Thursday, November 14, 2024

ಪ್ರಯಾಣಿಕರಿಗೆ ಡಿಜಿಟಲ್ ಪಾಸ್, ನಿರ್ವಾಹಕರಿಗೆ ಗೇಟ್ ಪಾಸ್

ಬೆಂಗಳೂರು: ಬಿಎಂಟಿಸಿ ನಿಗಮ ಪೇಪರ್ ಲೆಸ್ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನು ಪರಿಚಯಿಸುತ್ತಿದ್ದು, ಇನ್ಮುಂದೆ ಪಾಸ್ ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಪಾಸ್ ಖರೀದಿಸುವ ಬದಲಾಗಿ ಮೊಬೈಲ್‌ನಲ್ಲೇ ಪಾಸ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ನೂತನ‌ ಆ್ಯಪ್ ಬಿಡುಗಡೆ ಕಾರ್ಯಕ್ರಮ‌ ನಡೆದಿದ್ದು, ಬಿಎಂಟಿಸಿ ಎಂಡಿ ಅನ್ಬುಕ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದ್ರು. ಬಿಎಂಟಿಸಿ ಪ್ರಯಾಣಿಕರು (ಟುಮೊಕ್ ) ಆ್ಯಪ್ ಇನ್ಸ್‌ಟಾಲ್‌ ಮಾಡಿ ಕೆಲ ಮಾಹಿತಿ ದಾಖಲಿಸಬೇಕು.‌ ತಮಗೆ ಅವಶ್ಯಕತೆ ಇರುವ ದೈನಿಕ, ವಾರ, ಮಾಸಿಕ ಪಾಸನ್ನ ಸೆಲೆಕ್ಟ್ ಮಾಡಿ, ಆನ್ ಲೈನ್ ಪೇಮೆಂಟ್ ಮಾಡಿ ಪಾಸನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು.‌ ಪ್ರತಿ ಪಾಸ್‌ಗೆ unique ID ಹಾಗೂ Dynamic QR ಕೋಡ್ ಇರಲಿದ್ದು ಡೌನ್‌ಲೋಡ್ ಆದ ಪಾಸ್ ಬಳಸಿ‌ ಪ್ರಯಾಣಿಸಬಹುದು.‌

ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವೇನೋ ಹೊಸ ವ್ಯವಸ್ಥೆ ಜಾರಿ ಮಾಡಿದೆ. ಆದ್ರೆ ಈ ವ್ಯವಸ್ಥೆಯಿಂದಾಗಿ ಕಂಡಕ್ಟರ್ ಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.‌ಇಷ್ಟೂ ದಿನ ಬಸ್ ಪಾಸನ್ನ ಕಂಡಕ್ಟರ್ ಬಳಿ ಅಥವಾ ಕೌಂಟರ್‌ಗಳಲ್ಲಿ ಪಡೆಯಬಹುದಿತ್ತು. ಆದ್ರೆ, ಈಗ ಡಿಜಿಟಲ್ ಆಗಿರೋದ್ರಿಂದ‌ ಕಂಡಕ್ಟರ್‌ಗೆ ಹೆಚ್ಚಿನ ಕೆಲಸ ಇರೋದಿಲ್ಲ.‌ಎಲೆಕ್ಟ್ರಿಕ್ ಬಸ್‌ಗಳಿಗೆ ನಿಗಮ‌ ಈಗಾಗಲೇ ಖಾಸಗಿ ಕಂಪನಿಯ ಚಾಲಕರನ್ನ ನೇಮಕ ಮಾಡಿದೆ. ಇದು BMTC ಚಾಲಕರ ಕೆಲಸಕ್ಕೆ‌ ಕುತ್ತು ತಂದಿದೆ.‌ ಈಗ ಪಾಸ್ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ಮಾಡಿದ್ರೂ ಅಚ್ಚರಿ ಪಡಬೇಕಿಲ್ಲ.

ಬಿಎಂಟಿಸಿ ನಿಗಮ ತನ್ನ ಅಭಿವೃದ್ಧಿಗೆ ಹಲವು ಯೋಜನೆ ಜಾರಿ ಮಾಡುತ್ತಿದೆ.‌ಆದ್ರೆ, ಇದು ಸಾರಿಗೆ ನೌಕರರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಒತ್ತು ನೀಡುವ ನಿಗಮ ನೌಕರರ ಹಿತದೃಷ್ಟಿ ಮರೆಯದಿದ್ರೆ ಅಷ್ಟೇ ಸಾಕು.

RELATED ARTICLES

Related Articles

TRENDING ARTICLES