Sunday, November 3, 2024

‘ಕೈ’ ನಾಯಕರಿಂದ ಸಿಎಂ ಮನೆಗೆ ಮುತ್ತಿಗೆ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ರೇಸ್ ಕೋರ್ಸ್ ನಲ್ಲಿರುವ ಸಿಎಂ ಬೊಮ್ಮಾಯಿ ಮನೆಗೆ ಇಂದು (ಗುರುವಾರ ) ಮುತ್ತಿಗೆ ಹಾಕಲಿದ್ದೇವೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ನೇತೃತ್ವದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ  ಕಾಂಗ್ರೆಸ್ ಭವನದಿಂದ ರೇಸ್ ಕೋರ್ಸ್ ಬಳಿ‌ ಇರುವ ಸಿಎಂ ನಿವಾಸಕ್ಕೆ ಕಾಲ್ನಡಿಗೆ ಮೂಲಕ ಆಗಮಿಸಿ ಕಾರ್ಯಕರ್ತರ ಜೊತೆಗೆ ಮುತ್ತಿಗೆ ಹಾಕಲಿದ್ದಾರೆ.  ಶುಕ್ರವಾರದಿಂದ ವಿವಿಧ ತಂಡಗಳಾಗಿ ತೆರಳಿ ಐದು ದಿನಗಳ ಕಾಲ ಎಲ್ಲ ಜಿಲ್ಲೆಗಳಿಗೆ ಹೋಗಿ ಸರ್ಕಾರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದರು.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಮೊದಲು ಅವರು ಬಂಧನ ಆಗಬೇಕು. ಅಷ್ಟೇ ಅಲ್ಲದೆ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.

ಅದುವಲ್ಲದೆ ಈ ಪ್ರಕರಣದಿಂದ ಸಿಎಂ ಮತ್ತು ಬಿಜೆಪಿ ಹೈಕಮಾಂಡ್​​ಗೆ ಕಾಂಗ್ರೆಸ್ ಒತ್ತಡ ಹೆರಳಿದೆ. ಮತ್ತು ಈಶ್ವರಪ್ಪ ತಲೆ ದಂಡಕ್ಕೆ ಕಾಂಗ್ರೆಸ್ ಪಟ್ಟು ಹಿಡಿಯಲಿದೆ. ಒಟ್ಟಿನಲ್ಲಿ ಇಂದು ಸಿಎಂ ಮನೆ ಮುಂದೆ ಹೈಡ್ರಾಮಾ ಕ್ರಿಯೆಟ್ ಆಗುವ ಸಾಧ್ಯತೆ ಇದೆ.

 

RELATED ARTICLES

Related Articles

TRENDING ARTICLES