ಚಿಕ್ಕಬಳ್ಳಾಪುರ : ಜಿಲ್ಲೆಯ ರೈತರು ಸಿಲ್ಕ್ & ಮಿಲ್ಕ್, ತರಕಾರಿ, ಹಣ್ಣು ಹಂಪಲು ಸೇರಿ ದ್ರಾಕ್ಷಿ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಉತ್ತಮ ತಳಿಯ ದ್ರಾಕ್ಷಿ ಬೆಳೆ ಬೆಳೆದಿದ್ದರು.. ಇನ್ನೆನು ಕಟಾವು ಮಾಡಿ ಮಾರ್ಕೆಟ್ಗೆ ಹಾಕಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ದ್ರಾಕ್ಷಿ ಬೆಲೆ ಕುಸಿದಿದೆ.. ಇದ್ರಿಂದ, ಕಂಗಾಲಾಗಿರುವ ರೈತರು ಮಾಡಿದ ಬೆಳೆ ಸಾಲ ತೀರಿಸೋದು ಹೇಗೆ ಅನ್ನೋ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಯಲುಸೀಮೆಯ ಜಿಲ್ಲೆ, ಬರಪೀಡಿತ ಪ್ರದೇಶವೆಂಬ ಕುಖ್ಯಾತಿಯೂ ಪಡೆದಿದೆ. ಸಾವಿರಾರು ಅಡಿ ಕೊಳವೆ ಬಾವಿ ಕೊರೆದ್ರೂ ನೀರು ಸಿಗಲ್ಲ.. ಅಂತದ್ರಲ್ಲಿ ಪಾತಾಳದಿಂದ ಹನಿ ಹನಿ ನೀರು ಬಸಿದು ವಿನೂತನ ಮಾದರಿಯಲ್ಲಿ ಬೇಸಾಯ ಮಾಡ್ತಿದ್ದಾರೆ.. ಹನಿ ನೀರಾವರಿಯನ್ನೇ ನಂಬಿ ಜಿಲ್ಲೆಯಾದ್ಯಂತ 9,375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆದಿದ್ದಾರೆ.. ಈ ಭಾರಿ ಉತ್ತಮವಾಗಿ ದ್ರಾಕ್ಷಿ ಫಸಲು ಬಂದಿದೆ.. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು.. ಆದ್ರೆ ಏಕಾಏಕಿ ಬೆಲೆ ಕುಸಿದಿದೆ.. ದಿಲ್ ಖುಷ್ ದ್ರಾಕ್ಷಿಯ ಬೆಲೆ ಕೆಜಿಗೆ ಕೇವಲ 15 ರೂಪಾಯಿಯಿಂದ 20 ರೂಪಾಯಿಗೆ ಮಾತ್ರ ಮಾರಾಟವಾಗ್ತಿದೆ.. ಇನ್ನೂ, ದುಬಾರಿ ನಿರ್ವಹಣೆಗೆ ಹೆಸರುವಾಸಿಯಾಗಿರುವ ಶರತ್, ರೆಡ್ ಗ್ಲೋಬ್, ಸೂಪರ್ ಸೋನಾಲಿಕಾ ದ್ರಾಕ್ಷಿಗೂ ಡಿಮ್ಯಾಂಡ್ ಕಡಿಮೆಯಾಗಿದೆ.. ಇದ್ರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಂದು ಎಕರೆ ದ್ರಾಕ್ಷಿ ತೋಟ ನಿರ್ವಹಣೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಖರ್ಚಾಗುತ್ತೆ. ಕೆ.ಜಿ ದ್ರಾಕ್ಷಿಗೆ ಕನಿಷ್ಠ 50 ರೂಪಾಯಿ ಸಿಕ್ಕರೆ, ಹಾಕಿದ ಬಂಡವಾಳ ವರ್ಕೌಟ್ ಆಗುತ್ತೆ.. ಆದ್ರೆ ಕೆ.ಜಿ ದ್ರಾಕ್ಷಿಗೆ ಕೇವಲ 20 ರೂಪಾಯಿಗೆ ಮಾರಾಟವಾಗ್ತಿದೆ..
ಕೊರೋನಾ ಕಾಟ ಮಹಾ ಮಳೆಯ ಹೊಡೆತದಿಂದ ಚೇತರಿಸಿಕೊಳ್ತಿದ್ದ ರೈತರ ಮೇಲೆ, ಒಂದೆಡೆ ಆಲಿಕಲ್ಲು ಎಫೆಕ್ಟ್ ಆಗಿ, ನೂರಾರು ಎಕರೆ ದ್ರಾಕ್ಷಿ ತೋಟ ಹಾಳಾಗಿದೆ.. ಇನ್ನೂ ಅಳಿದುಳಿದ ದ್ರಾಕ್ಷಿಗೂ ಈಗ ಬೆಲೆ ಇಲ್ಲದಂತಾಗಿದೆ..ಇದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.