ಮೈಸೂರು: ರಾಜೀನಾಮೆ ಪಡೆಯದೇ ಸಚಿವ ಸ್ಥಾನದಲ್ಲಿ ಮುಂದುವರೆದರೆ ಸಾಕ್ಷಿ ನಾಶ ಸಂಭವ ಇರುತ್ತದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಹೇಳಿದರು.
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ವಿಚಾರ ಹಿನ್ನಲೆ ಸುದ್ದಿಗಾರದೊಂದಿಗೆ ಮಾತನಾಡಿದ ಅವರು ಸಚಿವ ಈಶ್ವರಪ್ಪ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಸಚಿವ ಈಶ್ವರಪ್ಪನವರಿಂದ ರಾಜೀನಾಮೆ ಪಡೆಯಬೇಕು ಎಂದು ಕಿಡಿಕಾರಿದರು.
ಇನ್ನು ಒಮ್ಮ ಮಂತ್ರಿ ಮೇಲೆ ಎಫ್ ಐ ಆರ್ ದಾಖಲಾದ್ರೆ, ಅಂತಹ ಆರೋಪ ಹೊತ್ತವರನ್ನು ಮುಂದುವರೆಸಿರೋ ನಿದರ್ಶನವೇ ಇಲ್ಲ. ಮತ್ತು ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣ ಅವರು ಇದು 40% ಕಮಿಷನ್ ಸರ್ಕಾರ ಅಂತಾ ಆರೋಪ ಮಾಡಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದರು ಆದರೂ ಇದು ಯಾವುದಕ್ಕೂ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ, ಈಗ ಸಂತೋಷ್ ಆತ್ಮಹತ್ಯೆ ಇದಕ್ಕೊಂದು ಜೀವಂತ ಉದಾಹರಣೆ ಎಂದರು.
ಇದೊಂದು ಭ್ರಷ್ಟ ಸರ್ಕಾರ ಅನ್ನೋದು ಸಾಬೀತು ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾನು ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ ಅಂದಿದ್ದರು. ಆದರೆ ಈಗ ಅವರೇ ಮೌನಕ್ಕೆ ಶರಣಾಗಿದ್ದಾರೆ. ಇದರ ಅರ್ಥ ಏನು..? ಕೂಡಲೇ ಈಶ್ವರಪ್ಪ ನೈತಿಕತೆ ಹೊತ್ತು ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಲಿ ಎಂದು ಹೇಳಿದರು.
ಅದುವಲ್ಲದೇ ಗಣಪತಿ ಕೇಸ್ನಲ್ಲಿ ಎಫ್ ಐ ಆರ್ ಆಗುತ್ತಿದ್ದಂತೆ ಗೃಹ ಸಚಿವ ಜಾರ್ಜ್ ರಾಜೀನಾಮೆಯನ್ನು ಪಡೆಯಲಾಗಿತ್ತು. ಕ್ಲೀನ್ ಚಿಟ್ ಸಿಕ್ಕ ಬಳಿಕ ಮತ್ತೆ ಅವರು ಮಂತ್ರಿಯಾಗಿದ್ದಾರೆ ಎಂದು ಆರ್. ಧೃವನಾರಾಯಣ್ ಅವರು ತಿಳಿಸಿದರು.