ಶಾಸಕ ರಮೇಶ್ ಜಾರಕಿ ಹೊಳಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಇವರು ಸೇರಿದಂತೆ 13 ಮಂದಿ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಪರ್ವ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿ ಹೊಳಿ ಅವರ ಜೊತೆಗೆ ಗಣೇಶ್ ಹುಕ್ಕೇರಿ, ಮಹೇಶ್ ಕುಮಠಹಳ್ಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಬಿಜಿಪಿ A ಮತ್ತು B ಎರಡು ಪ್ಲಾನ್ ಗಳನ್ನು ಮಾಡಿಕೊಂಡಿದ್ದು, ಪ್ಲಾನ್ ಎ ಪ್ರಕಾರ ರಮೇಶ್ ಜಾರಕಿ ಹೊಳಿ ಮತ್ತು ಟೀಮ್ ರಾಜೀನಾಮೆ ನೀಡುವುದು. ಪ್ಲಾನ್ ಬಿ ಪ್ರಕಾರ ರಮೇಶ್ ಜಾರಕಿ ಹೊಳಿ ನಾಯಕತ್ವ ಇಷ್ಟವಿಲ್ಲದ ಶಾಸಕರು ನೇರವಾಗಿ ಬಿಜೆಪಿಯನ್ನು ಸಂಪರ್ಕಿಸುವುದು ಎಂದು ತಿಳಿದುಬಂದಿದೆ. ಅತೃಪ್ತರು ಅಮಿತಾ ಶಾ ಸೂಚನೆಗೆ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಶಾಸಕ ಬಿ. ನಾಗೇಂದ್ರ ಅವರು ದೆಹಲಿಯಲ್ಲಿ ಅತೃಪ್ತ ಕೈ ಶಾಸಕರನ್ನು ಒಗ್ಗೂಡಿಸುತ್ತಿದ್ದು, ಕಾಂಗ್ರೆಸ್ ವರಿಷ್ಠರ ಕರೆ ಸ್ವೀಕರಿಸುತ್ತಿಲ್ಲವಂತೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೂಡ ದೆಹಲಿಯಲ್ಲಿದ್ದಾರೆ! ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ ಮೈತ್ರಿ ಸರ್ಕಾರ ಪತನ ಆಗುವ ಸಾಧ್ಯತೆ ಕಂಡುಬರುತ್ತಿದೆ.
ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಪರ್ವ..!? ಅಮಿತ್ ಶಾ ಸೂಚನೆಗೆ ಕಾಯ್ತಿದ್ದಾರಾ ಅತೃಪ್ತರು?
TRENDING ARTICLES