ಬೆಂಗಳೂರು : ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರ ಹಾಗೂ ಕುಲಪತಿಗಳ ಕಿತ್ತಾಟ ಮತ್ತೆ ಮುಂದುವರೆದಿದ್ದು, ಇಂದು ಕುಲಪತಿ ವೇಣುಗೋಪಾಲ್ ವಿರುದ್ದ ದೂರು ನೀಡಲು ಇಂದು ಸಿಂಡಿಕೇಟ್ ಸದಸ್ಯರ ರಾಜ್ಯಪಾಲರನ್ನ ಭೇಟಿ ಮಾಡಲಿದ್ದಾರೆ.
ಸಿಂಡಿಕೇಟ್ ಸಭೆಯಲ್ಲಿ ಬಹುಮತ ಇಲ್ಲದೇ ಇದ್ದರೂ ಕೂಡ ಕುಲಪತಿ ಕೆ.ಆರ್ ವೇಣುಗೋಪಾಲ್ 163 ನೇ ಸಿಂಡಿಕೇಟ್ ಸಭೆಯನ್ನ ಮುಂದೂಡಲ್ಪಟ್ಟಿದ್ದು, ಬಹುಮತ ಇಲ್ಲದೇ ಅನುಮೋದನೆಯನ್ನ ಪಡೆದು ಕೊಂಡಿರೋದು ಸಿಂಡಿಕೇಟ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿತ್ತು.
ವಿಶ್ವವಿದ್ಯಾಲಯದ ಕಾಯ್ದೆ 2000, ವಿ.ವಿಯ ಪರಿ ನಿಯಮಾವಳಿ ಹಾಗೂ ರಾಜ್ಯಪಾಲರ ಸಿಂಡಿಕೇಟ್ ಸಭೆಯ ಮಾರ್ಗ ಸೂಚಿಗಳನ್ನ ಗಾಳಿಗೆ ತೂರಿ 163 ನೇ ಸಿಂಡಿಕೇಟ್ ಕಾರ್ಯ ಸೂಚಿಗಳನ್ನ ಸಕ್ರ್ಯುಲೇಷನ್ ಮುಖಾಂತರ ವಿವಿ ಅನುಮೋದನೆ ಪಡೆದು ಕೊಂಡಿದೆ. ಇದರಿಂದ ಸರ್ಕಾರದ ನಾಮ ನಿರ್ದೇಶಿತ ಸಿಂಡಿಕೇಟ್ ಸದಸ್ಯರ ಕೆಂಗಣ್ಣಿಗೆ ವಿ.ಸಿ. ಕೆ.ಆರ್. ವೇಣು ಗೋಪಾಲ್ ಗುರಿಯಾಗಿದ್ದಾರೆ.
ಇದರಿಂದ 163 ನೇ ಸಿಂಡಿಕೇಟ್ ನಿರ್ಣಯವನ್ನ ಕೂಡಲೇ ಅನೂರ್ಜಿತ ಗೊಳಿಸಬೇಕು. ಅಷ್ಟೇ ಅಲ್ಲದೇ ಸಿಂಡಿಕೇಟ್ ಸಭೆಯಲ್ಲಿ ಭಾಗಿಯಾಗಿ ಪ್ರತಿಭಟನೆ ನಡೆಸಿದ ಡಿ. ಗ್ರೂಪ್ ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸಿ ರಾಜ್ಯ ಪಾಲರ ಭೇಟಿಗೆ ಇಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಮುಂದಾಗಿದ್ದಾರೆ.