ಮಂಗಳೂರು : ಶಾಂತವಾಗಿದ್ದ ಕಡಲನಗರಿಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗ್ತಿದೆ.. ತಾಲಿಬಾನಿಗಳ ರೀತಿ ಹವಾ ಸೃಷ್ಟಿಸಲು ಸಂಘಟನೆಯೊಂದು ಮುಂದಾಗಿದೆ.. ಮುಸ್ಲಿಂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿರುವ ಈ ಅನಾಮಧೇಯ ಗುಂಪು, ಅನೈತಿಕ ಪೊಲೀಸ್ ಗಿರಿಯ ಬಹಿರಂಗ ಬೆದರಿಕೆ ಹಾಕಿದೆ.
ಮಂಗಳೂರು ಎಂದಾಕ್ಷಣ ತಕ್ಷಣ ನೆನೆಪಾಗೋದು ಕೋಮು ಸೂಕ್ಷ್ಮ ಪ್ರದೇಶ.. ಸದ್ಯ ಶಾಂತವಾಗಿರೋ ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ.. ಮಂಗಳೂರಲ್ಲಿ ಹವಾ ಸೃಷ್ಟಿಸಿ ತಾಲಿಬಾನ್ ಸಂಸ್ಕೃತಿ ಹೇರಲು ಸಂಘಟನೆಯೊಂದು ಸಿದ್ದವಾಗಿದೆ.. ಸೋಷಿಯಲ್ ಮೀಡಿಯಾವನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಈ ಸಂಘಟನೆಗಳು, ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂದು ವಾಟ್ಸ್ ಆ್ಯಪ್ ಗ್ರೂಪ್ ರಚನೆ ಮಾಡಿ ನಿಗೂಢವಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಮುಸ್ಲಿಂ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿರುವ ಈ ಗುಂಪು, ಮುಸ್ಲಿಂ ಯುವತಿಯರು ಮಾಲ್, ಥಿಯೇಟರ್, ಪಾರ್ಕ್ ಮತ್ತು ಬೀಚ್ ಸುತ್ತುವ ಯುವತಿಯರಿಗೆ ಬೆದರಿಕೆ ಹಾಕ್ತಿದ್ದಾರೆ.. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.. ಪಬ್ಲಿಕ್ ಪ್ಲೇಸ್ಗಳಲ್ಲಿ ಯುವಕರ ಜೊತೆ ಯುವತಿಯರು ಸುತ್ತುವುದು ಕಂಡು ಬಂದರೆ ಮಾನಹಾನಿ ಮಾಡುವ ಬೆದರಿಕೆ ಹಾಕಿದ್ದಾರೆ.. ಇನ್ನೂ ಈ ಸಂಘಟನೆಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡರು ಇದೊಂದು ಭಯೋತ್ಪಾದಕ ಸಂಘಟನೆಯಾಗಿದೆ.. ಕರಾವಳಿ ಜಿಲ್ಲೆಯಲ್ಲಿ ಪ್ರಾಯೋಗಿಕ ಶಾಲೆಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.
ಇನ್ನು, ಎಂಎಫ್‍ಡಿ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ನೇತತ್ವದಲ್ಲಿ 6 ತಂಡ ರಚಿಸಿದ್ದು, ಈ ತಂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಗಮನವನ್ನು ಹರಿಸುತ್ತಿದೆ.. ವಿದೇಶಗಳಲ್ಲಿ ಕುಳಿತು ಈ ಸಂಘಟನೆ ಆಪರೇಟ್ ಮಾಡ್ತಿದ್ದು, ತೊಂದರೆಗೆ ಒಳಗಾದ ಯುವತಿಯರು ದೂರು ದಾಖಲು ಮಾಡುವಂತೆ ಪೊಲೀಸರು ಸಂದೇಶ ರವಾನಿಸಿದ್ದಾರೆ.
ಸುಮಾರು 6-7 ತಿಂಗಳಿಂದ ಈ ತಂಡ ನಿಗೂಢವಾಗಿ ಕಾರ್ಯಾಚರಣೆ ಮಾಡುತ್ತಿದೆ.. ಯಾವುದೇ ಒಂದು ಸುಳಿವು ಬಿಟ್ಟುಕೊಡದೆ ಈ ಮುಸ್ಲಿಂ ಡಿಫೆನ್ಸ್ ಫೋರ್ಸ್ ಭೇದಿಸುವುದು ಪೊಲೀಸರಿಗೆ ದೊಡ್ಡ ಟಾಸ್ಕ್ ಆಗಿದೆ.