ಬೆಂಗಳೂರು : ರಾಜ್ಯ ಸರ್ಕಾರದ ಮೇಲೆ ಒಂದು ವರ್ಷದಿಂದ 40 % ಕಮಿಷನ್ ಆರೋಪವಿರುವ ಭ್ರಷ್ಟಾಚಾರದ ಬಗ್ಗೆ ಸಿಎಂ ಬೊಮ್ಮಾಯಿ ಯಾಕೆ ಬಾಯಿ ಬಿಚ್ಚುತ್ತಿಲ್ಲ ಎಂದು ವಿಪಕ್ಷಗಳು ಕಿಡಿಕಾಡಿದ್ದಾರೆ.
ಕಳೆದ ಒಂದು ವರ್ಷದಿಂದ ಸರ್ಕಾರದ ಬಗ್ಗೆ ಇರುವ 40% ಕಮಿಷನ್ ಆರೋಪದ ಬಗ್ಗೆ ಮುಖ್ಯಮಂತ್ರಿಗೆ ಗೊತ್ತಿದೆ ಆದರೂ ತುಟಿ ಬಿಚ್ಚುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಗುತ್ತಿಗೆದಾರ ಸಂಘದಿಂದ 40% ಕಮಿಷನ್ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದು, ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇತ್ರತ್ವದಲ್ಲಿ ವಸತಿ, ಜಲಸಂಪನ್ಮೂಲ,ಗ್ರಾಮೀಣಾಭಿವೃದ್ಧಿ,ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿತ್ತು ಆದರೆ ಸರ್ಕಾರಿ ಟೆಂಡರ್ನಲ್ಲಿ ಕಮಿಷನ್ ವ್ಯವಹಾರ ನಡೆದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ವರದಿ ಕೊಟ್ಟಿದ್ದರು.
ಜಲಸಂಪನ್ಮೂಲ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸಾವಿರಾರು ಕೋಟಿ ಅಕ್ರಮದ ಆರೋಪ
ಐಟಿ ಇಲಾಖೆ ಅಧಿಕಾರಿಗಳಿಂದ ಬ್ರೋಕರ್, ಗುತ್ತಿಗೆದಾರರು,ಇಂಜಿನಿಯರ್ ಮೇಲೆ ದಾಳಿಯಾಗಿತ್ತು. ಹಾಗೇ ಬಿಬಿಎಂಪಿ ,ಬಿಡಿಎ ಮೇಲೆ 200 ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿಯಾಗಿತ್ತು. ಒಟ್ಟು ಸಾವಿರಾರು ಕೋಟಿ ರೂ ಅಕ್ರಮ ಗಳಿಕೆ ಪತ್ತೆಯಾಗಿತ್ತು. ಆದ್ರೂ ಕೂಡ ಸರ್ಕಾರ ಯಾವುದೇ ಭ್ರಷ್ಟಾಚಾರ ಆಗಿಲ್ಲ ಅಂತಿದೆ. ಕಮಿಷನ್ ವ್ಯವಹಾರನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಸಬೂಬು ಹೇಳೋದು ಬಿಟ್ಟು ಕ್ರಮ ಕೈಗೊಂಡಿದರೆ ಆತ್ಮಹತ್ಯೆ ತಪ್ಪುತ್ತಿತ್ತು ಎಂದು ಸರ್ಕಾರದ ನಡೆಗೆ ವಿಪಕ್ಷಗಳ ಕಿಡಿಕಾರಿದ್ದಾರೆ.