Wednesday, November 6, 2024

ಕೇಂದ್ರ ಸರ್ಕಾರಕ್ಕೆ ಶಾಕ್‌ ನೀಡಲು ಮುಂದಾದ ಕಾಂಗ್ರೆಸ್​

ಬೆಂಗಳೂರು : ಮೇಕೆದಾಟು ಪಾದಯಾತ್ರೆ ಬಳಿಕ ಕೈ ಪಡೆಗೆ ಬಿಜೆಪಿ ವಿರುದ್ದ ಹೋರಾಡಲು ದೊಡ್ಡ ಅಸ್ತ್ರ ಸಿಕ್ಕಿರಲಿಲ್ಲ.. ಹಿಜಾಬ್ ವಿಚಾರ,ಕಾಶ್ಮೀರಿ ಫೈಲ್ಸ್‌ ವಿಚಾರ ಬಿಜೆಪಿಗೆ ಹೆಚ್ಚು ಲಾಭವಾಯ್ತು. ಕೈ ಪಡೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲಾಗದೆ ಇಕ್ಕಟ್ಟಿಗೆ ಸಿಲುಕಿಕೊಂಡು ಪರದಾಡಿತ್ತು. ಇದಾದ ಬಳಿಕ ಬಿಟ್ ಕಾಯಿನ್ ವಿಚಾರವನ್ನು ಕಾಂಗ್ರೆಸ್‌ ಸದನದಲ್ಲಿ ಪ್ರಸ್ತಾಪಿಸಿತ್ತಾದ್ರೂ ಪಕ್ಷದ ಕೆಲವರು ಇದ್ರಲ್ಲಿ ಶಾಮೀಲಾಗಿರೋ ಗುಮಾನಿ ಇದೆ. ಹೀಗಾಗಿ ಈ ಅಸ್ತ್ರ ವನ್ನು ಕಾಂಗ್ರೆಸ್ ಕೈಬಿಟ್ಟಿತ್ತು. ಇದೀಗ ಬೆಲೆ ಏರಿಕೆ ಅಸ್ತ್ರ ಹಿಡಿದು ಬಿಜೆಪಿ ವಿರುದ್ಧ ಸೆಣೆಸಲು ಕಾಂಗ್ರೆಸ್ ಹೊರಟಿದೆ.

ಕಳೆದ ಕೆಲವು ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಸೆಂಚೂರಿ ಬಾರಿಸಿ ಮುನ್ನುಗ್ಗುತ್ತಿದೆ. ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ.. ಅಡುಗೆ ಸಿಲಿಂಡರ್‌ ಬೆಲೆಯೂ ಹೆಚ್ಚಳವಾಗಿ ಮನೆಮಂದಿಗೆಲ್ಲ ಬೆಲೆ ಏರಿಕೆ ಬರೆ ಬಿದ್ದಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗ್ತಿರೋದನ್ನ ಕಾಂಗ್ರೆಸ್ ಅಸ್ತ್ರವಾಗಿ ಬಳಸಲು ಹೊರಟಿದೆ. ಮಾರ್ಚ್ 31 ರಿಂದ ಏಪ್ರಿಲ್ 7 ತನಕ ಬೆಲೆ ಏರಿಕೆ ಹೋರಾಟ ಮಾಡಲಿದ್ದು, ಮಾರ್ಚ್ 31 ಕ್ಕೆ ಎಲ್‌ಪಿಜಿ ಸಿಲಿಂಡರ್‌ ಹೊರಹಾಕಿ, ಗಂಟೆ ಬಾರಿಸಿ ಹೋರಾಟ ನಡೆಸಲು ತಯಾರಿ ನಡೆದಿದೆ. ಏಪ್ರಿಲ್ 2 ರಿಂದ 4 ರ ವರೆಗೆ ಜನ, ಸಂಘ-ಸಂಸ್ಥೆಗಳೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಹೋರಾಟ ರೂಪಿಸಲಾಗಿದೆ. ಏ.7 ರಂದು ರಾಜಧಾನಿ ಬೆಂಗಳೂರಿನಲ್ಲಿ ಹೋರಾಟಕ್ಕೆ ಕೈ ಪಡೆ ಸಜ್ಜಾಗುತ್ತಿದೆ.

ಮೇಕೆದಾಟು ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿಗಿನ ಲಾಭ ತಂದುಕೊಡ್ತಾದ್ರೂ ಉಳಿದ ಅಸ್ತ್ರ ಹೆಚ್ಚೇನು ಪ್ರಯೋಜನಕ್ಕೆ ಬಂದಿಲ್ಲ. ಇದೀಗ ಬೆಲೆ ಏರಿಕೆ ಅಸ್ತ್ರವನ್ನು ಬಿಜೆಪಿ ವಿರುದ್ಧ ಪ್ರಯೋಗಿಸಲು ಕಾಂಗ್ರೆಸ್ ಸಜ್ಜಾಗಿದೆ.

RELATED ARTICLES

Related Articles

TRENDING ARTICLES