ಕಲಬುರಗಿ : ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಸಿಐಡಿ ಬಲೆಗೆ ಬಿದ್ದಿರೋ ಡೀಲ್ ಕುಳಗಳು ಒಂದೊಂದೇ ಮಾಹಿತಿ ಬಯಲಾಗ್ತಿದೆ. ಇದರ ಮಧ್ಯೆ ಬಂಧಿತ DySP ಹಗರಣದ ಮಾಹಿತಿ ಮುಚ್ಚಿಹಾಕಲು 10 ಲಕ್ಷ ಪಡೆದಿದ್ದರೆಂದು ದಿವ್ಯಾ ಹಾಗರಗಿ ಮತ್ತು ಹೆಡ್‌ಮಾಸ್ಟರ್ ಕಾಶಿನಾಥ್ ಬಾಯ್ಬಿಟ್ಟಿದ್ದಾರೆ.
ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರೋ ಕರ್ಮಕಾಂಡ, ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ.. ಈ ಹಿಂದೆ ಆಳಂದ DySP ಮಲ್ಲಿಕಾರ್ಜುನ ಸಾಲಿ, ದಿವ್ಯಾ ಹಾಗರಗಿ ಮತ್ತು ಹೆಡ್‌ಮಾಸ್ಟರ್ ಕಾಶಿನಾಥ್‌ಗೆ ಬ್ಲ್ಯಾಕ್ಮೇಲ್ ಮಾಡಿದ್ನಂತೆ.. ಅಕ್ರಮ ನಡೆದಿರೋ ಬಗ್ಗೆ ಮಾಹಿತಿ ಲಿಕ್ ಮಾಡ್ತೇನೆ.. ಅಕ್ರಮ ವಿಚಾರ ಲಿಕ್ ಮಾಡಬಾರದು ಅಂದ್ರೆ 10 ಲಕ್ಷ ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ.. ಸಾಲಿ ಬ್ಲಾಕ್‌ಮೆಲ್‌ಗೆ ಹೆದರಿದ ದಿವ್ಯಾ ಮತ್ತು ಕಾಶಿನಾಥ್ 10 ಲಕ್ಷ ಹಣವನ್ನ ನೀಡಿದ್ದಾರೆ.. ಇದೀಗ ಈ ಸ್ಫೋಟಕ ಮಾಹಿತಿ ಸಿಐಡಿ ಅಧಿಕಾರಿಗಳ ಮುಂದೆ ದಿವ್ಯಾ ಬಾಯ್ಬಿಟ್ಟಿದ್ದಾರೆ.. ದಿವ್ಯಾ ಮಾಹಿತಿ ಆಧರಿಸಿ ಮಲ್ಲಿಕಾರ್ಜುನ ಸಾಲಿಯನ್ನ ಬಂಧಿಸಿದ್ದಾರೆ.
ಸಿಪಿಐ ಆನಂದ ಮೇತ್ರೆ ಜಮೀನು ಖರೀದಿಸಿದ್ದು ಹೇಗೆ..? :
ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದ DySP ಮಲ್ಲಿಕಾರ್ಜುನ ಸಾಲಿ, ಆಳಂದದಿಂದ ಲಿಂಗಸಗೂರಿಗೆ ವರ್ಗಾವಣೆಯಾಗಿದ್ದಾರೆ.. ಇತ್ತ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂದಂತಹ ಹಣದಲ್ಲಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಕೆಲ ಗ್ರಾಮಗಳಲ್ಲಿ ಸಿಪಿಐ ಆನಂದ ಮೇತ್ರೆ, ಬರೋಬ್ಬರಿ 1.25 ಕೋಟಿ ಮೌಲ್ಯದ 22 ಎಕರೆ ಜಮೀನು ಖರೀದಿಸಿದ್ದಾರೆ.. ತನ್ನ ಹೆಸರಿನಲ್ಲಿ ಜಮೀನು ಖರೀದಿಸಿದ್ರೆ, ತೊಂದರೆಯಾಗಬಹುದು ಅಂತಾ ಪರಿಚಿತರ ಹೆಸರಿನ ಮೇಲೆ ಭೂಮಿ ಖರೀದಿ ಮಾಡಿದ್ದಾನೆ.. ಸಿಐಡಿ ಅಧಿಕಾರಿಗಳು ಕಚೇರಿಗೆ ಕರೆತಂದು ದಿವ್ಯಾ ಹಾಗರಗಿ & ಟೀಮ್‌ನೊಂದಿಗೆ ಸಾಮೂಹಿಕ ವಿಚಾರಣೆ ಮಾಡಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ..
DySP ಬಂಧನ ನಾಚಿಕೆಗೇಡಿನ ಸಂಗತಿ : ಗೃಹಸಚಿವ ಆರಗ ಜ್ಞಾನೇಂದ್ರ
ಇನ್ನೂ, ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಲಿಂಗಸುಗೂರು DySP ಮಲ್ಲಿಕಾರ್ಜುನ ಸಾಲಿ ಬಂಧನವಾಗಿರೋದು ನಾಚಿಕೆಗೇಡಿನ ಸಂಗತಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.. ಕಲಬುರಗಿಯಲ್ಲಿ ಮಾತ್ನಾಡಿದ ಆರಗ, ಕರ್ನಾಟಕ ಪೊಲೀಸರು ದೇಶಕ್ಕೆ ಮಾದರಿಯಾಗಿದ್ರು.. ಆದರೆ ಪೊಲೀಸ್ ಇಲಾಖೆಯಲ್ಲಿ ಮೊನ್ನೆ ನಡೆದು ಸಂಗತಿ ಬೇಸರ ಉಂಟು ಮಾಡಿದೆ.. ಪ್ರಕರಣದ ಹಿಂದೆ ಯಾರೇ ಇರಲಿ, ಅವರಿಗೆ ಶಿಕ್ಷೆ ನೀಡುವಂತೆ ಸಿಐಡಿಗೆ ಆದೇಶ ನೀಡಲಾಗಿದ್ದು, ತನಿಖೆ ನಡೆಸಲು ಸಿಐಡಿಗೆ ಫ್ರೀ ಹ್ಯಾಂಡ್ ಕೊಡಲಾಗಿದೆ ಅಂತಾ ಹೇಳಿದರು.
ಅದೇನೆ ಇರಲಿ ಇಷ್ಟು ದಿನ ರಾಜಕೀಯ ಮುಖಂಡರು, ಮಧ್ಯವರ್ತಿಗಳು, ಶಾಲಾ ಮುಖ್ಯಸ್ಥರು, ಶಿಕ್ಷಕಿಯರ ಸುತ್ತ ಅಕ್ರಮದ ಸುಳಿ ಸುತ್ತುತ್ತಿತ್ತು. ಇದೀಗ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳೇ ಬಂಧನವಾಗ್ತಿರೋದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.