ಕಲಬುರಗಿ : ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಪ್ರೀಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವುಗೊಳಿಸಲು ಹಿಂದೂ ಸಂಘಟನೆಗಳ ಅಭಯಾನ ವಿಚಾರ ಹಿನ್ನಲೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಇಲ್ಲಿ ಭಜರಂಗದಳದವರೇ ಸಿಎಂ ಆಗಿದ್ದಾರೆ ಅಂತ ಅನಿಸುತ್ತಿದೆ. ಸರ್ಕಾರ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಇನ್ನು ಹಲಾಲ್ ಸರ್ಟಿಫಿಕೇಟ್ ಪತಂಜಲಿ, ಅಂದಾನಿ ತೆಗೆದುಕೊಂಡಿಲ್ವಾ ? ಹಾಗೂ ಇಸ್ಲಾಮಿಕ್ ಕಂಟ್ರಿಯಿಂದ ಬರುವ ಇಂಧನ ಪೂರೈಕೆಯನ್ನು ಸ್ಥಗಿತ ಮಾಡಲಿ. ಸರ್ಕಾರವು ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಫೆಲ್ಯೂವರ್ ಆದಾಗ ನ್ಯಾಯಾಂಗ ಆದೇಶ ಜಾರಿಯಾಗುತ್ತದೆ. ಈಗಿನ ಸರ್ಕಾರ ದಮ್ಮಿಲ್ಲದ ಕೆಲಸಕ್ಕೆ ಬಾರದ ವಿಚಾರಗಳನ್ನ ತಂದಿಟ್ಟಿದ್ದಾರೆ. ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಎಲ್ಲರೂ ಸೂತ್ರದ ಗೊಂಬೆಯಾಗಿದ್ದಾರೆ, ಅವರಿಗೆ ಮಾತು ಬಂದರೂ ಮೂಕ ಬಸವ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲದರಲ್ಲೂ ನ್ಯಾಯಾಂಗ ಮಧ್ಯಸ್ಥಿಕೆ ವಹಿಸಬೇಕಾದರೆ ಕಾರ್ಯಾಂಗ, ಶಾಸಕಾಂಗ ಯಾಕೆ ಬೇಕು? ಮಸೀದಿಗಳ ಮೇಲಿನ ಸೌಂಡ್ ಕಂಟ್ರೋಲ್ ಆದೇಶ ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ. ಎಲ್ಲಾ ಧರ್ಮ ಗುರುಗಳಿಗೆ ಕರೆಯಿಸಿ ಸಮಜಾಯಿಷಿ ನಿಡೋಕೆ ಸಚಿವ ಈಶ್ವರಪ್ಪ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಒಂದೊಳ್ಳೆ ಸಲಹೆ ನೀಡಿದ್ದಾರೆ, ಅವರ ಹೇಳಿಕೆಗೆ ಸ್ವಾಗತ ಮಾಡುತ್ತೇನೆಂದು ಶಾಸಕ ಪ್ರೀಯಾಂಕ್ ಖರ್ಗೆ ಪ್ರತಿಕ್ರಿಯಿಸಿದರು.