ಬೆಂಗಳೂರಲ್ಲಿ : ಮೈತ್ರಿ ಸರ್ಕಾರದ ಅತಂತ್ರ ಸ್ಥಿತಿ ಬಗ್ಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತೆ ವಿಷಾದದ ರಾಗ ತೆಗೆದಿದ್ದಾರೆ.
ಗುರುವಾರ ಸಿಎಂ ಮತ್ತೊಮ್ಮೆ ನಿರಾಸೆ ಮಾತುಗಳನ್ನಾಡಿದ್ದಾರೆ. ‘ಈ ಸರ್ಕಾರದಲ್ಲಿ ನಾನು ಇರೋದು ನನ್ನ ದುರಾದೃಷ್ಟ’ ಅಂತ ಹೇಳಿದ್ದಾರೆ!
ನಂಗೆ ನಿರೀಕ್ಷೆಯಂತೆ ಕಾರ್ಯಕ್ರಮ ಕೊಡುವ ಆಸೆ ಇದೆ. ಆದ್ರೆ, ಅದನ್ನು ಕೊಡೋಕೆ ಆಗ್ತಿಲ್ಲ ಅಂತ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ರು.
ಈ ಹಿಂದೆ 20 ತಿಂಗಳು ಅಧಿಕಾರ ಇತ್ತು. ಅವಾಗಲೂ ಕೂಡ ಸರ್ಕಾರ ಬೀಳುತ್ತೆ ಅಂತಾ ಲೆಕ್ಕ ಹಾಕ್ತಿದ್ರು. ಈಗಲೂ ಸರ್ಕಾರ ಉರುಳೇ ಹೋಯ್ತು ಅಂತಿದ್ದಾರೆ.ಈ ರಾಜಕೀಯ ಧಾರಾವಾಹಿ ನೋಡಿ ಜನ ಹೌದೇನೋ ಅಂದುಕೊಳ್ತಿದ್ದಾರೆ. ಆದರೆ ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ ಆಂತ ಹೇಳಿದ್ರು.
‘ದೋಸ್ತಿ’ ಬಗ್ಗೆ ಸಿಎಂ ಅಸಮಧಾನ -ನಾನು ಈ ಸರ್ಕಾರಲ್ಲಿರೋದು ‘ದುರಾದೃಷ್ಟ’ ಅಂದ್ರು ಕುಮಾರಸ್ವಾಮಿ!
TRENDING ARTICLES