ಬೆಂಗಳೂರು : ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಅದಕ್ಕೆ ನಾವು ಆಹೋರಾತ್ರಿ ಧರಣಿಗೆ ತೀರ್ಮಾನ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು ಶ್ರೀರಾಮ್ ರೆಡ್ಡಿ ಹೋರಾಟಗಾರ,ಇವತ್ತು ಅಗಲಿದ್ದಾರೆ ಅವರಿಗೆ ಶಾಂತಿ ಸಿಗಲಿ ಎಂದರು. ಈಶ್ವರಪ್ಪ ಜಾತ್ರೆ ಕಾಮಗಾರಿ ಅವಕಾಶ ಕೊಟ್ಟಿದ್ದಾರೆ. ಅರ್ಜೆಂಟ್ ಇದೆ ಕೆಲಸ ಮಾಡಿ, ಆಮೇಲೆ ದುಡ್ಡು ಕೊಡ್ತೇವೆ ಅಂದಿದ್ದಾರೆ. ಕೆಲಸ ಮುಗಿದ ಮೇಲೆ ದುಡ್ಡು ಕೇಳಿದ್ದಾರೆ. ಅವಾಗ ೪೦% ಕಮಿಷನ್ ಕೇಳಿದ್ದಾರೆ. ಹಲವು ಬಾರಿ ಈಶ್ವರಪ್ಪ, ಸಂತೋಷ ಅವರನ್ನು ಅಲೆಸಿದ್ದಾರೆ. ಕೆಲಸದ ಹಣ ಬರದೆ ಇರುವುದಕ್ಕೆ ಸಾಲದ ಹಣಕ್ಕೆ ಬಡ್ಡಿ ಕೊಡಲು ಆಗದೆ ಒಡವೆ ಅಡ ಇಟ್ಟಿದ್ದಾರೆ ಎಂದು ಅವರ ಪತ್ನಿ ಹೇಳುತ್ತಿದ್ದಾರೆ.
ಅದುವಲ್ಲದೇ ಸ್ಪಷ್ಟವಾಗಿ ಕೇಸ್ ಇದ್ರು ಕ್ರಮ ಆಗಿಲ್ಲ, ಮತ್ತು ಈಶ್ವರಪ್ಪ ಮೇಲೆ ಭ್ರಷ್ಟಾಚಾರ ಕೇಸ್ ದಾಖಲು ಆಗಿಲ್ಲ. ಉದ್ದೇಶದಿಂದಲೇ ಭ್ರಷ್ಟಾಚಾರ ಕೇಸ್ ಬಿಟ್ಟಿದ್ದಾರೆ. ಕೇವಲ 34 ಮತ್ತು 306 ಕೇಸ್ ಹಾಕಿದ್ದಾರೆ.
ಸಂತೋಷ ಕುಟುಂಬ ಈಶ್ವರಪ್ಪ ಮೇಲೆ ನೇರ ಆರೋಪ ಮಾಡುತ್ತಿದ್ದಾರೆ.
ಕೇಂದ್ರಸಚಿವ ಗಿರಿರಾಜ್ ಸಿಂಗ್ಗೂ ಕೂಡ ಸಂತೋಷ ಪತ್ರ ಬರೆದಿದ್ದರೂ, ಆತ್ಮಹತ್ಯೆ ಒಂದೆ ದಾರಿ ಇದೆ, ಹಣ ಬಿಡುಗಡೆ ಮಾಡಿಸಿ ಅಂತೆಲ್ಲಾ ಮನವಿ ಮಾಡಿಕೊಂಡಿದ್ದರು. ಆದರೂ ಕೂಡ ಭ್ರಷ್ಟಾಚಾರ ಕೇಸ್ ದಾಖಲು ಆಗಿಲ್ಲ. ನಮ್ಮ ಒತ್ತಾಯ ಭ್ರಷ್ಟಾಚಾರ ಕೇಸ್ ದಾಖಲಾಗಬೇಕು. ಭ್ರಷ್ಟಾಚಾರ ಕೇಸ್ ಹಾಕಿದ್ರೆ 306 ಕೇಸ್ಗೆ ಹತ್ತು ವರ್ಷಗಳ ಶಿಕ್ಷೆ ಆಗುತ್ತದೆ. ಈ ನೆಲದ ನ್ಯಾಯದಂತೆ ಕೇಸ್ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.