ಚಿಕ್ಕಬಳ್ಳಾಪುರ : ರಾಜಕೀಯ ಲಾಭಕ್ಕಾಗಿ ಜನರನ್ನ ಬೀದಿಗೆ ತರುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ರೈತರ ಸಾಲ ಮನ್ನ ಮಾಡುವ ಮೂಲಕ ರೈತನ ಮಗ ಅಂತ ಸಾಬೀತು ಮಾಡಿದರು. ಶಾಶ್ವತವಾದ ನೀರಾವರಿಗಾಗಿ ದೃಢ ಸಂಕಲ್ಪಕ್ಕಾಗಿ ಜೆಡಿಎಸ್ ಹೊರಟಿದೆ. ಕೊಟ್ಟ ಮಾತನ್ನ ಚಾಚುತಪ್ಪದೆ ಪಾಲಿಸೋದು ಜೆಡಿಎಸ್.
ಇನ್ನು ರಾಜ್ಯಕ್ಕೆ, ದೇಶಕ್ಕೆ ಮುಸ್ಲಿಂ, ಕ್ರೈಸ್ತರು ಯಾರು ಬೇಡವಾಗಿದ್ದಾರೆ. ಸಾಮರಸ್ಯ ಹಾಳು ಮಾಡಲು ಬಿಜೆಪಿ ಪಕ್ಷ ಮುಂದಾಗಿದೆ. ಹಿಂದೂಪರ ಸಂಘಟನೆಗಳು ಸೇರಿಕೊಂಡು ಸಾಮರಸ್ಯ ಹಾಳು ಮಾಡುತ್ತಿದೆ. ಬಿಜೆಪಿ ಪಕ್ಷ, ಸಿಎಂ ಇದನ್ನ ನೋಡಿಕೊಂಡು ಸುಮ್ಮನಿದೆ. ರಾಜಕೀಯ ಲಾಭಕ್ಕಾಗಿ ಜನರನ್ನ ಬೀದಿಗೆ ತರುವ ಕೆಲಸ ಮಾಡ್ತಿದೆ. ಬಿಜೆಪಿ ಅವರು ಬೆಂಕಿ ಹಚ್ಚಿ ಮಜಾ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಸುಮ್ಮನಿದ್ದಾರೆ. ಈ ಬಗ್ಗೆ ಮಾತನಾಡುತ್ತಿರುವ ಏಕೈಕ ವ್ಯಕ್ತಿ ಕುಮಾರಸ್ವಾಮಿಯವರು ಮಾತ್ರ ಅಂದರು.
ಅದುವಲ್ಲದೇ ಜೆಡಿಎಸ್ ಅಧಿಕಾರದಲ್ಲಿದ್ದದ್ದು ಕಡಿಮೆ. ಜೆಡಿಎಸ್ನ ಯಾಕೆ ಜನ ಬೆಂಬಲಿಸುತ್ತಿಲ್ಲ ಎಂಬ ನೋವು ಇದೆ. ಆದ್ರೂ ನಾವು ಜನರ ಪರ ಹೋರಾಟ ಮಾಡ್ತಿದ್ದೇವೆ. ಶಾಶ್ವತವಾದ ನೀರಾವರಿ ಯೋಜನೆ ಕೊಡಬೇಕು ಎಂಬ ಕಾರಣಕ್ಕೆ ಪಂಚರತ್ನ ಎಂಬ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಎತ್ತಿನಹೊಳೆ 8000 ಕೋಟಿಗೆ ಮುಗಿಯಬೇಕಿತ್ತು. ಈಗ 21000ಕೋಟಿ ಆಗಿದೆ. ಮುಂದೆ 50000 ಕೋಟಿಗೆ ಹೋದ್ರೂ ಆಚ್ಚರಿ ಇಲ್ಲ. ಇದು ದುಡ್ಡು ಹೊಡೆಯೋ ಸ್ಕೀಂ ಆಗಿದೆ. ನೀರಾವರಿ ಸಚಿವರಾಗಿ ಹೆಚ್ ಡಿ ಡಿ ಕೊಟ್ಟ ಕೊಡುಗೆ ಅಪಾರ. ಎರಡು ರಾಷ್ಟ್ರೀಯ ಪಕ್ಷಗಳಗೆ ಅವಕಾಶ ನೀಡಿದ್ದೀರಿ, ಅವಕಾಶ ಕೊಡದೆ ಇರೋದು ಅಂದರೆ ಜೆಡಿಎಸ್ಗೆ ಮಾತ್ರ. ನಮ್ಮ ಪಕ್ಷಕ್ಕೆ 5 ವರ್ಷದ ಅವಧಿಗೆ ಬೆಂಬಲ ಕೊಡಿ ಎಂದು ಗೌರಿಬಿದನೂರು ನಗರದ ಜನರಲ್ಲಿ ಕಳಕಳಿಯಾಗಿ ಮನವಿ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.