ಚಿಲ್ಲರೆ ಬೀಳಿಸಿ ಪ್ರಾಧ್ಯಾಪಕಿಯ ವ್ಯಾನಿಟಿ ಬ್ಯಾಗ್ನಿಂದ 35 ಸಾವಿರ ರೂಪಾಯಿ ಕಳವು ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುತ್ತಿದ್ದ ಪ್ರಾಧ್ಯಾಪಕಿಯ ಹಣವನ್ನು ಚಾಲಾಕಿ ಕಳ್ಳಿಯರು ಕಳವು ಮಾಡಿದ್ದಾರೆ.
ಪ್ರಾಧ್ಯಾಪಕಿ ಬಿ.ಆರ್ ಹೇಮಲತಾ ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುತಿದ್ದರು. ಸಹ ಪ್ರಯಾಣಿಕರಂತೆ ನಟಿಸಿದ ಕಳ್ಳಿಯರು ಚಿಲ್ಲರೆ ಬೀಳಿಸಿ ಪ್ರಧ್ಯಾಪಕಿಯ ಗಮನ ಬೇರೆಡೆ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಗ್ನಲ್ಲಿದ್ದ 12 ಸಾವಿರ ರೂಪಾಯಿಯನ್ನು ಕಳವು ಮಾಡಿ ಎಟಿಎಂನಿಂದ 23 ಸಾವಿರ ರೂಪಾಯಿ ಎಗರಿಸಿದ್ದಾರೆ. ಈ ಕುರಿತು ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.