಪಕ್ಷದ ಅಲ್ಪ ಸಂಖ್ಯಾತ ಶಾಸಕರ ನಿಯೋಗ ಇಂದು ಸಿಎಂ ಭೇಟಿ ಮಾಡಿ ಮನವಿ ಸಹಾ ಮಾಡಿದ್ದಾರೆ. ಬೇಕಂತ ಕೆಣಕಿಕೊಂಡು ಜಗಳಕ್ಕೆ ಬರ್ತಿದಾರೆ. ಇದು ಸರ್ಕಾರದ ಜವಬ್ದಾರಿ ಎಂದು ಗುಡುಗಿದರು.
ಅದುವಲ್ಲದೇ ಸಿಎಂ ಹಾಗೂ ಗೃಹ ಸಚಿವರು ರಾಜ್ಯದಲ್ಲಿ ಜವಬ್ದಾರಿಯುತ ಶಾಂತಿಯನ್ನ ಕಾಪಾಡಬೇಕು. ಕುವೆಂಪು ಹೇಳಿದಂತೆ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು.ಇನ್ನು ಹೆಣ್ಣೂರುನಲ್ಲಾದ ಹಿಂದು ಕಾರ್ಯಕರ್ತನ ಹತ್ಯಾ ಯತ್ನವು ಅದು ಪೊಲೀಸರ ಡ್ಯೂಟಿ, ಅದರ ಬಗ್ಗೆ ಫುಲ್ ಇನ್ ಫರ್ಮೆಷನ್ ನನಗೆ ಇಲ್ಲಾ, ಆದ್ದರಿಂದ ಸಂಪೂರ್ಣ ಮಾಹಿತಿ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
ಇನ್ನು ಕಾಂಗ್ರೆಸ್ನ ಅಜೆಂಡಾ ಭ್ರಷ್ಟಚಾರ ಮತ್ತು ಭಯೋತ್ಪಾದನೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಪೋಸ್ಟ್ಗೆ , ಪಿಎಸ್ ನೇಮಕಾತಿಗೆ ದಿನ ಪತ್ರಿಕೆಯಲ್ಲಿ, ಚಾನಲ್ನಲ್ಲಿ ವಿಷಯ ಬರುತ್ತಿದೆ. ಅವರ ಮಕ್ಕಳಿಗೆ ಮಸಿ ಬಳಿದುಕೊಂಡು ಕೂರಲಿ. ಅವರಿಗೆ ಮುಖ ತೋರಿಸೋಕೆ ಆಗುತ್ತಿಲ್ಲ. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ. ಅವರು ಮೊದಲು ಮುಖ ತೊಳೆದುಕೊಳ್ಳಲಿ. ನಮ್ಮದೇನು ಹೇಳ್ತಾರೆ ಅವರ ಮನೆ ಸರಿಮಾಡಿಕೊಳ್ಳಲಿ ಮೊದಲು. ಕ್ಯಾಬಿನೆಟ್ ಡ್ರಾಪ್ ಆ ಡ್ರಾಪ್ ಈ ಡ್ರಾಪ್ ಎಲ್ಲಾ ಆಗ್ತಿದೆಯಲ್ಲಾ ಅದನ್ನ ಮೊದಲು ನೋಡಿಕೊಳ್ಳಲಿ ಎಂದು ನಳೀನ್ ಕುಮಾರ್ ಕಟೀಲ್ಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.