Saturday, November 23, 2024

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನ

ಚಿಕ್ಕಬಳ್ಳಾಪುರ : ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ಅವರು ಇಂದು ಹೃದಯಾಘಾತದಿಂದ ನಿಧನರಾದ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಶ್ರೀರಾಮರೆಡ್ಡಿ ನಿಧನಕ್ಕೆ ಅಪಾರ ಪ್ರಮಾಣದ ಬೆಂಬಲಿಗರ ಸಂತಾಪ ಸೂಚಿಸಿದ್ದಾರೆ.

ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ‌ ಚಿಂತಾಮಣಿ ತಾಲ್ಲೂಕಿನ ಗುಂಟಿಪಲ್ಲಿ(ಬೈರೇಬಂಡ) ಗ್ರಾಮದವರು. ಸಿಪಿಐಎಂ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿರಾಗಿದ್ದರು. ಬಳಿಕ ಪಕ್ಷದಿಂದ ಉಚ್ಚಾಟಿತರಾದ‌ ಮೇಲೆ ಪ್ರಜಾ ಸಂಘರ್ಷ ಸಮಿತಿ ಪಕ್ಷ ಸ್ಥಾಪನೆ ಮಾಡಿದ್ದರು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಎರಡು ಭಾರಿ ಶಾಸಕರಾಗಿದ್ದರು. 1994 ಮತ್ತು 2004ರಲ್ಲಿ ಸಿಪಿಐಎಂ ಪಕ್ಷದಿಂದ ಶಾಸಕರಾಗಿ ಆಯ್ಕೆರಾಗಿದ್ದರು. 1984ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಅಂದಿನ ಸಿಪಿಐಎಂ ಶಾಸಕರಾಗಿ ನೇಮಕರಾಗಿದ್ದರು. ಅಪ್ಪಸಾಮಿರೆಡ್ಡಿ ಅನಾರೋಗ್ಯ ಕಾರಣ ಶ್ರೀರಾಮರೆಡ್ಡಿಗೆ ಪಕ್ಷದ ಉಸ್ತುವಾರಿ ನೀಡಲಾಗಿತ್ತು.
2 ಬಾರಿ ಗೆದ್ದು, 7 ಬಾರಿ ಸೋತಿದ್ದರು.

ಬಿಎ ಎಲ್ ಎಲ್ ಬಿ ಪದವೀಧರರಾಗಿದ್ದ ಇವರು 1972 ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಉಳುವವನೇ ಭೂ ಒಡೆಯ ಹೋರಾಟದಲ್ಲಿ ಭಾಗಿಯಾಗಿ ಜೈಲಿಗೆ ಹೋಗಿದ್ದರು. 1976 ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ. 1980 ದಲಿತ ಪರ ಚಳುವಳಿ ಹೋರಾಟದಲ್ಲಿ ಕೂಡ ಪಾಲ್ಗೊಂಡಿದ್ದರು.

ಶಾಶ್ವತ ನೀರಾವರಿ ಹೋರಾಟ ಆರಂಭಿಸಿದ್ದೇ ಇವರು, ಪ್ಲೋರೈಡ್ ಸಮಸ್ಯೆಯಿಂದ‌ ಬಾಗೇಪಲ್ಲಿ ಜನ ಬಳಲುತ್ತಿದ್ದರಿಂದ ಶುದ್ದ ಕುಡಿಯುವ ನೀರಿಗಾಗಿ ಹೋರಾಟದ ಫಲವಾಗಿ ಬಾಗೇಪಲ್ಲಿ ತಾಲ್ಲೂಕಿನ ಪರಗೋಡು, ವಂಡಮಾನ್ ಡ್ಯಾಂಗಳ ನಿರ್ಮಾಣವಾಯಿತು.

ಇನ್ನು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಕಾಲೇಜುಗಳ ಆರಂಭ ಮಾಡಿ ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿದ್ದರು.

RELATED ARTICLES

Related Articles

TRENDING ARTICLES